ಇದು ಕಾಕನ ಕೋಟೆಯಲ್ಲ, ಕಮರ್ಷಿಯಲ್ ಕೋಟೆ!

By * ಚಿತ್ರಗುಪ್ತ

ಪ್ರಜ್ವಲ್ ಸಿನಿಮಾ ಅಂದ್ರೆ ಆ ಕಡೆ ಈ ಕಡೆ ನೋಡಿ ಆಕಳಿಸುತ್ತಿದ್ದ ಅವರ ಒಂದು ಕಾಲದ ಅಭಿಮಾನಿಗಳಿಗೆ ಶಾಕ್ ಕೊಡುತ್ತಾ ಹೋಗುತ್ತಾರೆ ನಿರ್ದೇಶಕ ಶ್ರೀನಿವಾಸ್ ರಾಜು. ಇದರಲ್ಲಿ ಏನೂ ಇಲ್ಲ ಎಂದುಕೊಂಡು ಸಿನಿಮಾ ನೋಡಲು ಹೋದವರಿಗೆ ಬಿಸಿ ಬಿಸಿ ನ್ಯೂಡಲ್ಲು ತಿನ್ನಿಸುತ್ತಾ ಹೋಗುತ್ತಾರೆ ಪ್ರಜ್ವಲ್ ಎಂಡ್ ಟೀಮ್!

ಇಡೀ ಚಿತ್ರವನ್ನು ಒಂದೇ ಫ್ಲೋನಲ್ಲಿ ನೋಡುತ್ತಾ ಹೋದರೆ ಇಷ್ಟವಾಗುತ್ತದೆ. ಈ ವರೆಗೆ ಪ್ರಜ್ವಲ್ ಗುಲಾಮ, ಕೆಂಚ, ಮಂಚ ಮತ್ತಿತರೆ ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ. ಆದರೆ, ಅದ್ಯಾವುದರಲ್ಲೂ ಈ ಮಟ್ಟದ ಫ್ರೆಷ್‌ನೆಸ್ ಇರಲಿಲ್ಲ. ಒಬ್ಬ ಆರ್ಡಿನರಿ ಮನುಷ್ಯ ಪೊಲೀಸ್ ಆಫಿಸರ್ ಆಗುವ ಮುನ್ನ ಕಠಾರಿ ಎಂಬ ಖಳನಿಂದ ಒಂದಷ್ಟು ಬಾಧೆ ಅನುಭವಿಸಿರುತ್ತಾನೆ.

ಕಾಲೇಜಿನಲ್ಲಿ ಓದುತ್ತಿರುವಾಗ ಇದ್ದ ಗತ್ತು ನೋಡಿ, ಎಂದಿನಂತೇ ಹೀರೋಯಿಣಿ ಅವನ ಹಿಂದೆ ಬಿದ್ದೇ ಬೀಳುತ್ತಾಳೆ. ಎಂದಿನಂತೇ ಲವ್ವು, ಡೌವು, ಹಾಡು ಡ್ಯಾನ್ಸು ಮಾಮೂಲಿ. ಮಜಾ ಎಂದರೆ, ಇಡೀ ಚಿತ್ರದಲ್ಲಿ ಹತ್ತು ನಿಮಿಷ ಬೋರಾಗುತ್ತದೆ ಎನ್ನುವುದನ್ನು ಹೊರತಾಗಿ 'ಕೋಟೆ' ಒಂದು ಹಂತದ ವರೆಗೆ ಓಕೆ ಸಾರ್ ಓಕೆ!

ಪ್ರಜ್ವಲ್ ಒಂದಷ್ಟು ಪಳಗಿದ್ದಾರೆ. ಡೈಲಾಗ್ ಡಿಲೆವರಿಯಿಂದ ಹಿಡಿದು, ಹೊಡೆದಾಟ, ತುಂಟಾಟ ಎಲ್ಲಾ ವಿಷಯದಲ್ಲೂ ದರ್ಶನ್‌ಗಿಂತ ಯಕ್ವಾ, ಸುದೀಪ್‌ಗಿಂತಾ ತಕ್ವಾ...ನಾಯಕಿ ಡಿಂಪಲ್ ಕುಣಿದಿದ್ದೇ ಡ್ಯಾನ್ಸು, ಕೊಟ್ಟಿದ್ದೇ ಫೋಸು. ಅಭಿನಯವೊಂದನ್ನು ಬಿಟ್ಟು ಉಳಿದ ಅರವತ್ತು ಮೂರು ವಿದ್ಯೆಯೂ ಡಿಂಪಲ್‌ಗೆ ಗೊತ್ತು. ಪ್ರಜ್ವಲ್ ಜೊತೆ ಬೀಚಲ್ಲಿ ಕುಣಿಯುತ್ತಿದ್ದರೆ ಅಲೆಗಳೇ ಹುಚ್ಚೆದ್ದು ಹಾರುತ್ತವೆ!

ಇನ್ನೊಬ್ಬ ನಾಯಕಿ ಗಾಯತ್ರಿಗೆ ಕಾಲಿಗೆ ಗಾಯ ಆಗಿ, ಕುಂಟುತ್ತಿದ್ದರೂ ನಟನೆಯಲ್ಲಿ ಕುಂಟಾಬಿಲ್ಲೆ ಆಡುತ್ತಾರೆ. ಸಿಂಪಲ್ ಆಗಿ ನಟಿಸುವುದರಲ್ಲಿ ಇರುವ ತಾಕತ್ತು "ಡಿಂಪಲ್"ಗಿರಿಯಲ್ಲಿಲ್ಲ. ವಿಲನ್ ರವಿಶಂಕರ್ ಇಡೀ ಚಿತ್ರದ ಕೇಂದ್ರ ಸರಕಾರ. ಕಂಚಿನ ಕಂಠಕ್ಕೆ ಡಿಟಿಎಸ್ ಮಿಕ್ಸ್ ಮಾಡಿ, ಒಗಾಯಿಸುವ ಪ್ರತಿಯೊಂದು ಡೈಲಾಗ್‌ಗಳು ಪಂಚೋಪಂಚು. ಒಂದು ಆಂಗಲ್‌ನಲ್ಲಿ "ತಮ್ಮ"ಲ್ಲಿ ಸಾಯಿಕುಮಾರ್ ಹೋಲಿಕೆ ಇದೆ ಎನ್ನುವುದನ್ನು ನಿರೂಪಿಸುತ್ತಾ ಹೋಗುತ್ತಾರೆ. ಬಾಡಿ ಬಿಲ್ಡರ್ ಕರ್ನಾಟಕ ರವಿ ಪೊಲೀಸ್ ಪಾತ್ರ ಮಾಡುವುದಕ್ಕಿಂತ ಕಳ್ಳನಾಗಿ ಕಾಣಿಸಿಕೊಂಡರೆ ಚೆನ್ನಾಗಿರುತ್ತಿತ್ತು!

ಕತೆ ಹಳೆಯದಾದರೂ ಅದನ್ನು ಹೇಳಿರುವ ರೀತಿ ತಕ್ಕಮಟ್ಟಿಗೆ ನೆಮ್ಮದಿ ಕೊಡುತ್ತದೆ. ಒಂದಷ್ಟು ಹುಬ್ಬಳ್ಳಿ ಭಾಷೆಯ ಡೈಲಾಗ್‌ಗಳು ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಲಾಕ್ ಮಾಡುತ್ತದೆ. ರಘು ದೀಕ್ಷಿತ್ ಹಾಡುಗಳು ಸುಮಾರಾಗಿವೆ. ಐಟಂ ಸಾಂಗ್‌ನಲ್ಲಿ ಹುಳಿ ಹೆಂಡ ಕುಡಿದು ನೆಗಡಿ ಬಂದಿದೆ ಎಂಬ ಸಾಲು "ಸ್ಟ್ರಾಂಗ್" ಆಗಿದೆ.

ಮೊದಲಾರ್ಧದ ಗುಣಮಟ್ಟ ಕಳಪೆ ಎನಿಸಿದರೂ ವೇಗ ಕಂಡುಕೊಂಡಿದ್ದಾರೆ ಶ್ರೀನಿವಾಸ್ ರಾಜ್. ಅವರ ಹಿಂದಿನ "ಸಂಗಾತಿ ಮತ್ತು ನನ್ನವನು" ಚಿತ್ರಗಳಿಗೆ ಹೋಲಿಸಿದರೆ "ಕೋಟೆ" ಕಟ್ಟಿದವರು ಅವರೇನಾ ಎಂಬ ಅನುಮಾನ ಕಾಡುತ್ತದೆ.ಒಟ್ಟಾರೆ ಇದು ಕಮರ್ಷಿಯಲ್ ಕೋಟೆ. ಒಳಗೆ ಹೋಗುವವರು ಮಾತ್ರ ಕೊಂಚ ಹುಷಾರಾಗಿ ಹೆಜ್ಜೆ ಇಡಬೇಕು. ಇಡೀ ಫ್ಯಾಮಿಲಿ ಬಂದರೆ ಭದ್ರಕೋಟೆಯ ಹೊಡಿ ಬಡಿ ಬಾಗಿಲು ಮುಚ್ಚಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ!

More from Filmibeat

English summary
Here is the review of Kannada film Kote. The movie is produced by Jack Manju and directed by Sreenivasa Raju.It is not a Kakana Kote but it is an commercial Kote says the author. Prajwal Devraj and Dimple are in lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X