»   » ಖಾಲಿಯಾದ ಮಲಯಾಳಿ ಬಾಬು, ದಿವಾಳಿಯಾದ ಉಪೇಂದ್ರ, ತಿರುಪತಿ ದಾರಿಯಲ್ಲಿ ರಾಮು

ಖಾಲಿಯಾದ ಮಲಯಾಳಿ ಬಾಬು, ದಿವಾಳಿಯಾದ ಉಪೇಂದ್ರ, ತಿರುಪತಿ ದಾರಿಯಲ್ಲಿ ರಾಮು

Posted By:
Subscribe to Filmibeat Kannada

‘ಹಾಲಿವುಡ್‌’ ಗೆ ದೊಡ್ಡ ಮೊತ್ತದ ಹಣ ಖರ್ಚಾಗಿರುವುದಲ್ಲಿ ಸಂದೇಹವೇ ಇಲ್ಲ. ಕೋಟಿ ನಿರ್ಮಾಪಕ ರಾಮು, ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕ್ರಿಯಾಶೀಲ ನಿರ್ದೇಶಕ ದಿನೇಶ್‌ ಬಾಬು - ತ್ರಿಮೂರ್ತಿಗಳ ಸಂಗಮದಿಂದ ಜನ ನಿರೀಕ್ಷಿಸಿದ್ದು ಒಂದು ಒಳ್ಳೆಯ ಚಿತ್ರವನ್ನೇ.

ಉಪೇಂದ್ರ ಅವರೇ ಬರೆದಿರುವ ಈ ಚಿತ್ರದ ಕಥೆಯಲ್ಲಿ ಹೇಳಿಕೊಳ್ಳುವಂಥ ವಿಶೇಷತೆಯೂ ಇಲ್ಲ. ಮೂವರು ಉಪೇಂದ್ರರಲ್ಲಿ ಮೊದಲನೆಯವನು ಪುಕ್ಕಲ, ಪ್ರಿಯತಮೆಯ ಪ್ರೀತಿಯನ್ನು ಗೆಲ್ಲುವುದೇ ಅವನ ಜೀವನದ ಗುರಿ. ಇನ್ನೊಬ್ಬ ಮಹತ್ವಾಕಾಂಕ್ಷಿ. ಹಾಲಿವುಡ್‌ನಲ್ಲಿ ಒಂದು ಚಿತ್ರ ನಿರ್ಮಿಸಿ ಆಸ್ಕರ್‌ ಪ್ರಶಸ್ತಿ ಗೆಲ್ಲುವುದವನ ಜೀವನದ ಗುರಿ. ಈ ನಿರ್ದೇಶಕನ ಜೊತೆಯಲ್ಲಿಯೇ ನಾಯಕಿಯ ಒಡನಾಟ. ಪ್ರಿಯತಮೆಯ ಮನ ಗೆಲ್ಲುವುದಕ್ಕಾಗಿ ಮೊದಲನೆಯ ಉಪೇಂದ್ರ ತನ್ನ ಬಾಸ್‌ನ (ವಿಜ್ಞಾನಿ ಪಾತ್ರದಲ್ಲಿ ಅನಂತನಾಗ್‌) ಸಹಾಯ ಕೇಳುತ್ತಾನೆ. ಆಗ ಬಾಸ್‌ ಉಪ್ಪಿ ತದ್ರೂಪಿ ಯಂತ್ರಮಾನವನನ್ನು (Robot) ಸೃಷ್ಟಿಸುತ್ತಾನೆ. ಇದು ‘ಹಾಲಿವುಡ್‌’ನಲ್ಲಿ ಉಪೇಂದ್ರರ ಮೂರನೇ ಅವತಾರ. ಇದರಿಂದಾಗಿ ಎಲ್ಲ ಕಡೆ ಗೊಂದಲ ಶುರುವಾಗುತ್ತದೆ. ನಾಯಕಿ ಹಾಗೂ ಯಂತ್ರಮಾನವ ಉಪ್ಪಿ ಖಳನಾಯಕರೊಂದಿಗೆ ಹೋರಾಡುವಾಗ ಉಪ್ಪಿ (ಯಂತ್ರಮಾನವ )ವಿದ್ಯುತ್‌ ಸಂಪರ್ಕಕ್ಕೆ ಬಂದು ನಾಶಗೊಳ್ಳುತ್ತಾನೆ. ಮೇಲುಕೋಟೆ ಸೀನುವಿನ ಅಭಿನಯ(?) ಎಷ್ಟು ಚೆನ್ನಾಗಿದೆ ಎಂದರೆ, ಅನೇಕ ವೇಳೆ ಎದುರಿನ ಪಾತ್ರಗಳು ಮಂಕಾಗುತ್ತವೆ. (ಕಂಠದಾನ ಮಾಡಿರುವುದು ರಮೇಶ ಭಟ್‌).

ಚಿತ್ರದಲ್ಲಿ ಉಪೇಂದ್ರರ ಎಲ್ಲಾ ಮುಖಗಳಿದ್ದು, ಅವರು ಯಾವ ಮಾನಸಿಕ ಸಂದರ್ಭದಲ್ಲಿ ಹೇಗೆ ಕಾಣುತ್ತಾರೆಂದು ಅಧ್ಯಯನ ಮಾಡಲಿಕ್ಕೆ ‘ಹಾಲಿವುಡ್‌’ ಉತ್ತಮ ಚಿತ್ರ. ಫೋಟೊಗ್ರಫಿ ಈ ಚಿತ್ರದ ಹೈಲೈಟ್‌. ನಾಯಕಿಯಾಗಿ ನಟಿಸಿರುವ ಫೆಲಿಸಿಟಿ ಎಂಬ ವಿದೇಶಿ ಚೆಲುವೆ ಅಭಿನಯದ ಬಗ್ಗೆ ಹೇಳುವುದು ಬೇಡ. ಅನಂತನಾಗ್‌ ಪಾತ್ರಕ್ಕೆ ಅಂಥ ಪ್ರಾಮುಖ್ಯತೆಯೇನೂ ಇಲ್ಲ.

‘ಹಾಲಿವುಡ್‌’ ನೋಡುವಾಗ, ಆಗಾಗ ಈ ಚಿತ್ರವನ್ನು ಪ್ರವಾಸೋದ್ಯಮ ಇಲಾಖೆಯವರಿಗಾಗಿಯೇ ಮಾಡಿದ್ದಾರೇನೋ ಎಂದು ವೀಕ್ಷಕನಿಗೆ ಅನ್ನಿಸುವುದು ಸಹಜ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada