twitter
    For Quick Alerts
    ALLOW NOTIFICATIONS  
    For Daily Alerts

    ನಂಜನಗೂಡು ನಂಜುಂಡ ಚಿತ್ರ ವಿಮರ್ಶೆ

    By Mahesh
    |

    ಹೆಂಡತಿಯ ಮೇಲೆ ಅನವಶ್ಯಕ ಅನುಮಾನ ಪಡುವುದರಿಂದ ಏನೆಲ್ಲ 'ಗಂಡಾಂತರ'ಆಗುತ್ತದೆ ಎಂದು ಎಲ್ಲರಿಗೂ ಗೊತ್ತು. ಎಲ್ಲದಕ್ಕೂ ಮದ್ದಿದೆ, ಆದರೆ ಅನುಮಾನ ಎಂಬ ಪಿಶಾಚಿಗೆ ಔಷಧ ವಿಲ್ಲ. ಅಂಥದ್ದೇ ಅನುಮಾನ ಪಡುವ ಒಬ್ಬ ಯಜಮಾನನ ಕತೆಯೇ ನಂಜನಗೂಡು ನಂಜುಂಡ.

    ಇಡೀ ಚಿತ್ರ ಬೋರ್ಗಲ್ಲ ಮೇಲೆ ನೀರು ಸುರಿದಂತೆ. ಕತೆ ಎಲ್ಲಿಂದಲೋ ಹುಟ್ಟಿ ಇನ್ನೆಲ್ಲೋ ಮಧ್ಯಂತರಗೊಂಡು ಮತ್ತೆಲ್ಲೋ ಲಿಂಗೈಕ್ಯವಾಗುತ್ತದೆ. ಈ ನಡುವೆ ಪ್ರೇಕ್ಷಕನಿಗೆ ನಿಜವಾಗಿಯೂ ನಂಜುಂಡ ಅನುಭವ. ನಿರ್ದೇಶಕ ಶ್ರೀನಿವಾಸ್ ಪ್ರಸಾದ್ ಒಂದೊಳ್ಳೆ ಕತೆಯನ್ನು ರಿಮೇಕ್ ಮಾಡುವಲ್ಲೂ ಸೋತಿದ್ದಾರೆ.

    ಇಡೀ ಚಿತ್ರದ ಒಂದೇ ಒಂದು ಸ್ಪೆಷಾಲಿಟಿ-ರವಿಶಂಕರ್ ನಟನೆ. ಸಿಲ್ಲಿಲಲ್ಲಿಯಲ್ಲಿ ಮನೆಮಂದಿಯನ್ನು ಹೇಗೆ ನಿರಂತರವಾಗಿ ನಗಿಸುತ್ತಿದ್ದರೋ ಇಲ್ಲಿ ಅದಕ್ಕಿಂತ ಹತ್ತು ಪಟ್ಟು ಮಜಾ ಕೊಡುತ್ತಾರೆ. ಶ್ರದ್ಧೆಯಿಟ್ಟು ನಟಿಸುವ ಮೂಲಕ ಅಚ್ಚರಿ ಮೂಡಿಸುತ್ತಾರೆ. ಸೀರಿಯಸ್ ಆಗಿದ್ದುಕೊಂಡೇ ನಗಿಸುತ್ತಾರೆ. ಹಾಸ್ಯದ ಅಲೆಯನ್ನು ಸುನಾಮಿ ರೂಪದಲ್ಲಿ ಏಳಿಸುತ್ತಾರೆ.

    ಒಟ್ಟಾರೆ ರವಿಶಂಕರ್ ಕನ್ನಡ ಚಿತ್ರರಂಗಕ್ಕೆ ಮುಂದೊಂದು ದಿನ ದೊಡ್ಡ ಆಸ್ತಿಯಾಗುವುದಂತೂ ನಿಜ. ಒಳ್ಳೆ ಕತೆ, ನಿರ್ದೇಶಕ ಸಿಕ್ಕರೆ ಅವರು ನಿಜಕ್ಕೂ ಸ್ಕೋರ್ ಮಾಡುತ್ತಾರೆ. ಪರಭಾಷೆಯಿಂದ ಆಮದು ಮಾಡಿಕೊಂಡಿರು ಹಂಸಿಣಿ ನಗುವುದೊಂದನ್ನು ಬಿಟ್ಟು ಬೇರೇನೂ ಮಾಡುವುದಿಲ್ಲ.

    ಸಂಗೀತ ಸಾಮಾನ್ಯ, ಸಂಕಲನ ಸರ್ವೇಸಾಮಾನ್ಯ. ಛಾಯಾಗ್ರಹಣ ಡಿಮ್ಮೋಡಿಮ್ಮು. ಸಂಭಾಷಣೆ ನಿರ್ದೇಶಕರ ಮತ್ತೊಂದು ಹರ ಸಾಹಸಕ್ಕೆ ಹಿಡಿದ ಕನ್ನಡಿ. ಚಿತ್ರಕತೆ ಚುರುಕಾಗಿಲ್ಲ.

    ಮಾಮೂಲಿ ಎನಿಸುವ ನಿರೂಪಣೆ... ನಿರ್ದೇಶಕರು ಮುಂದಿನ ತಯಾರಿಯಲ್ಲಿ ಬೇಕಾದಷ್ಟು ಬದಲಾವಣೆ ಮಾಡಿಕೊಂಡರೆ ಒಂದು ಉತ್ತಮ ಚಿತ್ರ ಕೊಡಬಹುದು.

    Sunday, September 12, 2010, 12:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X