ಪರಮಾತ್ಮ ಇಡೀ ಚಿತ್ರವೇ ಒಂದು ಫ್ಲಾಷ್ ಬ್ಯಾಕ್!

By Rajendra

Next »

« Previous

Paramathma movie still
ಎರಡು ವರ್ಷ ದೂರವಿದ್ದ ಗೆಳತಿಗೆ ನಾಯಕ ಕತೆ ಹೇಳುವಲ್ಲಿಂದ ಕತೆ ಶುರು. ಹೀಗಾಗಿ ಇಡೀ ಚಿತ್ರವೇ ಒಂದು ಫ್ಲಾಷ್‌ಬ್ಯಾಕು. ಒಮ್ಮೆಯೂ ವರ್ತಮಾನಕ್ಕೆ ಮರಳದ ಚಿತ್ರ ಇದು.ಅಂದರೂ ತಪ್ಪಿಲ್ಲ. ಕಾಲದ ಪ್ರವಾಹದಲ್ಲಿ ಕಣ್ಮರೆಯಾದ ಪಾತ್ರವೂ ಇಲ್ಲಿ ಜೀವಂತವಾಗಿವೆ. ಹಳೆಯ ಗೆಳತಿಗೆ ಕತೆ ಹೇಳುವುದೇ ಒಂದು ಸೊಗಸಾದ ಅನುಭವ. ಹಾಗೆ ಕತೆ ಹೇಳಿಸಿಕೊಳ್ಳುವವಳೂ ಒಂದು ಕಾಲಕ್ಕೆ ಅವನನ್ನು ಪ್ರೀತಿಸಿದವಳು. ಅತ್ಲಾಗಿ ಆ ಹುಡುಗಿ ಇತ್ಲಾಗಿ ಈ ಹುಡುಗಿ ಇದ್ದ ಕಾಲದ ಕತೆ ಅದು. ಈಗಲೂ ಅವನ ಕಲ್ಪನೆಯಲ್ಲಿ ಅತ್ಲಾಗಿ ಅವಳಿದ್ದಾಳೆ, ಇತ್ಲಾಗಿ ಇವಳಿಲ್ಲ. ಇಲ್ಲದವಳ ಬಗ್ಗೆ ಇರುವವಳಿಗೆ ಹೇಳುವ ಕತೆಯಲ್ಲಿ ಯಾರ್ ಯಾರೋ ಬಂದು ಹೋಗುತ್ತಾರೆ.

ಇಲ್ಲೊಂದು ವಿಸ್ಮಯವೂ ಇದೆ. ಅವನು ಹೇಳುವ ಕತೆಯೆಲ್ಲವೂ ಅವಳಿಗೂ ಗೊತ್ತು. ಗೊತ್ತಿದ್ದ ಕತೆಯನ್ನೇ ಅವನು ಹೇಳುತ್ತಾನೆ, ಅವಳು ಕೇಳುತ್ತಾಳೆ. ಆ ಎರಡು ವರ್ಷದಲ್ಲಿ ಅವರಿಬ್ಬರೂ ಸುಖವಾಗಿದ್ದರು ಅನ್ನುವುದಷ್ಟೇ ಅವಳಿಗೆ ಗೊತ್ತಿಲ್ಲ. ಆ ಕತೆ ತೆರೆದುಕೊಳ್ಳುವುದು ಕೊನೆಕೊನೆಗೆ. ಆರಂಭದಲ್ಲಿ ಹೇಳುವ ಹಿಮಾಲಯನ್ ಬ್ಲಂಡರ್,ಗಾಳಿಯಂತ್ರದ ಸಾಹಸ, ಬಡಗಿಯಾಗುವ ಹುಚ್ಚು, ಕುಂಗ್‌ಫೂ ಸಂಗತಿಗಳೆಲ್ಲ ಅವಳಿಗೂ ಗೊತ್ತಿದ್ದವೇ. ಯಾಕೆಂದರೆ ಅವಳು ಅವನನ್ನು ಬಿಟ್ಟು ಹೋಗುವ ಹೊತ್ತಿಗಾಗಲೇ ಅವನಿಗೆ ಮದುವೆ ಆಗಿರುತ್ತದೆ ಎಂದು ನಾವು ಊಹಿಸಬೇಕು.ಅವಳೂ ಊಹಿಸಬೇಕು. ಅವನು ಮನೆಬಿಟ್ಟು ಹೋಗಿ ಏಕಾಗಿಯಾಗಿ ಬಾಳಲು ನಿರ್ಧಾರ ಮಾಡಿ ಕಂಬದ ಮನೆ ಕಟ್ಟುವುದೆಲ್ಲ ಆನಂತರದ ಕತೆ. ಹಾಗಿದ್ದರೆ ಅವಳಿಗೂ ಗೊತ್ತಿರೋ ಕತೆಯನ್ನು ಅವನು ಹೇಳುವುದು ನಮಗೋಸ್ಕರ ಎಂದು ಭಾವಿಸಿಕೊಂಡೇ ನಾವು ಮುಂದುವರಿಯಬೇಕು.

ಭಟ್ಟರ ಮಾತಲ್ಲಿ ತಮಾಷೆಗೆ ಕೊರತೆಯಿಲ್ಲ. ವಿಷಾದಕ್ಕೂ. ಆದರೆ ವಿಷಾದವನ್ನು ನೀವು ಅನುಭವಿಸಬೇಕಾದರೆ ತನ್ಮಯರಾಗಬೇಕು. ಮೇಲುಸ್ತರದಲ್ಲಿರುವ ಕತೆಯನ್ನು ಕೇಳುತ್ತಲೇ ಅದರ ಆಳಕ್ಕೆ ಇಳಿಯುವುದನ್ನು ಚಿತ್ರ ಬೇಡುತ್ತದೆ. ಹಾಗೆ ಒಳಗೊಳ್ಳದೇ ಹೋದರೆ ನಿಮಗೆ ಚಿತ್ರದ ಆತ್ಮ ದಕ್ಕಲಾರದು. ಇಲ್ಲಿರುವ ದ್ವಂದ್ವವೆಂದರೆ ತಮಾಷೆಯಲ್ಲಿ ಚಿತ್ರ ಏನನ್ನೂ ಸಾಧಿಸುವುದಿಲ್ಲ. ವಿಷಾದದ ಕ್ಷಣವೂ ನಿಮಗೆ ಪೂರ್ತಿಯಾಗಿ ದಕ್ಕುವುದಿಲ್ಲ. ಅದಕ್ಕೆ ಮುಖ್ಯ ಕಾರಣ ನಮ್ಮ ಮೂಡನ್ನು ಸಿನಿಮಾ ಪದೇ ಪದೇ ಬದಲಾಯಿಸುತ್ತಾ ಹೋಗುವುದು. ತಾನು ತೀರ ಗಂಭೀರವಾದೆ ಅಂತ ಅನ್ನಿಸುವ ಹೊತ್ತಿಗೆ ಜೋಡಿ ಬೆನ್ನುಕಂಬಳ, ತಮಾಷೆ ಇವೆಲ್ಲ ಥಟ್ಟನೆ ಪ್ರತ್ಯಕ್ಷವಾಗುತ್ತದೆ.

ಇಡೀ ಚಿತ್ರ ಮಧುರ ಅನುಭವ ಅನ್ನಿಸುವುದಕ್ಕೆ ಸಕಾರಣಗಳಿವೆ. ದಾಂಪತ್ಯದ ಮಧುರಾನುಭವ, ತಾರುಣ್ಯರ ಜಿಗುಟು ಪ್ರೀತಿ, ತಾಯಿಯಿಲ್ಲದ ಹುಡುಗಿಯ ಸಿಟ್ಟು ಸೆಡವು, ಉತ್ಕಟತೆಗಳೆಲ್ಲ ನೆನಪಿನ ಓಣಿಯನ್ನು ನಮ್ಮನ್ನು ಹಿಂದಕ್ಕೂ ಮುಂದಕ್ಕೂ ಒಯ್ಯುತ್ತವೆ. ಅವನ ಪಾಲಿಗೆ ಅವಳು ತಿಥಿ ವಡೆ, ಅವಳ ಪಾಲಿಗೆ ಅವನು ನುಸಿಪೀಡೆ. ಅರಿಯುವ ಮುನ್ನವೇ ಪರವಶವಾದವನು, ತಿಳಿಯುವ ಮುನ್ನವೇ ತನ್ಮಯಳಾದಳ ಜೊತೆಗೆ ಹೆಜ್ಜೆ ಹಾಕಿದಂತೆ ನಮಗೆ ಭಾಸವಾಗುತ್ತದೆ.

Next »

« Previous

More from Filmibeat

English summary
Director Yogaraj Bhat's latest film Paramathma is a romantic comedy. The cinema features Puneet Rajkumar, Deepa Sannidhi and Aindrita Ray in the leads. Read Paramathma movie review, which has written by renowned Kannada journalist, writer Jogi and has been earlier published in Kannada daily Udayavani.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X