ತೆಲುಗು, ಹಿಂದಿಗೆ ಸುದೀಪ್ ವಿಷ್ಣುವರ್ಧನ ರೀಮೇಕ್
ಸುದೀಪ್ ಅಭಿನಯದ 'Only ವಿಷ್ಣುವರ್ಧನ' ಚಿತ್ರ ತೆಲುಗು ಮತ್ತು ಹಿಂದಿ ಭಾಷೆಗೆ ರೀಮೇಕ್ ಆಗಲಿದೆ. ಕನ್ನಡದಲ್ಲಿ ಸುದೀಪ್ ಪೋಷಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ರವಿ ತೇಜ ಮಾಡಲಿದ್ದಾರೆ. ತೆಲುಗು ಚಿತ್ರಕ್ಕೆ ಸ್ವತಃ ಸುದೀಪ್ ಆಕ್ಷನ್ ಕಟ್ ಹೇಳಲಿದ್ದಾರೆ.
ಈಗಾಗಲೆ ತೆಲುಗು ನಟ ರವಿ ತೇಜ ಅವರೊಂದಿಗೆ ಸುದೀಪ್ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ರವಿ ತೇಜ ಅವರಿಗೂ ಕತೆ ತುಂಬಾ ಇಷ್ಟವಾಗಿದೆಯಂತೆ. ವಿಶೇಷ ಎಂದರೆ ವಿಷ್ಣುವರ್ಧನ ಚಿತ್ರ ತೆಲುಗಿನ 'ನಿನ್ನ ನೇಡು ರೇಪು' ಚಿತ್ರದ ಪ್ರೇರಣೆ ಎನ್ನಲಾಗಿತ್ತು.
ವಿಷ್ಣುವರ್ಧನ ತೆಲುಗು ರೀಮೇಕ್‌ಗೆ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕರಾಗುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ನೈಸ್ ಕಂಪನಿಯ ಮಾಲೀಕ ನಟ ಹಾಗೂ ಚಿತ್ರ ನಿರ್ಮಾಪಕ ಅಶೋಕ್ ಖೇಣಿ ಅವರು ವಿಷ್ಣುವರ್ಧನ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲು ಮುಂದಾಗಿದ್ದಾರೆ. ಹಿಂದಿ ಚಿತ್ರಕ್ಕೆ ಅಮೀರ್ ಖಾನ್ ನಾಯಕ ನಟರಾಗುವ ಸಾಧ್ಯತೆಗಳಿವೆ. (ಏಜೆನ್ಸೀಸ್)
More from Filmibeat
English summary
Sudeep lead Kannada film Only Vishnuvardhana to be remade in Telugu and Hindi. Telugu with Ravi Teja under Sudeep direction. Another side Ashok Kheny of the Nice Company wants to make it in Hindi.
ಸುದೀಪ್ ರೀಮೇಕ್ ದ್ವಾರಕೀಶ್ ಅಶೋಕ್ ಖೇಣಿ ಅಮೀರ್ ಖಾನ್ sudeep remake dwarakish ashok kheni aamir khan ವಿಷ್ಣುವರ್ಧನ vishnuvardhana


Click it and Unblock the Notifications











