ಕೋಮಲಪ್ಪ ಗರಗಸ ಕಿಲಕಿಲ, 100% ಕಾಮಿಡಿ ಕನ್ಲಾ

By Staff

ಹೆಂಗೈತ್ಲಾ ಗರಗಸ. ಪೋಸ್ಟರ್ ನಾಗೆ ಅದೇನೋ ಸಖತ್ ಕುಯ್ತಾನೆ ಅಂತೈತಲ್ಲಾ ಏನ್ಲಾ ಅದೂ?ಹೂಂ. ಕೋಮಲಪ್ಪನ್ ಆಕ್ಟಿಂಗು ಬಲ್ ಮಸ್ತಾಗೈತ್ಲೆ. ಆಯಪ್ಪಾನೇ ಕನ್ಲಾ ಗರಗಸ!

ವಿನಾಯಕ ರಾಮ್ ಕಲಗಾರು

ಕೋಲೇಶ: ಲೋ ಮಲ್ಲಿ... ಈ ವಾರ ಅದೆಂತೆದೋ ಗರಗಸ ಸಿನ್ಮಾ ಬಿಡುಗಡೆ ಆಗೈತೆಲ್ಲಾ ನೀನ್ ನೋಡಿದ್ಯೇನ್ಲಾ?
ಮಲ್ಲೇಶ: ಇಲ್ಲಾ ಕನ್ಲಾ. ನೀ ಹೋಗಿದ್ಯೇನ್ಲಾ?
ಕೋಲೇಶ: ನಾನ್ ಮಾರ್ನಿಂಗ್ ಸೋಗೇ ಹೋಗಿದ್ದೇ ಕನ್ಲಾ?
ಮಲ್ಲೇಶ: ಹೌದೇನ್ಲಾ ಬಡ್ಡೆತ್ತೊದೆ. ಹೆಂಗೈತ್ಲಾ ಗರಗಸ. ಪೋಸ್ಟರ್ ನಾಗೆ ಅದೇನೋ ಸಖತ್ ಕುಯ್ತಾನೆ ಅಂತೈತಲ್ಲಾ ಏನ್ಲಾ ಅದೂ?
ಕೋಲೇಶ: ಹೂಂ. ಕೋಮಲಪ್ಪನ್ ಆಕ್ಟಿಂಗು ಬಲ್ ಮಸ್ತಾಗೈತ್ಲೆ. ಆಯಪ್ಪಾನೇ ಕನ್ಲಾ ಗರಗಸ!
ಮಲ್ಲೇಶ: ಅಯ್ಯೋ, ಅದೇನೂ ಅಂತ ಉಸಿ ಬಿಡಿಸಿ ಹೇಳ್ಲಾ?
ಕೋಲೇಶ: ಅದೆಂತಾ ಕ್ಯೋಳ್ ತೀಯಾ ಮುನಿಯಾ ಅನ್ನೋ ಪಾತ್ರದಾಗೆ ಕೋಮಲಪ್ಪ ಸಖತ್ತಾಗ್ ಮಿಂಚವ್ನೆ.
ಮಲ್ಲೇಶ:ಹೌದೇನ್ಲಾ! ಹಂಗಾರೆ ಹೊಡೆದಾಟ ಐತಿ ಅಂತಾತು. ಮುನಿಯಾ ಗರಗಸದಾಗೆ ತಲೇ ಕುತ್ಯಾನೋ ಕಾಲ್ನೋ?
ಕೋಲೇಶ: ಪೆದ್ ಮುಂಡೇದೇ ಅದು ಹಂಗಲ್ಲ ಕನ್ಲಾ. ಅವ ಬರೀ ಮಾತ್ನಾಗೇ ಕುಯ್ದು ಇಳಸ್ತಾನೆ. ಆದ್ರೂ ಅವನ ಮಾತ್ನಾಗಿರೋ ಮಜಾ ಐತಲ್ಲಾ. ಅದೇ ಬಲ್ ಮಸ್ತಾಗೈತೆ.
ಮಲ್ಲೇಶ: ಏನ್ ಯೋಳ್ತೀಯೋ ಅದನ್ನ ನೆಟ್ಟಗೆ ಯೋಳೂ ಆಟೆಯಾ.
ಕೋಲೇಶ: ಮುನಿಯಾ ಅನ್ನೋ ಆಸಾಮಿ ಇರ್ತಾನೆ. ಟಿಪಟೂರಿನ ಸುಬ್ನಳಿಯವ. ಮುಪಾರ್ ಮೂದೇವಿ ಅಂತಾನೆ. ಆತ್ಗೆ ಕತೆ ಅಂದ್ರೆ ಹಗಲೆಲ್ಲಾ ಕುಯ್ತಾನೆ. ಹಿಂಗೇ ಬೆಂಗ್ಲೂರಿಗೆ ಬತ್ತಾನೆ. ಅದ್ಯಾಗೋ ಪ್ರೊಡ್ಯೂಜರ್ ಪಾರ್ಥಸಾರಥಿ ಮನ್ಯಾಗ್ ಸೇರ್ಕೊಂತಾನೆ. ಆ ಪಾತ್ರ ನಮ್ ಅನಂತ್ ನಾಗಪ್ಪಂದು. ಆತನ್ ಹತ್ರ ಕತೆ ಯೋಳ್ತೀನಿ ಅಂತ ಐದು ತಾಸ್ ಕುಯ್ಯಕ್ ಸುರು ಮಾಡ್ತಾನೆ ಕನ್ಲಾ ಮುನಿಯ. ಪಾರ್ಥಪ್ಪಗೆ ಹೆಂಡತಿ ಮನೆ ಬಿಟ್ಟೋಗವ್ಳೆ ಅನ್ನೋ ತೆಲಿಬಿಸಿ. ಇದ್ದೊಬ್ಬ ಹೆ ಣ್ ಮಗ ತೇಜಮ್ಮ ಗೆ ಮಲತಾಯಿಮಾಧವಮ್ಮನ್ ಕಂಡ್ರೆ ಆಗಕ್ಕಿಲ್ಲ. ಇಬ್ರಿಗೂ ಹೊತ್ತಾರೇನೆ ಜಗ್ಳಾ ಸುರು. ಚಿಕ್ಕವ್ವ ಮಗ್ಳು ಕಿತ್ತಾಡಿ ಮನೆ ಬಿಟ್ ಓಯ್ತಾರೆ. ಈ ಪಾರ್ಥಪ್ಪ ಅರ್ವತ್ತೊಂದ್ ಆದ್ರೂ ಹದ್ನಾರರ 'ಪಡ್ಡೆ' ತದ್ ಆಡ್ದಂಗ್ ಆಡ್ತದೆ. ತನ್ನ್ ಹೆಂಡ್ರು ಡೈರಕ್ಟರು ಸರತಪ್ಪನ್ ಹೆಂಡ್ತೀ ಕೈಗೆ ಸೋಡಾಚೀಟಿ ಕೊಟ್ಟಿರ್ತಾನೆ ಕನ್ಲಾ. ಆತನ್ ಹೆಂಡ್ತಿ ಗೌರಿಪಾರ್ಥಪ್ಪನ್ ಹೆಂಡ್ತಿ ಕಿವಿಯಾಗೆ'ಗಂಡನ್ ಬುಟ್ಟುಬಿಡೇ' ಅನ್ನಕ್ ಸುರು ಮಾಡ್ತಾಳೆ. ಇತ್ಲಾಗ್ ಪಾರ್ಥಪ್ಪಗೆ ಮಗ್ಳು ಯಾರ್ ಜ್ವತ್ಗಾರೂ ಓಡ್ ಹೋಗ್ ಬಿಟ್ಟಾಳು ಅನ್ನೋ ಬ್ಯಾನಿ ಬ್ಯಾರೆ. ಆದ್ರೆ ಮುನಿಯಪ್ಪಂದು ಒಂದೇ ಹಟ. ಕತೆ ಕ್ಯೋಳಿ....ಯಾಕ್ಲಾ ಮಲ್ಲಿ ಏನೂ ಅರ್ಥ ಆಗಲಿಕ್ಕಿಲ್ಲೇನ್ಲಾ?
ಮಲ್ಲೇಶ: ಅಯ್ಯೋ ಸಾಕ್ ಬುಡ್ಲಾ ನೀನೂ ಕುಯ್ ಬ್ಯಾಡಾ.
ಕೋಲೇಶ: ಹಂಗಾಅರೆ ಸುಮ್ನೆ ಸಸನೀನೇ ಸಿನ್ಮಾ ನೋಡ್ ಬಾರಲಾ... .
ಮಲ್ಲೇಶ: ಅಲ್ಲಾ. ನೀ ಹೇಳೋದ್ ಕ್ಯೋಳಿದ್ರೆ ಇದು ಬ್ಯಾರೆ ಭಾಸೆ ಸಿನ್ಮಾ ಇದ್ದಾಂಗ್ ಐತೆ ಅಂತ ಡೌಟೆ ಬತ್ತೈತೆ?
ಕೋಲೇಶ: ಅಯ್ಯೋ ಹಂಗೇನಿಲ್ಲ ಕನ್ಲಾ . ಆದ್ರೆ 'ಅದ್ಯಾವ್ದೋ ಪ್ರೆಂಚ್ ಸಿನ್ಮಾ ಇದ್ದಂಗೈತೆ. ಆದ್ರೆ ಥೇಟ್ ಅದೇ ಅಲ್ಲ' ಅಂತಾ ಯಾರೋ ಯೋಳ್ ತಿದ್ರು.
ಮಲ್ಲೇಶ: ಕತೀ ಬುದು. ಹಾಡ್ ಚೆನ್ನಾಗೈ ತೇನ್ಲಾ?
ಕೋಲೇಶ: ಹಾಡೇನೋ ಐತೆ. ಆದ್ರೆ ಒಂದೇ ಒಂದು. ಸಿನ್ಮಾ ಸುರು ಆಗಿ ಹತ್ತ್ ನಿಮಿಸಕ್ಕೇ ಬತದೆ. ಆಮ್ಯಾಕ್ ಒಂದೂ ಇಲ್ಲ ಕನ್ಲಾ.
ಮಲ್ಲೇಶ: ಹೌದೇನ್ಲಾ. ಒಂದೇ ಹಾಡೇನ್ಲಾ? ಹೋಗ್ಲಿ ಬುಡು. ಎಲ್ಲಾ ಹ್ಯಾಂಗ್ ಆಕ್ಟ್ ಮಾಡವ್ರೆ ಅಂತಾನಾದ್ರೂ ಯೋಳೋ?
ಕೋಲೇಶ: ನಮ್ ಕೋಮಲ್ಲು ಗರಗಸ ಅಷ್ಟೇ ಅಲ್ಲ. ಅವ ಪಾದ ರಸ ಇದ್ದಾಂಗೆ. ಇಡೀ ಸಿನಿಮಾ ಅವ್ನ ನ್ಮ್ಯಾಕೇ ನಿಂತೈತೆ ಅಂತೀನಿ. ಆ ಯಪ್ಪ ಮಾಡಿದ್ದನ್ನ ನೆನಸ್ಕಂಡ್ರೇ ಈಗ್ಲೂ ನಗು ಬತ್ತದೆ. ಬರೀ ಮಾತ್ನಾಗೇ ಮನೇ ಕಟ್ಟವ್ನೆ. ಅನಂತ ನಾಗಪ್ಪನೋರಿಗೆ ವಯಸ್ಸಾತು ಅಂತ ಗೊತ್ತಾಯ್ತದೆ. ಆದ್ರೆ ಆ ಯಪ್ಪ ತನ್ನ ಕಣ್ಣಲೇ ಆಟ ಆಡ್ ಬುಟ್ಟವ್ರೆ ಕಣಪ್ಪೊವ್. . .! ಸುಧಾರಾಣಿಯಮ್ಮ, ಪವಿತ್ರಾ ಲೋಕೇ ಸಮ್ಮ, ಚಿದಾನಂದಪ್ಪ, ಮಧುಪ್ಪ ಎಲ್ಲಾ ಆಂಗ್ ಬಂದ್ ಹಿಂಗ್ ಓಯ್ತಾರೆ. ನಾಗಭರಣಪ್ಪ ಬರೀ ಮಾತ್ಗಷ್ಟೇ ವಾಕೆ.ಲಕ್ಷ್ಮಮ್ಮ. ಐಸ್ವರ್ಯಮ್ಮ, ವಾಣ್ಯಮ್ಮ ಬೋ ಕುಲುಕುಲು ಅಂತಾರೆ ಕನ್ಲಾ.
ಮಲ್ಲೇಶ: ಹೌದೇನ್ಲಾ? ಒಟ್ಟಾರೆ ಸಿನಿಮಾ ಏನ್ ಯೋಳ್ತದೆ?
ಕೋಲೇಶ: ಓ ಅದಾ. ಗಂಡ ಹೆಂಡ್ತಿ ಮ್ಯಾಕ್ ಅನುಮಾನಾ ಪಡ್ಬಾರ್ದು. ಹೆಂಡ್ರಿಗೂ ಒಸಿ ಪ್ರೀಡಮ್ ಕೊಡ್ಬೇಕು. ಆತ್ರಬಿದ್ದು ತೀರ್ಮಾನ ತಕ್ಕಳಕ್ ಹೋಗ್ಬಾರ್ದು ಅಂತ ನಿರ್ದೇಸಕ ದಿನೇಸಪ್ಪ ಯೋಳಕ್ ಪ್ರಯತ್ನ ಮಾಡವ್ರೆ. ಜ್ವತ್ಗೆ ಕೋಮಲಪ್ಪಂಗೆ ನಾಯಕನ ಪಟ್ಟ ಕೊಟ್ಟವ್ರೆ. ಕಿತ್ತಾಟ, ಕೂಗಾಟ ಇಲ್ದೇನೇ ಹಿಂಗೂ ಒಂದ್ ಸಿನ್ಮಾ ಮಾಡ್ ಬೈದು ಅಂತ ತೋರ್ಸ್ ಕೊಟ್ಟವ್ರೆ. ಒಂದ್ ಕಿತಾ ಅಂತೂ ಗ್ಯಾರಂಟಿ ನೋಡ್ ಬರ್ ಬೈದು ಕನ್ಲಾ. ರಾಜೇಂದ್ರ ಕಾರಾಂತಪ್ಪನ್ ಡೈಲಾಕೂ ಅಷ್ಟೇ ಮಜಬೂತಾಗೈತೆ.
ಮಲ್ಲೇಶ: ಆಯ್ತ್ ಕನ್ಲಾ. ಈಗ್ಲೇ ಓಗ್ ಬತ್ತೀನಿ. ಬರ್ಲೇನ್ಲಾ ಬಡ್ಡೇತ್ತೊದೇ. . ..

(ಸ್ನೇಹ ಸೇತು: ವಿಜಯ ಕರ್ನಾಟಕ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X