»   » ಉಪ್ಪಿ ನಟಿಸುವುದನ್ನು ಕಲಿತಿದ್ದಾರೆ. ನಾನು ನಾನೇ ಅವರ ಪಾಲಿಗೆ ಅಭಿನಯದ ಶಿಶುವಿಹಾರ.

ಉಪ್ಪಿ ನಟಿಸುವುದನ್ನು ಕಲಿತಿದ್ದಾರೆ. ನಾನು ನಾನೇ ಅವರ ಪಾಲಿಗೆ ಅಭಿನಯದ ಶಿಶುವಿಹಾರ.

Subscribe to Filmibeat Kannada

ಉಪ್ಪಿ ನಟಿಸುವುದನ್ನು ಕಲಿತಿದ್ದಾರೆ. ಈ ಚಿತ್ರ ಅವರ ಪಾಲಿಗೆ ಅಭಿನಯದ ಶಿಶುವಿಹಾರ. ಕೆಲವೊಂದು ಕಡೆ ಅತಿಯಾಗಿ ಕಿರುಚಿದ್ದಾರೆ. ಸೆಂಟಿಮೆಂಟ್‌ ದೃಶ್ಯಗಳಲ್ಲಿ ಸಂಯಮ ತೋರಿದ್ದಾರೆ. ಇದುವರೆಗಿನ ಇಮೇಜು ಬದಲಿಸುವ ತಂತ್ರವೂ ತಕ್ಕಮಟ್ಟಿಗೆ ಯಶಸ್ಸಾಗಿದೆ.

ಉಪ್ಪಿಯನ್ನು ಎಡಗೈಯಿಂದ ನಿವಾಳಿಸಿ ಒಗೆದಿರುವುದು ಚೆಲುವೆ ಸಾಕ್ಷಿ ಶಿವಾನಂದ್‌! ಒಂದು ಚಿಕ್ಕ ಮಾತಿಗೆ ಸುರಿಸುವ ಕಣ್ಣೀರು ಹೇಗಿರುತ್ತೆ ಅನ್ನುವುದನ್ನು ಆಕೆಯಿಂದ ನೋಡಿ ಕಲಿಯಬೇಕು. ಕೆಲವೊಮ್ಮೆ ಅತಿಯಾದ ಪ್ರತಿಕ್ರಿಯೆಯಿದ್ದರೂ ಮಾಫ್‌ ಕರೋ.

ದೇವಾ ಸಂಗೀತದಲ್ಲಿ ಹೇಳಿಕೊಳ್ಳುವ ಖದರ್‌ ಇಲ್ಲ . ವಿದೇಶದಲ್ಲಿ ಹಾಡುಗಳನ್ನು ಚಿತ್ರಿಸಿದ್ದು ಯಾಕೆಂದು ಅರ್ಥವಾಗುವುದಿಲ್ಲ . ಚಿತ್ರಕ್ಕೆ ‘ನಾನು ನಾನೇ’ ಎಂದೇಕೆ ಹೆಸರಿಟ್ಟಿದ್ದಾರೆನ್ನೋದು ಕೂಡಾ.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada