ಚಿತ್ರ ವಿಮರ್ಶೆ: ಏನೋ ಒಂಥರಾ ಪರ್ವಾಗಿಲ್ಲ!

By * ರವೀಂದ್ರ ಮಾವಖಂಡ

ಆತ ದೆಹಲಿ ಹುಡುಗ. ಹೈಯರ್ ಸ್ಟಡೀಸ್‌ಗೆ ಅಂತ ಕೆನಡಾಕ್ಕೆ ಹೊರಟವನು ಅಪಘಾತಕ್ಕೆ ಸಿಕ್ಕಿ ಮೈಸೂರಿನ ಕಾಲೇಜಿಗೆ ಸೇರುತ್ತಾನೆ. ಅವಳು ಚಿಕ್ಕಮಗಳೂರಿನ ಹುಡುಗಿ. ಅವಳೂ ಹೈಯರ್ ಸ್ಟಡೀಸ್‌ಗೆ ಹೊರಟವಳೇ. ಅಪ್ಪನ ಹಟಕ್ಕೆ, ಪ್ರೀತಿಗೆ ಮಣಿದು ಮದುವೆಗೆ ಒಪ್ಪುತ್ತಾಳೆ.

ಮದುವೆಗೆ ಒಪ್ಪಿದ ಹುಡುಗ ಒಂದು ದಿನ ಮೊದಲು ಓಡಿ ಹೋಗುತ್ತಾನೆ. ಮದುವೆ ಕ್ಯಾನ್ಸಲ್ ಆಗಿ ಅವಳೂ ನಮ್ಮ ಹೀರೊನ ಕಾಲೇಜಿಗೇ ಸೇರುತ್ತಾಳೆ. ಅಲ್ಲಿ ಹೀರೊನ ಗೆಳೆಯ ಹಾಗೂ ಹೀರೋಯಿನ್ ಗೆಳತಿಯ ಮಧ್ಯೆ ಪ್ರೀತಿ.ಗೆಳತಿಯ ಅಪ್ಪ ವಿಲನ್. ಅವರಿಬ್ಬರನ್ನೂ ಒಂದುಗೂಡಿಸುವ ಪ್ರಯತ್ನದಲ್ಲಿ ಇವರ ನಡುವೆ 'ಏನೋ ಒಂಥರಾ'.

ಒಂಬತ್ತು ವರ್ಷ ಹಿಂದಿನ ಸೂಪರ್ ಹಿಟ್ ತಮಿಳು ಚಿತ್ರ 'ಖುಷಿ'ಯ ರಿಮೇಕ್ ಆದ ಇದನ್ನು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಮಾಡಿದ್ದಾರೆ ನಿರ್ದೇಶಕ ಮುಸ್ಸಂಜೆ ಮಹೇಶ್. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಗಳೆಂದರೆ ಡೈಲಾಗ್ ಮಳೆ ಸುರಿಯಲೇಬೇಕು. ಮಾತಿಗೆ ಬರವಿಲ್ಲ. ಭರಪೂರ ಮಾತು, ನಕ್ಕು ನಗಿಸುವ ಹಾಸ್ಯ ಇಲ್ಲ ಅಂದರೆ ಗಣೇಶ್ ಚಿತ್ರವೇ ಅಲ್ಲ ಅನ್ನುವ ಅವರ ಅಭಿಮಾನಿಗಳ ನಿರೀಕ್ಷೆ ಇಲ್ಲಿ ಹುಸಿಯಾಗಿಲ್ಲ.

ಗಣೇಶ್ ಡೈಲಾಗ್‌ಗೆ ಸಿಳ್ಳೆಗಳು ಬೀಳುತ್ತವೆ. ಅದರಲ್ಲೂ ಕಾಲೇಜ್ ಹುಡುಗ ಹುಡುಗೀರು, ಲವ್ ಬಗೆಗಿನ ಡೈಲಾಗ್‌ಗಳು ಪ್ರೇಮಿಗಳ ಸಿಲೆಬಸ್ ಆದರೆ ಆಶ್ಚರ್ಯವಿಲ್ಲ.
ನಾಯಕಿ ಪ್ರಿಯಾಮಣಿ ಅಭಿನಯ, ಶರಣ್ ಕಾಮಿಡಿ ಓಕೆ. ನಾಯಕಿಯ ತಂದೆಯ ಪಾತ್ರದಲ್ಲಿ ಶ್ರಿನಿವಾಸಮೂರ್ತಿ ಅಭಿನಯ ಸೂಪರ್.

ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ , ಶರಣ್, ತೇಜಸ್ವಿನಿ ತಮಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರಕಥೆ ಸಂಭಾಷಣೆಯೂ ನಿರ್ದೇಶಕರದ್ದೇ. ಹರಿಕೃಷ್ಣ ಸಂಗೀತದಲ್ಲಿ ಮೂರು ಹಾಡುಗಳು (ಇಂತಿ ನಿನ್ನ ಪ್ರೀತಿಯ, ಏನೋ ಒಂಥರಾ ದಿಲ್ ಖುಷ್, ಗಂಡ್ ಮಕ್ಳು ತುಂಬಾ ಒಳ್ಳೇವ್ರು) ನೆನಪಿನಲ್ಲಿ
ಉಳಿಯುತ್ತವೆ. ಅದರಲ್ಲೂ ಯೋಗರಾಜ್ ಭಟ್ ಬರೆದ 'ಗಂಡ್ ಮಕ್ಳು ತುಂಬಾ ಒಳ್ಳೇವ್ರು' ಹಾಡು ಹುಡುಗರ ಪಾಲಿನ ರಾಷ್ಟ್ರಗೀತೆಯಾಗುವ ಎಲ್ಲ ಲಕ್ಷಣಗಳೂ ಇವೆ.

ಜಯಂತ ಕಾಯ್ಕಿಣಿ ಬರೆದ 'ಏನೋ ಒಂಥರಾ ದಿಲ್ ಖುಷ್' ಹಾಡು ನವಿರಾಗಿ ಮನ ಸೆಳೆಯುತ್ತದೆ. ಜತೆಗೆ ಈ ಹಾಡುಗಳ ಕೊರಿಯೋಗ್ರಫಿಯೂ ಇಷ್ಟವಾಗುತ್ತದೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣದಲ್ಲಿ ದಿಲ್ಲಿ, ಚಿಕ್ಕಮಗಳೂರು, ಕೇರಳ ಪರಿಸರ ಕಣ್ಣಿಗೆ ತಂಪು ತಂಪೆನಿಸುವ ಹಾಗಿದೆ (ಸ್ನೇಹಸೇತು: ವಿಜಯ ಕರ್ನಾಟಕ).

More from Filmibeat

English summary
Mussanje Mahesh latest movie Eno Onthara is a romantic-cum-sentimental story. It is a remake of Tamil film Khushi. eno Onthara features Golden star Ganesh and actress Priyamani in the leads.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X