»   » ಕಂಠಿ : ಕನ್ನಡಕ್ಕೆ ಹೊಸಕಥೆ, ಎಡವಿದ್ದು ವ್ಯಥೆ

ಕಂಠಿ : ಕನ್ನಡಕ್ಕೆ ಹೊಸಕಥೆ, ಎಡವಿದ್ದು ವ್ಯಥೆ

Subscribe to Filmibeat Kannada
  • ಎಂ.ಡಿ.
ಆತ ಕನ್ನಡದ ಹುಡುಗ. ಆಕೆ ಮರಾಠಿ ಹುಡುಗಿ. ಅವರಿಗೆ ಒಬ್ಬರನ್ನೊಬ್ಬರು ಕಂಡರೆ ಇಷ್ಟ. ಆದರೆ ಆಕೆಯ ಅಣ್ಣನಿಗೆ ಇದು ಕಷ್ಟಾತಿಕಷ್ಟ . ಕಾರಣ ಆತನಿಗಿರುವ ಮರಾಠಿ ಮೇಲಿನ ಮಮಕಾರ. ಕನ್ನಡಿಗರೆಂದರೆ ಅಸಹಕಾರ ಚಳವಳಿಯ ನೇತಾರ.

ಇದನ್ನು ಎದುರಿಸಿ ನಾಯಕ ಹೇಗೆ ತನ್ನ ಪ್ರೇಮವನ್ನು ಉಳಿಸಿಕೊಳ್ಳುತ್ತಾನೆ ಅನ್ನುವುದೇ ಮುಖ್ಯಕಥೆ. ಎಳೆ ತೀರಾ ಚಿಕ್ಕದಾಗಿದ್ದರೂ ಕನ್ನಡಕ್ಕಿದು ಹೊಚ್ಚ ಹೊಸ ಕಥೆ.

ರಾಜ್ಯದ ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ಕನ್ನಡ ಯಾವ ಸ್ಥಿತಿ ಮುಟ್ಟಿದೆ ಎಂದು ತೋರಿಸುವುದರ ಜೊತೆಗೆ ಭಾಷೆ ಕೂಡ ರಾಜಕೀಯ ದಾಳವಾಗುವುದನ್ನು ಬಿಂಬಿಸಲಾಗಿದೆ. ಆದರೆ ಕೊನೆಕೊನೆಗೆ ನಿರ್ದೇಶಕರು ಎಷ್ಟು ಗೊಂದಲವಾಗಿದ್ದಾರೆ ಎಂದರೆ ತಾವು ಏನು ಹೇಳಬೇಕೆಂಬುದೇ ಅವರಿಗೆ ತಿಳಿದಂತಿಲ್ಲ . ಸುಮ್ಮನೆ ದೃಶ್ಯಗಳು ಬರುತ್ತಲೇ ಇರುತ್ತವೆ. ಯಾವಾಗ ಮುಗಿಯುತ್ತೋ ಅನ್ನಿಸಲು ಶುರುವಾಗುತ್ತದೆ. ಅದಕ್ಕೆ ಹಿಡಿತವಿಲ್ಲದ ಚಿತ್ರಕಥೆ ಕಾರಣ.

ಇದನ್ನು ಚಿತ್ರದ ಮೊದಲ ಭಾಗಕ್ಕೆ ಅನ್ವಯಿಸಲು ಸಾಧ್ಯವಿಲ್ಲ . ಯಾಕೆಂದರೆ ಅಲ್ಲಿ ಪ್ರೇಮದ ಮನೋಜ್ಞ ದೃಶ್ಯಗಳಿವೆ. ಪ್ರೇಮದ ಹುಟ್ಟು ಮತ್ತು ಬೆಳವಣಿಗೆಯನ್ನ ಎಷ್ಟು ನವಿರಾಗಿ ನಿರೂಪಿಸಿದ್ದಾರೆಂದರೆ ಕಥೆಗೊಂದು ಪೊಯೆಟಿಕ್‌ ಟಚ್‌ ದಕ್ಕಿದೆ. ನಾಯಕಿಯನ್ನು ಕನ್ನಡಿ ಮೂಲಕ ಪರಿಚಯಿಸುವ ದೃಶ್ಯ ವಂಡರ್‌ಫುಲ್‌. ನಾಯಕನ ಗೆಳೆಯರ ತಮಾಷೆ ಕೂಡಾ ಮುದ ನೀಡುತ್ತದೆ.

ಮುರಳಿ ತೆರೆ ಮೇಲೆ ಇದ್ದಷ್ಟು ಹೊತ್ತು ಇಡೀ ಚಿತ್ರಮಂದಿರದಲ್ಲಿ ಲವಲವಿಕೆ ತುಂಬುತ್ತಾರೆ. ಯಾವುದನ್ನು ಅತಿ ಮಾಡದೆ ಕಡಿಮೆ ಮಾಡದೆ ಎದುರಲ್ಲಿ ಕ್ಯಾಮರಾ ಇಲ್ಲವೆಂಬಂತೆ ನಟಿಸಿದ್ದಾರೆ. ಡೈಲಾಗ್‌ ಡೆಲಿವರಿ, ಕುಣಿತ ಮತ್ತು ಹೊಡೆದಾಟದಲ್ಲಿ ಸ್ಟ್ರಾಂಗ್‌. ಈತನಿಂದ ಇನ್ನೂ ಉತ್ತಮವಾದುದನ್ನು ನಿರೀಕ್ಷಿಸಬಹುದು. ರಮ್ಯಾ ಮುದ್ದು ಮುದ್ದಾಗಿ ಕಾಣುತ್ತಾಳೆ. ಅಭಿನಯದಲ್ಲಿ ಮೊದಲಿಗಿಂತ ಬೆಳೆದಿದ್ದಾಳೆ.

ಉಳಿದ ಪಾತ್ರಗಳ ್ಫಆಯ್ಕೆಯಲ್ಲೂ ನಿರ್ದೇಶಕ ಮುತುವರ್ಜಿ ವಹಿಸಿದ್ದಾರೆ. ಬೀರನ ಪಾತ್ರಧಾರಿ ಅಚ್ಚರಿ ಹುಟ್ಟಿಸುವಷ್ಟು ಚೆನ್ನಾಗಿ ನಟಿಸಿದ್ದಾನೆ. ಎರಡು ಹಾಡುಗಳು ಚೆನ್ನಾಗಿವೆ. ಹಿನ್ನೆಲೆ ಸಂಗೀತದಲ್ಲಿ ಹಿಂದಿ ಚಿತ್ರಗಳ ಛಾಯೆ ಇದೆ. ಒಟ್ಟಿನಲ್ಲಿ ನಿರ್ದೇಶಕ ಭರತ್‌ ತಮ್ಮ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಬೆಳಗಾವಿಯ ಭಾಷೆಯನ್ನು ಅಚ್ಚುಕಟ್ಟಾಗಿ ಬಳಸಿದ್ದಾರೆ. ವಿಲನ್‌ ಪಾತ್ರಗಳಿಗೆ ಹೊಸತನ ತುಂಬಿದ್ದಾರೆ. ಚಿತ್ರಕತೆ ಬಗ್ಗೆ ಇನ್ನಷ್ಟು ಗಂಭೀರವಾಗಿದ್ದಾರೆ ಒಳ್ಳೆಯದು.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada