»   » ಚಿತ್ರವಿಮರ್ಶೆ: ಬಾ ಬೇಗ ಚಂದಮಾಮ

ಚಿತ್ರವಿಮರ್ಶೆ: ಬಾ ಬೇಗ ಚಂದಮಾಮ

Posted By: ವಿನಾಯಕ್ ರಾಮ್ ಕಲಗಾರು
Subscribe to Filmibeat Kannada
Kannada movie baa bega chandamama
ಕಂಠದಾನ ಕಲಾವಿದನೊಬ್ಬ ನಿರ್ದೇಶಕ ಆಗು ವುದೆಂದರೆ ಸಾಮಾನ್ಯವೇ? ಆ ಮಟ್ಟಿಗೆ ಮುರುಳಿಯ ಬೆನ್ನು ತಟ್ಟಲೇಬೇಕು. ಅದರಲ್ಲೂ ದೀಪಕ್‌ನಂಥ ಧೀಮಂತ' ನಟನನ್ನು ಇಟ್ಟುಕೊಂಡು, ಸಿನಿಮಾ ಮಾಡುವುದು ಎಂದರೆ ಸುಲಭದ ಮಾತೇ!?

ಜಪ್ಪಯ್ಯ ಎಂದರೂ ಆತನಿಗೆ ಮುಖದಲ್ಲಿ ಒಂದೇ ಒಂದು ನರ ಕೂಡ ಅಲ್ಲಾಡುವುದಿಲ್ಲ. ಫೈಟಿಂಗ್ ಮಾತ್ರ ಹಲ್ಲುಕಚ್ಚಿಕೊಂಡು ಮಾಡುತ್ತಾನೆ. ಬೇಕಾದರೆ ಲಾಂಗ್ ಹಿಡಿದು ಹಾರಾಡುತ್ತಾನೆ. ಅಂಥ ದೇಹವನ್ನು ಇಟ್ಟುಕೊಂಡು ಒಂದು ಸಿಂಪಲ್ ಲವ್ ಸ್ಟೋರಿ ಮಾಡುವುದು ಎಂದರೆ ಹುಡುಗಾಟವೆ?

ಕತೆಯಲ್ಲಿ ಹೊಸತನ ಬೇಕೆಂದಿಲ್ಲ. ಒಂದಿಷ್ಟು ಹಾಡು, ಮತ್ತೊಂದಿಷ್ಟು ಕಾಮಿಡಿ, ಇನ್ನೊಂದಿಷ್ಟು ಫೈಟು ಇದ್ದರೆ ಸಾಕು ಅದು ಸಿನಿಮಾ ಆಗಿಯೇ ತೀರುತ್ತವೆ'. ಹೌದಾ, ಅಲ್ವಾ? ಹೌದು ಎನ್ನುತ್ತಿದೆ ಬಾ ಬೇಗ ಚಂದಮಾಮ. ಇಬ್ಬರು ಬೈಕ್ ಕಳ್ಳರು. ಒಬ್ಬ ದೀಪು, ಇನ್ನೊಬ್ಬ ಪ್ರಕಾಶ. ಕಳ್ಳತನ ಅವರಿಗಷ್ಟೇ ಅನಿವಾರ್ಯ. ಇಲ್ಲದಿದ್ದರೆ ಅನಾಥಾಶ್ರಮ ನಡೆಯುವುದಿಲ್ಲ. ಹೀಗಿರುವಾಗ ಒಬ್ಬ ಶ್ರೀಮಂತ ಕುರಿ ಸಿಗುತ್ತಾನೆ. ನಿಮ್ಮ ಸ್ನೇಹಿತನ ಮಗ ನಾನು. ಅಪ್ಪಾಜಿ ಹೇಳಿದರು, ಎರಡು ಕೋಟಿ ಕೊಡಬೇಕಂತೆ' ಎಂದು ಯಾಮಾರಿಸಲು ಸ್ಕೆಚ್ ಹಾಕು ತ್ತಾರೆ. ಈ ಮಧ್ಯೆ ಅವನ ಮಗಳ ಜತೆ ಸರಸ-ಸಲ್ಲಾಪ. ದುರದೃಷ್ಟ ವಶಾತ್ ಆಕೆ ಕಣ್ಣುಕಳೆದುಕೊಳ್ಳುತ್ತಾಳೆ.

ದೀಪು ಅವಳ ಸೇವೆ ಮಾಡು ತ್ತಾನೆ. ಅವಳ ಮನಸ್ಸು ಕದಿಯುತ್ತಾನೆ. ಅಷ್ಟರಲ್ಲಿ ಆತನ ಬಂಡವಾಳ ಬಯಲಾಗುತ್ತದೆ. ಮುಂದೇನು ಮಾಮಾ... ನೋಡಿ... ಚಂದಮಾಮಾ...ದೀಪಕ್ ಅಭಿನಯದಲ್ಲಿ ಪಕ್ವವಾಗದಿದ್ದರೆ ಗಾಂಧಿನಗರದಲ್ಲಿ ನೆಲೆ ನಿಲ್ಲುವುದು ತುಂಬಾ ಕಷ್ಟ. ನಾಯಕಿ ಸುಹಾಸಿನಿ ಚಿತ್ರದ ಪ್ಲಸ್ ಪಾಯಿಂಟ್. ಕುಣಿತ, ಜಿಗಿತ ಎಲ್ಲವನ್ನೂ ಸಲೀಸಾಗಿ ಮಾಡಿಬಿಡಬಹುದು. ಆದರೆ ಮೇಕಪ್ ಇಲ್ಲದೆ, ಕುರುಡಿಯಂತೆ ಅಭಿನಯಿಸುವುದು ಏಳು ಕೆರೆ ನೀರು ಕುಡಿದ ಹಾಗೆ. ಅದನ್ನು ಸುಹಾಸಿನಿ ಮಾಡಿದ್ದಾಳೆ. ಇನ್‌ಸ್ವಲ್ಪ ಪ್ರಯತ್ನ ಪಟ್ರೆ ಸುಹಾಸಿನಿ ಮಣಿರತ್ನಂ ಲೆವೆಲ್ಲಿಗೆ ಬೆಳೆಯಬಹುದು. ಜೈಜಗದೀಶ್, ಅವಿನಾಶ್, ಚಿತ್ರಾಶೆಣೈ ಬಳಗ ಸಿನಿಮಾದ ಮತ್ತಷ್ಟು ರಂಗು ನೀಡಿದೆ. ಬುಲೆಟ್ ಪ್ರಕಾಶ್ ಕಾಮಿಡಿ ಒಂದು ಹಂತದವರೆಗೆ ಇದ್ದು ಆಮೇಲೆ ಕಮರಿಹೋಗುತ್ತದೆ. ನಿರ್ದೇಶಕರು ನಿರೂಪಣೆ, ಚಿತ್ರಕತೆ, ಸಂಭಾಷಣೆ' ಈ ಪದಗಳ ಅರ್ಥ ತಿಳಿದುಕೊಂಡರೆ ಮುಂದಿನ ಹಾದಿ ಸುಗಮವಾದೀತು...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada