»   » ನಿರ್ದೇಶಕ ರಮೇಶ್‌ ಪ್ರತಿಭೆಯ ತಾಜಾ ಸೆಳಕು, ದರ್ಶನ್‌-ಓಂಪುರಿ ಉತ್ತಮ ಅಭಿನಯ, ಚುರುಕು ಸಂಭಾಷಣೆ, ಸಾಧು ಕೋಕಿಲ ಕಿಲಕಿಲ.. ಇಂತಿಪ್ಪ ಧ್ರುವ ನೋಡಬಲ್‌ ಚಿತ್ರ.

ನಿರ್ದೇಶಕ ರಮೇಶ್‌ ಪ್ರತಿಭೆಯ ತಾಜಾ ಸೆಳಕು, ದರ್ಶನ್‌-ಓಂಪುರಿ ಉತ್ತಮ ಅಭಿನಯ, ಚುರುಕು ಸಂಭಾಷಣೆ, ಸಾಧು ಕೋಕಿಲ ಕಿಲಕಿಲ.. ಇಂತಿಪ್ಪ ಧ್ರುವ ನೋಡಬಲ್‌ ಚಿತ್ರ.

Subscribe to Filmibeat Kannada

ಮಾತಿನಲ್ಲಿ ರಮೇಶ್‌ ಮಿಂಚಿದ್ದಾರೆ. ಎಷ್ಟೋ ಕಡೆ ಬಿದ್ದು ಹೋಗುವ ದೃಶ್ಯಗಳನ್ನು ಸಂಭಾಷಣೆಯೇ ಎತ್ತಿ ಹಿಡಿದಿದೆ. ಹಾಗೆಯೇ ದರ್ಶನ್‌, ರಾಜಕೀಯ ಪುಢಾರಿಯನ್ನು ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಪರಿಚಯ ಮಾಡಿಸಿ, ಏನಾದರೂ ಮಾಡಿಕೋ ಎಂದು ಹೇಳುವ ದೃಶ್ಯ ಅವರ ಹೊಸತನದ ನಿರ್ದೇಶನಕ್ಕೆ ತಾಜಾ ಉದಾಹರಣೆ. ಆದರೆ ದರ್ಶನ್‌ ರಾಜಕೀಯ ನಾಯಕನಾಗಿ ಹೊರಹೊಮ್ಮುವ ರೀತಿಯಲ್ಲೇ ಇನ್ನೂ ಸ್ವಲ್ಪ ವೇಗ ಬೇಕಾಗಿತ್ತು . ಯಾರು ಬೇಕಾದರೂ ರಾಜಕೀಯ ನಾಯಕನಾಗಬಹುದು ಎಂಬಂತೆ ಚಿತ್ರಿಸಿರುವುದು ನೀರಸವಾಗುತ್ತದೆ.

ದರ್ಶನ್‌ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಡೈಲಾಗ್‌ ಡೆಲಿವರಿಯಲ್ಲಿ ಇನ್ನಷ್ಟು ಫೋರ್ಸ್‌ ರೂಢಿಸಿಕೊಳ್ಳಬೇಕು. ದತ್ತಣ್ಣನ ಪಾತ್ರ ಚಿಕ್ಕದಾದರೂ ನೆನಪಿನಲ್ಲಿ ಉಳಿಯುತ್ತದೆ. ಕಾರ್ಯವಾಸಿ ಕತ್ತೆಕಾಲು ಹಿಡಿಯುವವನಾಗಿ ಅವಿನಾಶ್‌, ಅಂಡರ್‌ ವರ್ಲ್ಡ್‌ ಡಾನ್‌ ಧರ್ಮ, ನಗಿಸುವ ಸಾಧು ಕೋಕಿಲ ಮೋಸ ಮಾಡುವುದಿಲ್ಲ . ಹತ್ತರಲ್ಲಿ ಹನ್ನೊಂದಾಗಬಹುದಾಗಿದ್ದ ‘ಧ್ರುವ’ ಹಾಗಾಗದಂತೆ ತಡೆದಿರುವುದು ರಮೇಶ್‌ಗೆ ಸಿಗುವ ಕ್ರೆಡಿಟ್‌. ಇದು ಇವರ ಪ್ರಥಮ ನಿರ್ದೇಶನದ ಚಿತ್ರ. ಅದೂ ಅಪ್ಪಟ ಸ್ವಮೇಕ್‌. ಇದೆಲ್ಲ ಪ್ಲಸ್‌ ಪಾಯಿಂಟ್‌ಗಳಿಗಾದರೂ ‘ಧ್ರುವ’ನನ್ನು ಒಮ್ಮೆ ನೋಡಬಹುದು ; ನೋಡಿ.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada