»   » 'ಮಠ' ನೋಡಿ ವಿಮರ್ಶೆ ಬರೆದು ಬಹುಮಾನ ಗೆಲ್ಲಿ

'ಮಠ' ನೋಡಿ ವಿಮರ್ಶೆ ಬರೆದು ಬಹುಮಾನ ಗೆಲ್ಲಿ

Posted By:
Subscribe to Filmibeat Kannada

ಬೆಂಗಳೂರು, ಜು.17: ನಿಜಕ್ಕೂ ಜಗ್ಗೇಶ್‌ಗೆ ಈಗ ಕಾಲ ಚೆಂದ ಇಲ್ಲದಿರಬಹುದು. ಆದರೆ ಅವರ ನವರಸಭರಿತ ಚಿತ್ರ 'ಮಠ' ಚಿತ್ರಕ್ಕಂತೂ ಶುಕ್ರದೆಶೆ ಶುರುವಾಗಿದೆ. ದೇವರು ದಿಂಡರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ನಿರ್ದೇಶಕ ಗುರುಪ್ರಸಾದ್ ಕೂಡ ಇದು ಯಾವ ದೈವ ಲೀಲೆ ಎನ್ನುವಂತೆ ಮಠ ಚಿತ್ರಕ್ಕೆ ಮನ್ನಣೆ ಸಿಗುತ್ತಿದೆ. ನಿನ್ನೆಯಷ್ಟೇ ದಟ್ಸ್ ಕನ್ನಡದಲ್ಲಿ ಮಠ ಚಿತ್ರದ ವಿಶೇಷ ಪ್ರದರ್ಶನದ ಕುರಿತು ಸುದ್ದಿ ಪ್ರಕಟವಾದ ಬೆನ್ನಲ್ಲೇ ಮಠ ಚಿತ್ರಕ್ಕೆ ಉತ್ತಮ ವಿಮರ್ಶೆ ಬರೆದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ತಮ್ಮ ಚಿತ್ರದ ಪ್ರಚಾರಕ್ಕಾಗಿ ನಿರ್ಮಾಪಕರು ಈ ರೀತಿ ಕ್ರಮ ಕೈಗೊಂಡಿರಬಹುದು ಎಂದು ಊಹೆ ಬರುವುದು ಸಹಜವಾದರೂ, ಇಲ್ಲಿ ಅದು ತಪ್ಪಾಗುತ್ತದೆ. ಈ ರೀತಿ ಘೋಷಣೆ ನೀಡಿದವರು ಸೈಕೋ ಚಿತ್ರದ ನಿರ್ಮಾಪಕ ಗುರುದತ್ತ ಅವರು. ಮಠ ಚಿತ್ರದ ನಿರ್ದೇಶಕಗುರುಪ್ರಸಾದ್ ಅವರ ಸೃಜನಶೀಲತೆಗೆ ಹಾಗೂ ಅವರ ಸ್ನೇಹಕ್ಕೆ ಇದು ಸಣ್ಣ ಕೊಡುಗೆ ಎಂದು ದೇವದತ್ತ ಹೇಳಿದ್ದಾರೆ.

ಈ ಬಗ್ಗೆ ಮಠ ಚಿತ್ರದ ಆಯೋಜಕರಾದ ಕನ್ನಡಸಾಹಿತ್ಯ.ಕಾಂನ ಅರೇಹಳ್ಳಿ ರವಿ ಅವರನ್ನು ಕೇಳಿದಾಗ, ಹೌದು , ಇದು ನಿಜ ,ಉತ್ತಮ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ನಿರ್ಮಾಪಕರು ಈ ರೀತಿ ಘೋಷಿಸಿದ್ದಾರೆ. ಜು. 17 ರಿಂದ ವಿಮರ್ಶೆಗಳನ್ನು ಸ್ವೀಕರಿಸಲಾಗುವುದು 2008ರಲ್ಲಿ ತೆರೆಕಂಡ ಯಾವುದೇ ಸಿನಿಮಾ ಬಗೆಗೂ ವಿಮರ್ಶೆ ಬರೆದು ಕಳಿಸಬಹುದು ಎಂದು ಅದರ ನಿಯಮಾವಳಿಗಳನ್ನು ಹೇಳಿದರು.

ವಿಷಯ: ಮಠ ಚಿತ್ರದ ಬಗ್ಗೆ ವಿಮರ್ಶೆ
*ಕನಿಷ್ಠ 1500 ಪದಗಳಿರಬೇಕು, ಕನ್ನಡದಲ್ಲಿರಬೇಕು.
* ಬರಹ ಅಥವ ನುಡಿಯನ್ನು ಬಳಸಿರಬೇಕು. (ಯುನಿಕೋಡ್ ಆಧಾರಿತ ವರ್ಡ್ ಡಾಕ್ಯುಮೆಂಟ್ ಕಳುಹಿಸಬೇಡಿ)
*ಸ್ವಂತ ರಚನೆಯಾಗಿರಬೇಕು. ಈ ಮುಂಚೆ ಎಲ್ಲೂ ಪ್ರಕಟಣೆ ಆಗಿರಬಾರದು.
*ವಿಮರ್ಶೆಗಳು ಜುಲೈ 30 ರೊಳಗೆ ಈಮೈಲ್ ಮೂಲಕ ತಲುಪಬೇಕು.
*ಸ್ಪರ್ಧೆಗೆ ಬಂದವುಗಳಲ್ಲಿ ಒಂದಕ್ಕಿಂತಲೂ ಹೆಚ್ಚಿನ ಲೇಖನಗಳು ಬಹುಮಾನಕ್ಕೆ ಯೋಗ್ಯವೆಂದನ್ನಿಸಿದಲ್ಲಿ ಬಹುಮಾನಕ್ಕೆ ಮೀಸಲಿಟ್ಟಿರುವ ನಗದನ್ನು ಸಮಾನವಾಗಿ ಹಂಚಲಾಗುವುದು.
*ಬಹುಮಾನಕ್ಕೆ ಸೂಕ್ತವಾದ ವಿಮರ್ಶೆ ಬರದಿದ್ದರೆ-ಮುಂದೆ ನಡೆಸಬಹುದಾದ ಯಾವುದೇ ಸ್ಪರ್ಧೆಗೆ ಈ ಬಹುಮಾನದ ನಗದನ್ನು ಮೀಸಲಿರಿಸುವ ಹಕ್ಕನ್ನೂ ಸಹ ಕನ್ನಡಸಾಹಿತ್ಯ.ಕಾಂ ಉಳಿಸಿಕೊಂಡಿರುತ್ತದೆ.
*ಪುರಸ್ಕಾರಕ್ಕೆ ಆಯ್ಕೆಯಾದ ಬರಹವನ್ನು ಕನ್ನಡಸಾಹಿತ್ಯ.ಕಾಂನಲ್ಲಾಗಲಿ ಅಥವ ಅದರ ಇನ್ಯಾವುದೇ ಶಾಖಾಜಾಲದಲ್ಲಾಗಲಿ, ಪುಸ್ತಕದಲ್ಲಿ ಬಿಡಿಲೇಖನವಾಗಿಯಾಗಲಿ ಪ್ರಕಟಿಸುವ ಹಕ್ಕುಗಳನ್ನು ಕನ್ನಡಸಾಹಿತ್ಯ.ಕಾಂ ಉಳಿಸಿಕೊಳ್ಳುತ್ತದೆ. ಲೇಖಕರು ಇನ್ಯಾವುದೇ ಸಂದರ್ಭದಲ್ಲಿ ಪ್ರಕಟಿಸುವುದಾದರೆ 'ಕನ್ನಡಸಾಹಿತ್ಯ.ಕಾಂ" ಕೃಪೆಯನ್ನು ಸ್ಪಷ್ಟವಾಗಿ ತೋರಿಸಬೇಕು.
*ವಿಮರ್ಶೆಗಳನ್ನು arehalliravi@gmail.com, ksctanda@gmail.com ವಿಳಾಸಕ್ಕೆ ಕಳಿಸಬಹುದು.

ಬಹುಮಾನದ ಪ್ರಾಯೋಜಕರು:
ನವೀನ್ ಯಜಮಾನ್: ಗುರುಪ್ರಸಾದ್ ಇನ್ಸ್‌ಟಿಟ್ಯೂಟ್ ಆಫ್ ಸ್ಕ್ರಿಪ್ಟ್ ರೈಟಿಂಗ್ ಅಂಡ್ ಫೀಲಿಂ ಡೈರೆಕ್ಷನ್ (GIOSWAD) ಹಾಗು ಸೈಕೋ ಚಿತ್ರದ ನಿರ್ಮಾಪಕರಾದ ಆರ್ ಗುರುದತ್

(ದಟ್ಸ್ ಸಿನಿವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X