»   » ಪೂರಕ ಓದಿಗೆ

ಪೂರಕ ಓದಿಗೆ

Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  -->ನಾವು ನೋಡಿದ ಚಿತ್ರ  -->ಚಿತ್ರ ವಿಮರ್ಶೆಫೆಬ್ರವರಿ 18, 2003ಕತೆಯ ಎಳೆ ಚಿಕ್ಕದಾದರೂ ಇದರಲ್ಲಿ ಕಾಣಿಸುವ ಉಪಕತೆಗಳದೇ ದೊಡ್ಡಕತೆಯಾಗುತ್ತದೆ.

ಅಸಂಖ್ಯಾತ ಪಾತ್ರಗಳು ಗೊಂದಲ ಮೂಡಿಸುತ್ತವೆ. ಶಿವಣ್ಣ ನಟಿಸಿದ ‘ಓಂ’ ಚಿತ್ರ ನೆನಪಿಗೆ ಬರುತ್ತದೆ. ಮತ್ತೆಲ್ಲೋ ಹಿಂದಿ ಚಿತ್ರಗಳ ವಾಸನೆ ಹೊಡೆಯುತ್ತದೆ. ಮಾತು ಕೊಟ್ಟವರು ಕೆಲವು ಕಡೆ ಮಿಂಚಿದ್ದಾರೆ. ಬಹುತೇಕ ದೃಶ್ಯಗಳಿಗೆ ಹಳೆಯ ಮಾತುಗಳನ್ನೇ ಪಾಲಿಶ್‌ ಮಾಡಿದ್ದಾರೆ.

ಭೂಗತ ದೊರೆಯಾಬ್ಬ ಕಾವೇರಿ, ಕನ್ನಡ ಎಂದು ಬೀಗುವುದು ಅಪಹಾಸ್ಯದ ಪರಮಾವಧಿ.

ಅಣಜಿ ನಾಗರಾಜ ಕೆಮರಾ ಮಾತ್ರ ಶ್ರದ್ಧೆಯನ್ನು ತೋರಿಸುತ್ತದೆ. ಚಿತ್ರದ ನಿಜವಾದ ಭೂಗತ ದೊರೆ ಅಂದರೆ ಸಂಕಲನಕಾರ! ಆತ ಕತ್ತರಿ ಹಿಡಿದೇ ಕಕ್ಕಾಬಿಕ್ಕಿಯಾಗುತ್ತಾನೆ.

ಇಡೀ ಚಿತ್ರದ ಒಂದೇ ಒಂದು ಶಾಟ್‌ನಲ್ಲಾದರೂ ನಾಯಕ ಓಂಪ್ರಕಾಶ್‌ರಾವ್‌ ಮುಖದ ಮುಕ್ಕಾಲು ನರ ಅಲುಗಿಸಿದ್ದರೂ ಅವರನ್ನು ನಟನೆಂದು ಕರೆಯಬಹುದಿತ್ತು . ಇದನ್ನೇ ಮುಂದುವರಿಸಿದರೆ ಅವರು ಮತ್ತೊಬ್ಬ ಥ್ರಿಲ್ಲರ್‌ ಮಂಜು ಆಗುವ ಎಲ್ಲ ಅಪಾಯಗಳೂ ಇವೆ. ಚಿಕ್ಕದಾದರೂ ಬೋಲ್ಡ್‌ ಅಭಿನಯದಿಂದ ನಾಯಕಿ ನವ್ಯಾ ಅಚ್ಚರಿ ಹುಟ್ಟಿಸುತ್ತಾಳೆ.

ಗುರುಕಿರಣ್‌ ಹಿನ್ನೆಲೆ ಸಂಗೀತ ದೃಶ್ಯಗಳ ಭಾವವನ್ನು ಹಿಡಿದಿಟ್ಟಿದೆ. ಎಂದಿನಂತೆ ಹಾಡುಗಳಿಗೆ ಅವರು ನಾನಾ ಭಾಷೆಗಳ ಟ್ಯೂನ್‌ ಎತ್ತಿಕೊಂಡು ‘ಭಾಷಾ ಭಾವೈಕ್ಯ’ದ ಹರಿಕಾರರಾಗಿದ್ದಾರೆ.

ಮೊದಲ ಹಾಡಿನಲ್ಲಿ ನೃತ್ಯ ನಿರ್ದೇಶಕನ ಕ್ರಿಯೇಟಿವಿಟಿ ಖುಷಿ ಕೊಡುತ್ತದೆ. ರಕ್ತ, ಲಾಂಗು, ಮಚ್ಚು , ಹೆಣ ಮತ್ತು ಸುಡುಗಾಡು ಇಷ್ಟಪಡುವ ಕನ್ನಡ ಚಿತ್ರರಸಿಕರಿಗೆ ‘ಸಚ್ಚಿ’ ಚಚ್ಚುವಷ್ಟು ಸಂತಸ ಕೊಡಬಹುದು.

(ವಿಜಯ ಕರ್ನಾಟಕ)

Post your views


ನಿಧಾನ ನಿರ್ದೇಶಕ ಓಂ ಪ್ರಕಾಶ್‌ಗೆ ...ಸುಲಗ್ನಾ ಸಾವಧಾನ
ನಾಯಕ ನಾನೇ ನನ್ನ ಕಥೆಗೆ..
ಇಲ್ಲದ ಕತೆಯ ಹುಡುಕುತ್ತಾ...

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada