For Quick Alerts
  ALLOW NOTIFICATIONS  
  For Daily Alerts

  ಶಿವಾಜಿಗೆ ಬಹುಪರಾಕ್‌, ಬಹುಪರಾಕ್‌..!

  By Staff
  |


  ಯಸ್‌, ರಜನಿ ಗೆದ್ದಿದ್ದಾರೆ. ಒಂದು ವರ್ಷದಿಂದ ಶಿವಾಜಿಯನ್ನು ಯಾವಾಗ ನೋಡುತ್ತೇವೊ ಶಿವನೇ ಎಂದು ಕಾಯುತ್ತಿದ್ದವರಿಗೆ ಹಬ್ಬದೂಟ ಮಾಡಿಸಿದ್ದಾರೆ. ಜನ ಫ್ರೆಶ್‌ ರಜನಿಯನ್ನು ನೋಡಿ ತೇಗಿದ್ದಾರೆ, ಜೀವನ ಸಾರ್ಥಕ ಎಂದು ಸಮಾಧಾನ ಪಟ್ಟಿದ್ದಾರೆ.

  ಚುನ್ನ ಅದರದಿಲ್ಲ... ’ ಹೀಗಂತ ಕೈ ಅಲುಗಾಡಿಸುತ್ತಾ, ತುಟಿಯನ್ನು ಒಂಥರಾ ತಿರುಗಿಸುತ್ತಾ, ಕಂಚಿನ ಕಂಠದಿಂದ ರಜನಿ ಹೇಳುತ್ತಿದ್ದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಒಂದೇ ಒಂದು ಪಂಚ್‌ ಡೈಲಾಗು ಎದ್ದು ನಿಲ್ಲು ವಂತೆ ಮಾಡುತ್ತದೆ. ಹೀಗಿರುವಾಗ ರಜನಿ ಕುಣಿದರೆ, ಸ್ಟೈಲಾಗಿ ಅಂಗೈಯಿಂದ ಬಬಲ್‌ ಗಮ್‌ ಚಿಮ್ಮಿಸುತ್ತಾ ಬಾಯಿಗೆ ಎಸೆದು ಕೊಂಡರೆ, ಆಕಾಶದಲ್ಲಿ ಹಾರುತ್ತಾ ಎದುರಾಳಿಯನ್ನು ಒದ್ದರೆ, ಚುನ್ನ ಅದರ ದಿಲ್ಲ...ಎಂದು ಹೇಳುತ್ತಿದ್ದರೆ ಪ್ರೇಕ್ಷಕರ ಗತಿ ಏನಾಗಬೇಡ ?

  ಯಸ್‌, ರಜನಿ ಗೆದ್ದಿದ್ದಾರೆ. ಒಂದು ವರ್ಷದಿಂದ ಶಿವಾಜಿಯನ್ನು ಯಾವಾಗ ನೋಡುತ್ತೇವೊ ಶಿವನೇ ಎಂದು ಕಾಯುತ್ತಿದ್ದವರಿಗೆ ಹಬ್ಬದೂಟ ಮಾಡಿಸಿದ್ದಾರೆ. ಜನ ಫ್ರೆಶ್‌ ರಜನಿಯನ್ನು ನೋಡಿ ತೇಗಿದ್ದಾರೆ, ಜೀವನ ಸಾರ್ಥಕ ಎಂದು ಸಮಾಧಾನ ಪಟ್ಟಿದ್ದಾರೆ.

  ಇದು ರಜನಿ ಮೇನಿಯಾ!

  ಈ ಚಿತ್ರದ ವಿಮರ್ಶೆ ಮಾಡುವುದು ದೊಡ್ಡದಲ್ಲ, ಮೊದಲಾರ್ಧದಲ್ಲಿ ಕಾಮಿಡಿ ಹೆಚ್ಚಾಯಿತು, ಇನ್ನು ಸ್ವಲ್ಪ ಫಾಸ್ಟ್‌ ಇರಬೇಕಿತ್ತು. ಲವ್‌ ಸ್ಟೋರಿ ಕೊಂಚ ಎಳೆದಂತಾಯಿತು, ಅದು ಬಿಟ್ಟರೆ ದ್ವಿತಿಯಾರ್ಧ ಮಸ್ತಾಗಿದೆ. ಹೀಗೆಲ್ಲ ಹೇಳ ಬಹುದು. ಆದರೆ ಅದನ್ನು ಮೀರಿದ್ದು ಶಿವಾಜಿ.

  ಎಲ್ಲ ಓರೆಕೋರೆಗಳನ್ನು ಮರೆತು ಜನರನ್ನು ಥಿಯೇಟರ್‌ನತ್ತ ಎಳೆದುಕೊಂಡು ಬರುವುದು ಇದೆಯಲ್ಲ ಅದು ದೊಡ್ಡದು, ಕೇವಲ ಒಂದು ಚಿತ್ರಕ್ಕೆ ಇಡೀ ಜಗತ್ತಿನಲ್ಲಿ ಕಣ್ಣು ಬಿಟ್ಟುಕೊಂಡು ಕಾಯುವುದು ಇದೆಯಲ್ಲ ಅದು ನೋಡ ಬೇಕು, ಸಿನಿಮಾ ಅಲರ್ಜಿ ವ್ಯಕ್ತಿಗಳೂ ಸಾವಿರಾರು ರೂಪಾಯಿ ಕೊಟ್ಟು ಕೇಕೆ ಹೊಡೆಯುವುದು ಬಂಪರ್‌ ಲಾಟರಿ.

  ಇದೆಲ್ಲ ಕ್ಕಿಂತ ಹೆಚ್ಚಾಗಿ ಶ್ರೀಮಂತ, ಬಡವ, ಅವನದು ಈ ಜಾತಿ, ಇವನದು ಈ ಧರ್ಮ.... ಇಂಥ ಸಾಮಾಜಿಕ ಪೀಡೆಗಳನ್ನು ನಿವಾಳಿಸಿ ಒಗೆದು ಎಲ್ಲರೂ ಬಂದು ನೋಡುವಂತೆ ಮಾಡಿದ್ದು ಶಿವಾಜಿ ಹೆಗ್ಗಳಿಕೆ. ಅಂದರೆ ರಜನಿ ಮಾಡಿದ ಪವಾಡ.

  ಇನ್ನು ಕತೆ ಬಗ್ಗೆ ಏನು ಹೇಳುವುದು?

  ಎಂದಿನಂತೆ ಇದು ಭ್ರಷ್ಟಾಚಾರದ ವಿರುದ್ಧ ಬಂಡೇಳುವ ನಾಯಕನ ಕತೆ. ಅದರಲ್ಲಿ ಭರ್ತಿ ಕಾಮಿಡಿ, ಒಂದಿಷ್ಟು ಪ್ರೇಮ, ಭರ್ಜರಿ ಫೈಟು, ಅದ್ಭುತ ಹಾಡು , ಅದಕ್ಕೆ ಸರಿಯಾಗಿ ಲೋಕೇಶನ್ಸ್‌, ರೆಹಮಾನ್‌ ರಂಗ್‌ರಂಗ್‌ ಸಂಗೀತ, ಮೈ ಮರೆಸುವ ಗ್ರಾಫಿಕ್ಸ್‌, ಕಣ್ಣು ತಂಪಾಗಿಸುವ ಕ್ಯಾಮೆರಾ ಕೆಲಸ. ಏನು ಇದ್ದರೆ ಏನು ಬಿಟ್ಟರೆ ಏನು ? ಇದೆಲ್ಲಾ ಇರದಿದ್ದರೂ ಇದು ಗೆಲ್ಲುತ್ತಿತ್ತು. ಅದಕ್ಕೆ ಕಾರಣ ಒನ್ಸ್‌ ಅಗೇನ್‌ ರಜನಿ.

  ಎಂಬತ್ತರ ದಶಕದಲ್ಲಿ ತಲೆತುಂಬಾ ಜೊಂಪೆ ಗೂದಲನ್ನು ಬಿಟ್ಟು ನಿಲ್ಲುತ್ತಿದ್ದ ರಜನಿಯನ್ನು ಮತ್ತೊಮ್ಮೆ ಈ ಚಿತ್ರದಲ್ಲಿ ಕಾಣುತ್ತೀರಿ. ಅಗದಿ ಹುಡುಗನಂತೆ ಚುರುಕಾಗಿ, ಪಂಕಾಗಿ ಡ್ರೆಸ್‌ ಮಾಡಿಕೊಂಡು, ಅರಳು ಹುರಿದಂತೆ ಮಾತನಾಡುವ ರಜನಿಯನ್ನು ನೋಡುವುದೇ ಒಂದು ಖುಷಿ.
  ಅವರದೇ ಆದ ಮ್ಯಾನರಿಸಂ, ಡೈಲಾಗ್‌ ಡೆಲಿವರಿ, ಕುಣಿತ, ಫೈಟಿಂಗ್‌, ಕಾಮಿಡಿ ಅವರನ್ನು ಇನ್ನಷ್ಟು ಪ್ರೀತಿಸುವಂತೆ, ಮೋಹಿಸುವಂ ಮಾಡುತ್ತದೆ. ಆದರೂ ಇದನ್ನು ಪೂರ್ತಿಯಾಗಿ ಶಂಕರ್‌ ಸಿನಿಮಾ ಎನ್ನುವಂತಿಲ್ಲ. ಮೊದಲಾರ್ಧದಲ್ಲಿ ಕಾಮಿಡಿ ದೃಶ್ಯಗಳು ಚೆನ್ನಾಗಿದ್ದರೂ ಮೂಲ ಕತೆಗೆ ಕೊಂಚ ತಡೆ ಒಡ್ಡುತ್ತದೆ. ಲವ್‌ ಸೀನ್‌ಗಳು ಅಲ್ಲಲ್ಲಿ ಎಳೆದಂತಾಗಿವೆ. ಈ ಕೊರತೆ ಬಿಟ್ಟರೆ ಶಿವಾಜಿಯನ್ನು ಮುಲಾಜಿಲ್ಲದೆ ನೋಡಬಹುದು.

  ಪೂರಕ ಓದಿಗೆ
  ‘ಶಿವಾಜಿ’ ಗ್ಯಾಲರಿ..
  ಗೆಳೆಯರೇ, ಈ ಚಿತ್ರವನ್ನು ನಾವೇಕೆ ತಡೆಯಬೇಕು ಗೊತ್ತೆ?
  ‘ಶಿವಾಜಿ’ ತಡೆಯಲು ನಾವ್‌ ರೆಡಿ... -ನಾರಾಯಣಗೌಡ
  ಶಿವಾಜಿ : ಗಂಗರಾಜು ಉತ್ಸುಕತೆ ಎಷ್ಟು ಸರಿ? ಎಷ್ಟು ತಪ್ಪು?
  ತಮಿಳು ಚಿತ್ರದ ಬಿಡುಗಡೆ ಈ ಹೊತ್ತಿನಲ್ಲಿ ಸಾಧುವಲ್ಲ...
  ಬೆಂಗಳೂರಿನಲ್ಲಿ ರಜನಿ ‘ಶಿವಾಜಿ’ ಗುಟ್ಟಾಗಿ ಚಿತ್ರೀಕರಣ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X