»   » ನೃತ್ಯವಿದೆ, ಹಾಡಿದೆ. ಫೆಂಟಾಸ್ಟಿಕ್‌ ಫ್ಯಾಂಟಸಿಗಳಿವೆ. ಗ್ರಾಫಿಕ್‌ ಮಾಂತ್ರಿಕ ಸ್ಪರ್ಶವಿದೆ.. ರಜನಿ ಚಿತ್ರದಲ್ಲಿ ಏನೇನಿರಬೇಕೋ ಅವಷ್ಟೂ ಇವೆ. ಜೊತೆಗೆ ರಾಜಕೀಯಕ್ಕಿಳಿಯುವ ಪೂರ್ವ ಸೂಚನೆಯೂ ಚಿತ್ರದಲ್ಲಿದೆ.

ನೃತ್ಯವಿದೆ, ಹಾಡಿದೆ. ಫೆಂಟಾಸ್ಟಿಕ್‌ ಫ್ಯಾಂಟಸಿಗಳಿವೆ. ಗ್ರಾಫಿಕ್‌ ಮಾಂತ್ರಿಕ ಸ್ಪರ್ಶವಿದೆ.. ರಜನಿ ಚಿತ್ರದಲ್ಲಿ ಏನೇನಿರಬೇಕೋ ಅವಷ್ಟೂ ಇವೆ. ಜೊತೆಗೆ ರಾಜಕೀಯಕ್ಕಿಳಿಯುವ ಪೂರ್ವ ಸೂಚನೆಯೂ ಚಿತ್ರದಲ್ಲಿದೆ.

Subscribe to Filmibeat Kannada

ಪೆರಿಯಾರ್‌ ರಾಮಸ್ವಾಮಿಯವರಿಗೆ ತದ್ವಿರುದ್ಧವಾದ ತತ್ವಗಳನ್ನು ಬೋಧಿಸುವ ಪಾಠಗಳಿವೆ. ಮೂಢನಂಬಿಕೆಯ ಹತ್ತಿರ ಹೋಗಿ ನಂತರ ಅದನ್ನು ವಾಸ್ತವಕ್ಕೆ ತಂದು ನಿಲ್ಲಿಸುವ ತಂತ್ರಗಳಿವೆ. ಎಂಜಿಆರ್‌, ಶಿವಾಜಿಗಣೇಶನ್‌ ಅವರನ್ನು ಲೇವಡಿಯಾಡುವ ದೃಶ್ಯಗಳಿವೆಯಾದರೂ ಕೊನೆಯಲ್ಲಿ ಒಳ್ಳೆಯ ತತ್ವಗಳನ್ನು ಸ್ವೀಕರಿಸುವ ಮೂಲಕ ಅವರ ಅಭಿಮಾನಿಗಳ ಕೃಪೆಗೆ ಪಾತ್ರವಾಗುವ ಸಂದರ್ಭಗಳಿವೆ. ಕರುಣಾನಿಧಿ ಇದ್ದಾರೆ, ಅಣ್ಣಾದೊರೈ ಇದ್ದಾರೆ. ಅಷ್ಟೇ ಏಕೆ, ಚಿತ್ರದ ತುಂಬಾ ಜಯಲಲಿತಾ ಇದ್ದಾರೆ. ಕಾಣುವ ಕಣ್ಣಿಗೆ ಇದೊಂದು ಪೊಲಿಟಿಕಲ್‌ ಸಟೈರ್‌. ಕಾಣದ ಕಣ್ಣಿಗೆ ಟಿಪಿಕಲ್‌ ರಜನಿ ಚಿತ್ರ.

ಅಭಿನಯದಲ್ಲಿ ರಜನಿಯದ್ದು ಟಿಪಿಕಲ್‌ ರಜನಿ ಸ್ಟೈಲ್‌! ಸುಜಾತಾ, ನಂಬಿಯಾರ್‌, ಸೆಂದಿಲ್‌, ಡೆಲ್ಲಿ ಗಣೇಶ್‌, ಆಶಿಷ್‌ ವಿದ್ಯಾರ್ಥಿ, ಅಮರೀಶ್‌ಪುರಿ ಅಭಿನಯ ಖುಷಿ ಕೊಡುತ್ತದೆ. ಮನೀಷಾ ಒಂದು ಚೆಂದದ ಗೊಂಬೆ. ರೆಹಮಾನ್‌ರ ಸಂಗೀತ ಪೂರಕ. ಕ್ಯಾಮರಾ ಕೆಲಸ ಚೇತೋಹಾರಿ.

ಒಟ್ಟಿನಲ್ಲಿ ಕ್ರಿಯೇಟರ್‌ ಗಾಡ್‌ಫಾದರ್‌ ಆಗಿದ್ದಾತ ಅಧಿಕಾರದ ಚುಕ್ಕಾಣಿ ಹಿಡಿಯುವ ಸೂಚನೆಯವರೆಗೆ ಬಂದು ಚಿತ್ರ ನಿಲ್ಲುತ್ತದೆ. ಕೊನೆಯಲ್ಲಿ ಇದು ಆರಂಭ ಎಂಬ ಘೋಷ ವಾಕ್ಯ. ರಜನಿ ರಾಜಕೀಯಕ್ಕಿಳಿಯುವುದು ಇಲ್ಲಿ ಸಾಬೀತಾಗುತ್ತದೆ.

(ವಿಜಯ ಕರ್ನಾಟಕ)

ಪೂರಕ ಓದಿಗೆ-
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada