»   » ಹೌದು ಇದು ಕಲಾಸಿಪಾಳ್ಯ ದಂಥ ಚಿತ್ರ !

ಹೌದು ಇದು ಕಲಾಸಿಪಾಳ್ಯ ದಂಥ ಚಿತ್ರ !

Subscribe to Filmibeat Kannada
  • ಎಂ.ಡಿ.
‘ಕಲಾಸಿಪಾಳ’್ಯ ಬೆಂಗಳೂರಿನ ಅತ್ಯಂತ ಗಜಿಬಿಜಿಯ, ನಾನಾ ವ್ಯವಹಾರಗಳು ನಡೆಯುವ ಏರಿಯಾ. ಹಿಂದೆ ದರ್ಶನ್‌ ಮೊದಲ ಚಿತ್ರ ‘ಮೆಜೆಸ್ಟಿಕ್‌’ ಕೂಡ ಏರಿಯಾ ಹೆಸರಿಟ್ಟುಕೊಂಡು ಯಶಸ್ವಿಯಾಗಿತ್ತು. ಈಗ ‘ಕಲಾಸಿಪಾಳ್ಯ’ ಸರದಿ.

ಕೆಂಚ (ದರ್ಶನ್‌) ತನ್ನ ಪಾಲಕರ (ಅವಿಕಾಶ್‌,ಚಿತ್ರಾ ಶಣೈ)ಜತೆ ವಾಸಿಸುತ್ತಿರುತ್ತಾನೆ. ಆತನಿಗೊಬ್ಬ ತಂಗಿ. ಕೆಂಚ ಎಸ್ಸೆಸ್ಸೆಲ್ಸಿಯಲ್ಲಿ ಏಳು ಬಾರಿ ನಪಾಸು. ಕೈಲಿ ಕೆಲಸವಿಲ್ಲದೆ ಅಲೆಯುವಾತ. ತಂದೆ-ತಾಯಿಗಳಿಂದಲೂ ಈ ಬಗ್ಗೆ ಬೈಗುಳ. ಇಂತಿಪ್ಪ ಕೆಂಚನಿಗೆ ಪ್ರೀತಿಯೆಂಬ ಬಾವಿಗೆ ಬೀಳಲು ಪಕ್ಕದ್ಮನೆ ಪ್ರಿಯಾ(ರಕ್ಷಿತಾ) ಇದ್ದಾಳೆ.

ಕಲಾಸಿಪಾಳ್ಯ, ಎಂಎಲ್‌ಎ ಕೆಂಚಪ್ಪನ ಬಿಗಿ ಹಿಡಿತ ಹೊಂದಿರುವ ಪ್ರದೇಶ. ಅವನಿಗೆ ಸಾಥ್‌ ಕೊಡಲು ಅಂಡರ್‌ವರ್ಲ್ಟ್‌ ರೌಡಿ ಮುನ್ನಾಬಾಯಿ ಇದ್ದಾನೆ.

ಒಮ್ಮೆ ಪ್ರಿಯಾ ಮತ ಹಾಕಲು ಹೋದಾಗ ಜಲೀಲ್‌ ಆಕೆಯನ್ನು ರೇಗಿಸುತ್ತಾನೆ. ಕೆಂಚ ಜಲೀಲ್‌ಗೆ ತಕ್ಕ ಪಾಠ ಕಲಿಸಿ, ಪೋಲೀಸರಿಂದ ಆರೆಸ್ಟ್‌ ಮಾಡಿಸುತ್ತಾನೆ. ನಿರುದ್ಯೋಗಿ ಕೆಂಚ ಒಂದು ಬಿಸ್‌ನೆಸ್‌ ಶುರುಮಾಡುತ್ತಾನೆ. ಈ ಸಂದರ್ಭದಲ್ಲಿ ಜಲೀಲ್‌ನೊಂದಿಗೆ ಎಲ್ಲೋ ಮುಖಾಮುಖಿಯಾಗಿ, ಜಲೀಲ್‌ನನ್ನು ಸಾಯಿಸಿ ಬಿಡುತ್ತಾನೆ. ಸಿಟ್ಟಿಗೆದ್ದ ಮುನ್ನಾಬಾಯಿ, ಕೆಂಚನ ಇಡೀ ಕುಟುಂಬವನ್ನೆ ನಾಶಗೊಳಿಸಿ,ಕೆಂಚನನ್ನು ಬಡಿಯುತ್ತಾನೆ. ಇಲ್ಲಿಂದ ಮುಂದೆ ಕೆಂಚ ಏನು ಮಾಡುತ್ತಾನೆ, ಕ್ಲೈಮಾಕ್ಸ್‌ ಏನಾಗುತ್ತದೆ ವಿವರಿಸುವ ಅವಶ್ಯಕತೆ ಇಲ್ಲ. ದರ್ಶನ್‌ ಇದ್ದ ಮೇಲೆ ಏನೆಲ್ಲ ಇರಬೇಕೋ ಅದೆಲ್ಲ ಇದೆ. ರಕ್ಷಿತಾಗೆ ಏನು ಕೆಲಸ ಎಂಬುದು ಮಾತ್ರ ಗೊತ್ತಿಲ್ಲ.

ಇಂಥ ಚಿತ್ರಗಳು ನೂರಾರು ಬಂದು ಹೋಗಿವೆ. ಅಲ್ಲದೆ ಓಪನಿಂಗ್‌ ಶಾಟ್ಸ್‌ಗಳಲ್ಲಿ ತೆಲುಗು ಘರ್ಷಣಂ ಛಾಯೆ ಎದ್ದು ಕಾಣುತ್ತದೆ. ಹಾಗೆ ನೋಡಿದರೆ ಅನೇಕ ಚಿತ್ರಗಳ ಛಾಯೆ ಇದರ ಮೇಲಿದೆ.

ಚಿತ್ರದಲ್ಲಿ ಸಾಧುಕೋಕಿಲ ಹಾಸ್ಯ ಮಧ್ಯೆ ಮಧ್ಯೆ ನಿರಾಳತೆ ನೀಡುತ್ತದೆ. ದರ್ಶನ್‌ ನಟನೆ ಪರವಾಗಿಲ್ಲ. ಅವಿನಾಶ್‌, ಚಿತ್ರಾ ಶೆಣೈ, ತಾರಕೀಶ್‌ ಪಟೇಲ್‌, ಸತ್ಯಮೇಲು ಮತ್ತಿತರರು ತಂತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.

ಅಂದಹಾಗೆ ‘ಎ.ಕೆ.47’ನಂತಹ ಉತ್ಕೃಷ್ಟ ತಾಂತ್ರಿಕತೆಯ ಚಿತ್ರ ನೀಡಿದ ನಿರ್ದೇಶಕ ಓಂಪ್ರಕಾಶ್‌, ನಿರ್ಮಾಪಕ ರಾಮು ಜೋಡಿಯ ಬಹುನಿರೀಕ್ಷೆಯ ಚಿತ್ರವಿದು.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada