twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಪಪ್ಪು : ಮನರಂಜನೆಗೆ ಮೋಸವಿಲ್ಲ

    By Mahesh
    |

    ಬಹುಶಃ ಮನುಷ್ಯನಾದ ಮನುಷ್ಯನಿಗೇ ಆ 'ಆದಿ ಮಾನವ'ರೂಪಿಯಷ್ಟು ಮುದ್ದಾಗಿ ನಟಿಸುವುದು ಕಷ್ಟದ ಮಾತು ಎನ್ನಬಹುದು. ಅದರ ಸ್ಪೆಷಾಲಿಟಿನೇ ಹಾಗೆ... ನಿಂತಲ್ಲೇ ಕುಣಿಯುತ್ತದೆ. ಆಕಾಶ ದೆತ್ತರಕ್ಕೆ ಎಗರುತ್ತದೆ. ಕೈ ಕಾಲು ಆಡಿಸುತ್ತಾ ನಡೆಯುತ್ತದೆ. ಮೂತಿಯನ್ನು ಮುಂದೆ ಮಾಡಿ, ಹಿರೋಯಿನ್ ಹತ್ತಿರ ಚುಮ್ಮಾ ಕೇಳುತ್ತದೆ. ಕಣ್ಣು ಪಿಳಪಿಳಿಸುತ್ತದೆ. ಕೆನ್ನೆ ಕೆರೆದು ಕೊಳ್ಳುತ್ತಾ ತುಂಟಾಟ ಮಾಡುತ್ತದೆ. ಫೈಟ್ ಮಾಡಲು ನಿಂತಾಗಲಂತೂ ಥೇಟ್ ಅಭಿನವ ಜಾಂಬುವಂತ, ಎಕ್ಸ್ ಹನುಮಂತ!

    ಹೆಸರು ಒರಾಗಂಟೋನ್ ಅಲಿಯಾಸ್ ಪಪ್ಪು. ಅಗೋ ನೋಡು ಬಂತು ಗೋರಿಲ್ಲಾ ಎನ್ನುವ ಹೊತ್ತಿಗೆ ಮಕ್ಕಳ ಮನಸ್ಸು ಮುದಗೊಳ್ಳುತ್ತದೆ. ಅದರ ಬಾಲ ಇದು ಎನ್ನುವಂತೇ ಕಪಿ ಪುಂಗವನ ಜತೆ ಪುಟಾಣಿ ಪುಟ್ಟ ಸ್ನೇಹಿತ್. ಅವನು ಅಪ್ಪು-ಅವನ ದೋಸ್ತಿ ಪಪ್ಪು. ಇಬ್ಬರೂ ಸೇರಿ ಒಂದಷ್ಟು ಮಂದಿಗೆ ಚಳ್ಳೇಹಣ್ಣು ತಿನ್ನಿಸುತ್ತಾರೆ. ಆಟ ಆಡಿಸುತ್ತಾರೆ. ಕಾಂಬೋಡಿಯಾದಲ್ಲಿ ನಿಂತು ಕಿಲ ಕಿಲ ನಗಿಸುತ್ತಾರೆ. ಮಾಸ್ಟರ್ ಸ್ನೇಹಿತ್ ಮುದ್ದಾಗಿ ಕಾಣುವುದರ ಜತೆಗೆ ಮಕ್ಕಳ ಮೈಲೇಲೆ ದೊಡ್ಡವರು ಬಂದಂತೇ ನಟಿಸಿ ದ್ದಾನೆ. ಈ ಅಪ್ಪು ಆ ಪಪ್ಪುಸೇರಿ ಆಡುವ ಆಟ= ಮಸ್ತ್ ಮಜಾ ಮಾಡಿ!

    ಮಕ್ಕಳ ಚಿತ್ರ ಎಂದರೆ ನಮ್ಮಲ್ಲಿ ಒಂದು ಭಾವನೆಯಿದೆ...ಅಲ್ಲಿ ಮನರಂಜನೆಗಿಂತ ಹೆಚ್ಚು ಮೇಷ್ಟ್ರಬೋಧನೆ, ಮಕ್ಕಳ ವೇದನೆಗಳೇ ಜಾಸ್ತಿ. ಮಕ್ಕಳ ಚಿತ್ರವಾದರೂ ಅಲ್ಲಿ ಎಂಜಾಯೆಬಲ್ ಅಂಶಗಳು ಕಡಿಮೆ. ಅವಾರ್ಡ್ ಉದ್ದೇಶಿತ ಮಕ್ಕಳ ಚಿತ್ರಗಳೇ ಹೆಚ್ಚು... ಈ ಎಲ್ಲ ಕಟ್ಟುಪಾಡು ಮತ್ತು ಅಲಿಖಿತ ಸಂಪ್ರ ದಾಯಗಳಿಂದ ಹೊರತಾಗಿದೆ ಅಪ್ಪುಪಪ್ಪು. ದೊಡ್ಡವರು
    ಮಕ್ಕಳಾಗಿ ಈ ಚಿತ್ರ ನೋಡಿದರೆ ಖಂಡಿತ ಎಂಜಾಯ್ ಮಾಡುತ್ತಾರೆ. ಮಕ್ಕಳು ಮಕ್ಕಳಾಗಿ ಮಕ್ಕಳಂತೇ ಕೂತರೆ ಅರ್ಧಕ್ಕೆ ಏಳುವ ಮನಸ್ಸಾಗುವುದಿಲ್ಲ.

    ಹಾಗಂತ ಇಡೀ ಚಿತ್ರದಲ್ಲಿ ಕಾಮಿಡಿಯೇ ಜೀವನ ಸಾಕ್ಷಾತ್ಕಾರ ಎನ್ನಲಾಗು ವುದಿಲ್ಲ. ಕತೆ ಭಾರತದಲ್ಲಿ ಶುರುವಾಗಿ, ಕಾಂಬೋಡಿಯಾ ದೇಶದಲ್ಲಿ ಲ್ಯಾಂಡ್ ಆಗಿ, ಕೊನೆಗೆ ಭಾರತ-ಕರ್ನಾ ಟಕದಲ್ಲೇ ಅಂತ್ಯಗೊಳ್ಳುತ್ತದೆ.

    ನಿರ್ದೇಶಕ ಅನಂತರಾಜು ಕೆಲಸ ಎದ್ದುಕಾಣುತ್ತದೆ. ಕಪಿಯಿಂದ ಕೆಲಸ ತೆಗೆಸುವುದರ ಜತೆಗೆ ಪುಟ್ಟ ಹುಡುಗ ನಿಂದಲೂ ಅಭಿನಯ ಕಕ್ಕಿಸಿರುವುದು ನಿಜಕ್ಕೂ ಶ್ಲಾಘನೀಯ. ಚಿತ್ರಕತೆ ಮೊದಲಾರ್ಧದಲ್ಲಿ ಸ್ವಲ್ಪ ವೀಕೋವೀಕು ಎನ್ನುವುದನ್ನು ಬಿಟ್ಟರೆ ದ್ವಿತೀಯಾರ್ಧ ಹೋಗಿದ್ದೇ ಗೊತ್ತಾಗುವುದಿಲ್ಲ.

    ಕನ್ನಡದಲ್ಲಿ ಇಂಥ ಸಿನಿಮಾಗಳು ನಿಜಕ್ಕೂ ಸವಾಲು. ನಮ್ಮಲ್ಲಿ ಕಡಿಮೆ ಬಜೆಟ್‌ನಲ್ಲಿ ಕ್ವಾಲಿಟಿ ಕೊಡುವವರಿದ್ದಾರೆ. ಆದರೆ, ಕ್ವಾಲಿಟಿ ಬಜೆಟ್‌ನಲ್ಲಿ ಕ್ವಾಲಿಟಿ ಕೊಡುವವರು ಕಡಿಮೆ. ಅದಕ್ಕೆ ನಿರ್ಮಾಪಕರ ಬೆಂಬಲದ ಜತೆಗೆ ನಿರ್ದೇಶಕರ ಬಲವೂ ಬೇಕು. ಇಲ್ಲಿ ಪುಟಾಣಿ ಕಮ್ ನಾಯಕ ಸ್ನೇಹಿತ್ ನಿರ್ದೇಶಕರ ಮಗ ಎನ್ನುವುದು ಈ ಮಟ್ಟದ ಖರ್ಚಿಗೆ ಕಾರಣವಾಗಿದೆಯೋ ಗೊತ್ತಿಲ್ಲ!

    ಅದೇನೇ ಇದ್ದರೂ ಸಿನಿಮಾ ಅದೂಟಛಿರಿಯಾಗಿ ಮೂಡಿ ಬಂದಿದೆ ಎನ್ನುವುದಷ್ಟೇ ಖುಷಿಯ ವಿಚಾರ. ಹಂಸಲೇಖ ಹಾಡುಗಳು ವಿಶೇಷವಾಗಿ ಮೂಡಿಬರದಿದ್ದರೂ ಎರಡು ಕೇಳಿಸಿಕೊಂಡು ಸುಮ್ಮನಾಗಬಹುದು. ಕೋಮಲ್ ಮತ್ತು ರಾಜು ತಾಳೀಕೋಟೆ ಇರುವುದು ಚಿತ್ರಕ್ಕೆ ಪ್ಲಸ್ ಆಗಿದೆ.

    ರಂಗಾಯಣ ರಘು ಆಗ ಈಗ ಬಂದು ಚಕಮ್ ಕೊಡು ವುದು ಮಜಾ ಕೊಡುತ್ತದೆ. ಅಬ್ಬಾಸ್-ರೇಖಾ ಜೋಡಿ ಹೇಳಿ ಮಾಡಿಸಿದಂತಿದೆ. ಜೆನ್ನಿಫರ್ ಆಟಕ್ಕುಂಟು ಲೆಕ್ಕಕ್ಕಿಲ್ಲ.
    ಕರ್ನಾಟಕ ರವಿ ಬಾಡಿ ತೋರಿಸುವುದನ್ನೇ ಭಾರೀ ಸಾಧನೆ ಎಂದುಕೊಂಡಿದ್ದರೆ ಅದು ತಪ್ಪು ಮತ್ತು ಒಪ್ಪು! ರಾಮ್‌ನಾರಾಯಣ್ ಸಂಭಾಷಣೆ ಅಲ್ಲಲ್ಲಿ ನಗು ಬರಿಸುತ್ತದೆ. ಎಸ್. ಕೃಷ್ಣ ಅವರ ಛಾಯಾಗ್ರಹಣ ವಿಶ್ವ ಪರ್ಯಟನೆ ಮಾಡಿಸುತ್ತದೆ. ಕಾಂಬೋಡಿಯಾ ಮಹಡಿ ಗಳನ್ನು ಚೆನ್ನಾಗಿ ತೋರಿಸಿದ್ದಾರೆ ಕೃಷ್ಣ.

    ಒಟ್ಟಾರೆ ಇದು ಮಕ್ಕಳಿಗೆ ಹೇಳಿಮಾಡಿಸಿದ ಸಿನಿಮಾ. ದೊಡ್ಡವರು ಯಾವುದು ಬಾಲಿಷ ಎನ್ನುತ್ತಾರೋ ಅದು ಮಕ್ಕಳ ಪಾಲಿಗೆ ಪಂಚಾಮೃತ. ಅದೇ ರೀತಿ ಚಿಣ್ಣರು ಬಯಸುವ
    ಮನರಂಜನೆಗೆ ಮೋಸವಿಲ್ಲ ಅಪ್ಪು-ಪಪ್ಪುಗಿಂತ ರುಚಿ ಬೇರೆ ಇಲ್ಲ!

    Sunday, September 19, 2010, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X