»   » ನಾಯಕ ರಾಜೇಂದ್ರ ಅವರ ಅಭೂತಪೂರ್ವ ಅಭಿನಯ ಕಕ್ಕಾಬಿಕ್ಕಿಯಾಗಿಸುತ್ತದೆ. ಚಿತ್ರದಲ್ಲಿ ಖಳನಾಯಕರೇ ಇಲ್ಲ ಅನ್ನುವುದನ್ನು ಕೆಲವು ಕಡೆ ರಾಜೇಂದ್ರ ಸುಳ್ಳು ಮಾಡಿದ್ದಾರೆ.

ನಾಯಕ ರಾಜೇಂದ್ರ ಅವರ ಅಭೂತಪೂರ್ವ ಅಭಿನಯ ಕಕ್ಕಾಬಿಕ್ಕಿಯಾಗಿಸುತ್ತದೆ. ಚಿತ್ರದಲ್ಲಿ ಖಳನಾಯಕರೇ ಇಲ್ಲ ಅನ್ನುವುದನ್ನು ಕೆಲವು ಕಡೆ ರಾಜೇಂದ್ರ ಸುಳ್ಳು ಮಾಡಿದ್ದಾರೆ.

Subscribe to Filmibeat Kannada

ಇದೊಂದು ಹಾರರ್‌ ಸಿನಿಮಾ. ಕಾಡಿನಲ್ಲಿರುವ ನಿಗೂಢ ವ್ಯಕ್ತಿಗಳ ಸುತ್ತ ಕತೆ ಹೆಣೆಯಲಾಗಿದೆ. ಅಲ್ಲಿಗೆ ಹೋಗುವ ಕತೆಗಾರನ ಅನುಭವ ಮತ್ತು ಅಲ್ಲಿಂದ ಪಾರಾಗಿ ಬರುವುದೆ ಮುಖ್ಯ ಹಂದರ. ಚಿತ್ರದ ಮೊದಲರ್ಧದಲ್ಲಿ ನಿರ್ದೇಶಕನ ಹಿಡಿತವೇ ಇಲ್ಲ. ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಉದ್ದೇಶದಿಂದಲೇ ಸೃಷ್ಟಿಸಿದ ಘಟನೆಗಳು ನಾಟಕೀಯವೆನಿಸುತ್ತವೆ. ಕೆಲವು ಬಾಲಿಶವಾಗಿವೆ. ನನಸಿನಂತೆ ಕೊಂಚ ಬಿಗಿಯಾಗಿದೆ. ವೇಗವಾಗಿ ಓಡುವ ಕತೆಗೆ ಪಂಚ್‌ ನೀಡುವ ದೃಶ್ಯಗಳು ಸಹಕರಿಸಿವೆ. ಕೊನೆಯ ಸಸ್ಪೆನ್ಸ್‌ ಉಳಿಸಿಕೊಳ್ಳುವಲ್ಲಿ ನಿರ್ದೇಶಕ ಲಕ್ಕಿ ಶಂಕರ್‌ ಯಶಸ್ವಿಯಾಗಿದ್ದಾರೆ. ಆದರೆ ಇದೊಂದು ‘ದೆವ್ವ’ದ ಸಿನಿಮಾ ಅನ್ನುವುದು ಅವರ ನಟನಾ ಸಾಮರ್ಥ್ಯ ಮತ್ತು ದೇಹದಾರ್ಢ್ಯ ಸಾಬೀತು ಪಡಿಸುತ್ತದೆ. ನಾಯಕಿ ಕೌಸಲ್ಯಾಳಿಗೆ ಹೇಳಿಕೊಳ್ಳುವ ಅವಕಾಶವೇ ಇಲ್ಲ. ಮೈಕೆಲ್‌ ಮಧು ಪರವಾಗಿಲ್ಲ. ಕಾಡು ಮತ್ತು ಜಲಪಾತದ ದೃಶ್ಯಗಳಿಗೆ ಜೀವ ತುಂಬುವ ಛಾಯಾಗ್ರಾಹಕ ಪಾತ್ರಗಳ ತಲೆ ಕತ್ತರಿಸುವಂತೆ ಕ್ಯಾಮೆರಾ ಹಿಡಿದದ್ದು ಅಚ್ಚರಿ. ‘ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌’ ಅಂದರೆ ಸಂಭಾಷಣೆ ಬರೆದ ರಾಜಾರಾಂ. ‘ನಡೆಯುತ್ತೆ ಬಿಡಪ್ಪ’ ಎನ್ನುವ ನಿರ್ಲಕ್ಷ್ಯ ಬರೆದ ಪ್ರತಿ ಸಾಲಿನಲ್ಲಿ ಕಾಣಿಸುತ್ತದೆ. ಲಯೇಂದ್ರ ನೀಡಿದ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ಕೊಡುತ್ತವೆ. ಹಳೆಯ ರಾಗದ ಧಾಟಿಯಲ್ಲಿರುವ ಹಾಡೊಂದು ಲಯೇಂದ್ರ ಸೃಜನಶೀಲತೆಗೆ ಸಾಕ್ಷಿ. ಹಿನ್ನೆಲೆ ಸಂಗೀತ ನಿಜಕ್ಕೂ ಹಾರರ್‌. ಅಂದಹಾಗೆ, ಕತೆಗೂ ಚಿತ್ರದ ಹೆಸರಿಗೂ ವಿಶೇಷ ಸಂಬಂಧವಿಲ್ಲ. ‘ನೋ ಲಾಜಿಕ್‌ ಓನ್ಲಿ ಮ್ಯಾಜಿಕ್‌’ ಅಂತ ಕರೆದಿರೋದು ಇದಕ್ಕೇನಾ?

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada