twitter
    For Quick Alerts
    ALLOW NOTIFICATIONS  
    For Daily Alerts

    '2.O' ವಿಮರ್ಶೆ: ಗ್ರಾಫಿಕ್ಸ್ ಅಬ್ಬರ, ಶಂಕರ್ ಜಾದುಗಾರ

    |

    2018ರ ಬಹು ನಿರೀಕ್ಷಿತ ಸಿನಿಮಾ '2.O' ಇಂದು ಪ್ರೇಕ್ಷಕರ ಮುಂದೆ ಬಂದಿದೆ. ಇಡೀ ಭಾರತದ ಅತಿ ಹೆಚ್ಚು ಬಜೆಟ್ ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಸರಳ ಕಥೆ ಇಟ್ಟುಕೊಂಡು ಅದನ್ನ ಅದ್ಭುತ ಶೈಲಿಯಲ್ಲಿ ಶಂಕರ್ ಹೇಳಿದ್ದಾರೆ. ಈ ಇಡೀ ಸಿನಿಮಾದ ಶಕ್ತಿ ಗ್ರಾಫಿಕ್ಸ್ ಆಗಿದೆ. 3D ಸಿನಿಮಾ ಇಷ್ಟ ಪಡುವವರಿಗೆ '2.O' ಹಬ್ಬದ ಊಟ.

    ಪಕ್ಷಿಗಳು ಉಳಿವಿಗಾಗಿ ಹೋರಾಟ

    ಪಕ್ಷಿಗಳು ಉಳಿವಿಗಾಗಿ ಹೋರಾಟ

    ದಿನದಿಂದ ದಿನಕ್ಕೆ ಪಕ್ಷಿಗಳ ಸಂಖ್ಯೆ ಕಡಿಮೆ ಆಗುತ್ತಲೇ ಇದೆ. ಅದರಲ್ಲಿಯೂ ಮೊಬೈಲ್ ಟವರ್ ಬಂದ ಮೇಲೆ ಪಕ್ಷಿಗಳನ್ನ ನೋಡುವುದೇ ಕಷ್ಟವಾಗಿ ಬಿಟ್ಟಿದೆ. ಈ ವಿಷಯದ ಮೇಲೆ '2.O' ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಪಕ್ಷಿಗಳ ಉಳಿವಿಗಾಗಿ ಇಲ್ಲಿನ ಒಂದು ಪಾತ್ರ ಏನೆಲ್ಲ ಮಾಡುತ್ತದೆ ಎನ್ನುವುದೇ ಚಿತ್ರದ ಕಥೆಯ ಕೇಂದ್ರ ಬಿಂದು.

    ಇದು 'ಒನ್ ಲೈನ್ ಸ್ಟೋರಿ'

    ಇದು 'ಒನ್ ಲೈನ್ ಸ್ಟೋರಿ'

    ಸಿನಿಮಾದ ಒನ್ ಲೈನ್ ಸ್ಟೋರಿ ಹೇಳುವುದಕ್ಕಿಂತ ಈ ಸಿನಿಮಾದಲ್ಲಿ 'ಒನ್ ಲೈನ್ ಸ್ಟೋರಿ' ಮಾತ್ರ ಇದೆ ಎಂದು ಹೇಳುವುದು ಉತ್ತಮ. ತೀರ ಸರಳ ಕಥೆಯನ್ನು ಇಟ್ಟುಕೊಂಡು ಮಾಡಿರುವ ಒಂದು ಹೊಸ ಪ್ರಯೋಗವಿದು. ಪಕ್ಷಿ ರಾಜನ್ (ಅಕ್ಷಯ್ ಕುಮಾರ್) ಒಬ್ಬ ಪಕ್ಷಿ ಪ್ರೇಮಿ. ಆತ ಪಕ್ಷಿಗಳನ್ನು ಉಳಿಸಿಕೊಳ್ಳಲು ಸಾಧ್ಯ ಆಗದಿದ್ದಾಗ ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ. ಸಾವಿನ ನಂತರ ದೆವ್ವದ ರೂಪದಲ್ಲಿ ಎಂಟ್ರಿ ಕೊಡುತ್ತಾನೆ.

    ಪ್ರೇಕ್ಷಕರ ವಿಮರ್ಶೆ : '2.O' ಸಿನಿಮಾ ನೋಡಿದವರ ಪ್ರತಿಕ್ರಿಯೆ ಪ್ರೇಕ್ಷಕರ ವಿಮರ್ಶೆ : '2.O' ಸಿನಿಮಾ ನೋಡಿದವರ ಪ್ರತಿಕ್ರಿಯೆ

    ಚಿಟ್ಟಿ VS ಪಕ್ಷಿ ರಾಜನ್

    ಚಿಟ್ಟಿ VS ಪಕ್ಷಿ ರಾಜನ್

    ದೆವ್ವವಾದ ಪಕ್ಷಿ ರಾಜನ್ ಗಲಾಟೆ ಜೋರಾಗುತ್ತದೆ. ಮೊಬೈಲ್ ನಿಂದ ಪಕ್ಷಿಗಳು ನಾಶ ಆಗುತ್ತವೆ ಎಂದು ಎಲ್ಲರ ಮೊಬೈಲ್ ಅನ್ನ ನಾಶ ಮಾಡುತ್ತಾನೆ. ಮೊಬೈಲ್ ಮಾಲೀಕರು, ಮೊಬೈಲ್ ಅಂಗಡಿ ಹೀಗೆ ಎಲ್ಲ ಮುಗಿದ ಮೇಲೆ ಟಿಲಿಕಾಂ ಸಚಿವರನ್ನು ಮುಗಿಸಿಬಿಡುತ್ತಾನೆ. ಇವನ ಆಟವನ್ನು ಹತ್ತಿಕ್ಕಲು ಚಿಟ್ಟಿ (ರಜನಿ ರೋಬೋ) ಎಂಟ್ರಿ ಕೊಡುತ್ತಾನೆ.

    ಇದಕ್ಕೆ ಉತ್ತರ ಚಿತ್ರಮಂದಿರದಲ್ಲಿ ಮಾತ್ರ

    ಇದಕ್ಕೆ ಉತ್ತರ ಚಿತ್ರಮಂದಿರದಲ್ಲಿ ಮಾತ್ರ

    ಪಕ್ಷಿ ರಾಜನ್ ನನ್ನು ಸೆದೆಬಡಿಯಲು ವಿಜ್ಞಾನಿ ವಸಿಗರನ್ (ರಜನಿಕಾಂತ್) ಚಿಟ್ಟಿಯನ್ನು ಮುಂದೆ ಬಿಡುತ್ತಾನೆ. ಚಿಟ್ಟಿ VS ಪಕ್ಷಿ ರಾಜನ್ ಹೊಡೆದಾಟ ನಡೆಯುತ್ತದೆ. ಕೊನೆಗೆ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ?, ಪಕ್ಷಿ ರಾಜನ್ ಅಬ್ಬರವನ್ನು ಚಿಟ್ಟಿ ನಿಯಂತ್ರಣ ಮಾಡುತ್ತಾನ? ಎನ್ನುವುದಕ್ಕೆ ಉತ್ತರ ಚಿತ್ರಮಂದಿರದಲ್ಲಿ ಮಾತ್ರ.

    '2.O' ಸಿನಿಮಾದ ನಡುವೆ ದರ್ಶನ ನೀಡಿದ 'KGF'! '2.O' ಸಿನಿಮಾದ ನಡುವೆ ದರ್ಶನ ನೀಡಿದ 'KGF'!

    ರಜನಿ, ಅಕ್ಷಯ್ ಅದ್ಭುತ

    ರಜನಿ, ಅಕ್ಷಯ್ ಅದ್ಭುತ

    ರಜನಿಕಾಂತ್ ಇಲ್ಲಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ವಿಜ್ಞಾನಿ ವಸಿಗರನ್ ಹಾಗೂ ಚಿಟ್ಟಿ ಎಂಬ ರೋಬೋ ಪಾತ್ರಗಳಲ್ಲಿ ರಜನಿಗೆ ಫುಲ್ ಮಾರ್ಕ್ ಕೊಡಬಹುದು. ಅದರಲ್ಲಿಯೂ ಚಿಟ್ಟಿ ಸ್ಟೈಲ್ ನೋಡುಗರಿಗೆ ಒಳ್ಳೆಯ ಮಜಾ ನೀಡುತ್ತದೆ. ಅಕ್ಷಯ್ ಕುಮಾರ್ ಅಭಿನಯ ಮುಖವಿಸ್ಮಿತರನ್ನಾಗಿ ಮಾಡುತ್ತದೆ. ಇಬ್ಬರಿಬ್ಬರ ನಟನೆ ಅದ್ಭುತ. ಆಮಿ ಜಾಕ್ಸನ್ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇಲ್ಲ.

    ಮನಸ್ಸಿನ ಸಿನಿಮಾವಲ್ಲ, ಕಣ್ಣಿನ ಸಿನಿಮಾ

    ಮನಸ್ಸಿನ ಸಿನಿಮಾವಲ್ಲ, ಕಣ್ಣಿನ ಸಿನಿಮಾ

    ಇದು ಮನಸ್ಸಿಗೆ ಮುದ ನೀಡುವ ಸಿನಿಮಾವಲ್ಲ. ಕಣ್ಣಿಗೆ ಹಬ್ಬವಾಗಿರುವ ಸಿನಿಮಾ. ಪ್ರತಿ ದೃಶ್ಯದಲ್ಲಿ ಮೈ ಜುಮ್ ಎನ್ನಿಸೋ ಮೇಕಿಂಗ್ ಇದೆ. ಅನಗತ್ಯ ದೃಶ್ಯ ಇಲ್ಲದೆ ಅಗತ್ಯಕ್ಕೆ ತಕ್ಕ ಹಾಗೆ ನಿರೂಪಣೆ ಮಾಡಿದ್ದಾರೆ. ಅಕ್ಷಯ್ ಪಾತ್ರ ಬಿಟ್ಟರೆ ಸಿನಿಮಾದಲ್ಲಿ ಭಾವನಾತ್ಮಕ ಅಂಶಗಳು ಇಲ್ಲ.

    ಟ್ವಿಟ್ಟರ್ ಲೋಕದಲ್ಲಿ ಟ್ರೆಂಡ್ ಆದ '2.O' ಸಿನಿಮಾ ಟ್ವಿಟ್ಟರ್ ಲೋಕದಲ್ಲಿ ಟ್ರೆಂಡ್ ಆದ '2.O' ಸಿನಿಮಾ

    ಶಂಕರ್ ಶ್ರಮ ಮೆಚ್ಚಬೇಕು

    ಶಂಕರ್ ಶ್ರಮ ಮೆಚ್ಚಬೇಕು

    ಸಿನಿಮಾದಲ್ಲಿ ಸರಿ ತಪ್ಪು ಏನೇ ಇದ್ದರೂ ಶಂಕರ್ ಅವರ ಶ್ರಮವನ್ನು ಮೆಚ್ಚಬೇಕು. ಅವರು '2.O' ಎನ್ನುವ ಹೊಸ ಪ್ರಪಂಚ ಸೃಷ್ಟಿ ಮಾಡಿ, ಆಧುನಿಕ ಬ್ರಹ್ಮನಂತೆ ಕಾಣಿಸುತ್ತಾರೆ. ಇಂತಹ ಮಹಾ ಸಿನಿಮಾವನ್ನು ತೆರೆ ಮೇಲೆ ತಂದಾಗಲೇ ಶಂಕರ್ ಗೆದ್ದಿದ್ದಾರೆ.

    ತಾಂತ್ರಿಕ ಸಿನಿಮಾ, ಒಳ್ಳೆಯ ಅನುಭವ

    ತಾಂತ್ರಿಕ ಸಿನಿಮಾ, ಒಳ್ಳೆಯ ಅನುಭವ

    '2.O' ಮಾಮುಲಿ ಸಿನಿಮಾವಲ್ಲ, ಅದೊಂದು ಅನುಭವ. ತಾಂತ್ರಿಕವಾಗಿ ಹಾಲಿವುಡ್ ಮಟ್ಟದಲ್ಲಿ ಇರುವ ಒಂದು ಅಪರೂಪದ ಸಿನಿಮಾ. ಮನರಂಜನೆಗೆ ಸಿನಿಮಾ ಮೋಸ ಮಾಡುವುದಿಲ್ಲ. ಅದರಲ್ಲಿಯೂ ಕ್ಲೈಮ್ಯಾಕ್ಸ್ ಅನ್ನು ರಜನಿಕಾಂತ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳಬೇಡಿ.

    English summary
    Super Star Rajinikanth, Akshay Kumar and Amy Jackson's '2.O' tamil movie review. The movie is directed by Shankar and it released Today (November 29th).
    Thursday, November 29, 2018, 14:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X