twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಚಿರು ಪರಿಚಿತ ಮಾಮೂಲಿ ಕಥೆ

    By * ರಾಜೇಶ ಮುಂಡಿಗೇಸರ
    |

    ಚಿರು ಮತ್ತೊಂದು ಆಕಾಶ್"- ಚಿತ್ರ ಬಿಡುಗಡೆಗೆ ಮುಂಚಿನ ಪತ್ರಿಕಾಗೋಷ್ಠಿಯಲ್ಲಿ ಹಾಗೆಂದು ಹೇಳಿಕೊಂಡಿದ್ದರು ನಿರ್ದೇಶಕ ಮಹೇಶ್ ಬಾಬು. ಅದು ಅಕ್ಷರಶಃ ಸತ್ಯ ಎಂಬುದು ಚಿತ್ರ ನೋಡಿದಾಗ ಗೊತ್ತಾಗುತ್ತದೆ. ಮಧು ಗೃಹ ಮಂತ್ರಿಯ ಮಗಳು. ಆಕೆ ಚಿರುವಿನನನ್ನು ಇಷ್ಟಪಡುತ್ತಿದ್ದಾಳೆ ಎಂದು ತಪ್ಪಾಗಿ ಭಾವಿಸಿ ಇನ್ನಿಲ್ಲದ ಕಷ್ಟ ಕೊಡುತ್ತಾನೆ.

    ಆದರೆ ವಾಸ್ತವವೇ ಬೇರೆ. ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ ಸಿನಿಮಾ. ಚಿತ್ರದ ಕೊನೆಯವರೆಗೂ ನಾಯಕ, ನಾಯಕಿ 'ಐ ಲವ್ ಯೂ" ಹೇಳಿಕೊಳ್ಳುವುದಿಲ್ಲ. ಚಿತ್ರ ನೋಡುತ್ತಾ ಹೋದಂತೆ ಇಬ್ಬರ ಮೇಲೂ ಅನುಕಂಪ ಮೂಡುತ್ತದೆ. ಮೊದಲರ್ಧವಂತೂ ಸೂಪರ್.

    ಒಂದೂಕಾಲು ಗಂಟೆ ಕಳೆದದ್ದೇ ಗೊತ್ತಾಗುವುದಿಲ್ಲ. ತಮಗಿರುವ ಆಕ್ಷನ್ ಹೀರೋ ಇಮೇಜ್ ಬದಲಿಸುವ ಚಿತ್ರವಿದು ಎಂಬ ಚಿರಂಜೀವಿ ಸರ್ಜಾ ಅವರ ನಿರೀಕ್ಷೆ ಸ್ವಲ್ಪ ಮಟ್ಟಿಗೆ ಹುಸಿಯಾಗಿದೆ. ನಾಲ್ಕೈದು ಫೈಟ್‌ಗಳಿವೆಯಾದರೂ ಹಿಂಸೆಯ ವೈಭವೀಕರಣವಿಲ್ಲ. ಕಥೆಗೆ ಪೂರಕವಾಗಿ ಹೊಡೆದಾಟಗಳಿವೆ. ಇಡೀ ಚಿತ್ರವನ್ನು ಆವರಿಸಿಕೊಂಡಿರುವುದು ಲವ್, ಲವ್ ಅಂಡ್ ಲವ್.

    ನಾಯಕ ಚಿರು, ನಾಯಕಿ ಕೃತಿ ಖರಬಂದ, ಪೋಷಕ ಪಾತ್ರದಲ್ಲಿರುವ ರಂಗಾಯಣ ರಘು, ಪದ್ಮಾ ವಾಸಂತಿ, ಕಿರಣ್, ಬುಲೆಟ್ ಪ್ರಕಾಶ್ ಎಲ್ಲರಿಗೂ ಪೂರ್ಣಾಂಕ ನೀಡಲು ಅಡ್ಡಿಯಿಲ್ಲ.

    ಆಕಳಿಕೆಗೆ ಅವಕಾಶವಿಲ್ಲದಂತೆ ನಿರೂಪಿಸಿರುವುದರಿಂದ ಇದೇ ಮಾತು ನಿರ್ದೇಶಕರಿಗೂ ಅನ್ವಯ. ಗಿರಿಧರ್ ಸಂಗೀತ, ಹರ್ಷ ಅವರ ನೃತ್ಯ ಸಂಯೋಜನೆ ಓಕೆ. ಸುಂದರನಾಥ್ ಸುವರ್ಣರ ಛಾಪು ಛಾಯಾಗ್ರಹಣದಲ್ಲಿ ಎದ್ದು ಕಾಣುತ್ತದೆ. ಜಯಂತ ಕಾಯ್ಕಿಣಿ, ಗೌಸ್, ಮಹೇಶ್ ಬಾಬು ರಚಿಸಿರುವ ಹಾಡುಗಳ ಸಾಹಿತ್ಯ ಕಿವಿಗಿಂಪು. ಮಾರ‍್ಸ್ ಫಿಲಂಸ್ ಲಾಂಛನದಲ್ಲಿ ಚಿತ್ರ ನಿರ್ಮಿಸಿದ್ದಾರೆ ಸುರೇಶ್ ಜೈನ್.

    Sunday, November 21, 2010, 12:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X