»   » 21ರ ತುಂಟ+30ರಆಂಟಿ=?

21ರ ತುಂಟ+30ರಆಂಟಿ=?

Subscribe to Filmibeat Kannada
  • ಎಂ.ಡಿ.
ಆತ ಹರೆಯದ ಹುಡುಗ. ಆಕೆ ವಯಸ್ಸಾದರೂ ವಯಸ್ಸಾಗದ ಕೆಂಡ ಸಂಪಿಗೆ. ಆತನಿಗೆ ಇಪ್ಪತ್ತೊಂದು ವರ್ಷ. ಆಕೆಗೆ ಬರೋಬ್ಬರಿ ಮೂವತ್ತು. ಆಕೆ ಆತನನ್ನು ‘ಹೋಗೋ ...ಬಾರೋ’ ಅಂತಾಳೆ. ಆತ ಮೇಡಮ್‌ ಅಂತ ಪಲಕುತ್ತಾನೆ. ಆಕಸ್ಮಿಕವಾಗಿ ಅವರಿಬ್ಬರೂ ಒಂದಾಗುತ್ತಾರೆ. ಅದೇ ನೆಪದಲ್ಲಿ ಅವಳು ಅವನ ಪ್ರೇಮದ ಬಲೆಯಲ್ಲಿ ಬೀಳುತ್ತಾಳೆ. ಆತನನ್ನೇ ಮದುವೆಯಾಗಲು ಬಯಸುತ್ತಾಳೆ. ಆದರೆ ಅದಾಗಲೇ ಆತನಿಗೆ ತನ್ನ ಪ್ರೇಯಸಿಯಾಂದಿಗೆ ಮದುವೆ ಫಿಕ್ಸ್‌ ಆಗಿರುತ್ತದೆ. ಅದೇ ಆತನಿಗೆ ರಿಸ್ಕ್‌ ಆಗುತ್ತದೆ.

ಇಂತ ಕಲ್ಪನೆ ಹೊಸದಲ್ಲ. ಬಹುತೇಕ ಭಾಷೆಗಳಲ್ಲಿ ಇದರ ಪ್ರಯೋಗ ನಡೆದಿದೆ. ವಯಸ್ಸಿನಲ್ಲಿ ಹುಡುಗನಿಗಿಂತ ದೊಡ್ಡವಳಾದವಳ ಪ್ರೇಮ ನಿಜಕ್ಕೂ ರೋಮಾಂಚನದ ವಿಷಯ. ‘ಬಾ ಬಾರೋ ರಸಿಕ’ ಚಿತ್ರಕ್ಕೆ ಹೊಸ ನಿರೂಪಣೆ ನೀಡುವ ಮೂಲಕ ಹೊಸತನ ಕೊಟ್ಟಿದ್ದಾರೆ ನಿರ್ದೇಶಕ ದಯಾಳ್‌. ಸಾಮಾನ್ಯವಾಗಿ ಇಂತಹ ಕತೆಗೆ ಬಿಸಿಬಿಸಿ ದೃಶ್ಯ ಸೇರಿಸಬಹುದು. ಆದರೆ ದಯಾಳ್‌ ಆ ವಿಷಯಕ್ಕೆ ಸಂಯಮದಿಂದ ವರ್ತಿಸಿದ್ದಾರೆ. ಮಾತು ಮತ್ತು ದೃಶ್ಯಗಳಲ್ಲಿ ಆಶ್ಲೀಲತೆ ನುಗ್ಗದಂತೆ ತಡೆದಿದ್ದಾರೆ. ಗಂಭಿರವಾದ ವಿಷಯವನ್ನು ತಮಾಷೆ ಮೂಲಕ ತಿಳಿಗೊಳಿಸಿದ್ದಾರೆ. ಅದು ಕೆಲವೊಮ್ಮೆ ಕತೆಗೆ ತಡೆ ನೀಡುತ್ತದೆ. ಮತ್ತೊಮ್ಮೆ ಬಿಗಿ ತಂದಿದೆ.

ಅಂದದ ಹಾಡುಗಳು, ಸುಂದರ ಲೋಕೇಶನ್‌, ಚಂದ್ರು ನೀಡಿದ ತಂಪಾದ ಛಾಯಾಗ್ರಹಣ, ಜಾಲಿಯಾಗಿರುವ ಮಾತು, ಅತಿರೇಕವಿಲ್ಲದ ಅಭಿನಯ, ಅಚ್ಚುಕಟ್ಟಾದ ಸಂಕಲನ... ಇವೆಲ್ಲ ಕತೆಗೊಂದು ಮೂಡ್‌ ಸೃಷ್ಟಿಸಿದೆ. ರಮ್ಯಕೃಷ್ಣ, ಸುನೀಲ್‌, ಅಶಿತಾ , ನಾಗ್‌ಶೇಖರ್‌ಸಹಿತ ಎಲ್ಲರೂ ತಮ್ಮ ಪಾತ್ರವನ್ನು ನೀಟಾಗಿ ನಿಭಾಯಿಸಿದ್ದಾರೆ.

ದ್ವಿತೀಯಾರ್ಧದಲ್ಲಿ ಕತೆ ನಿಧಾನವಾಗಿ ಸಾಗಿದೆ. ರಮ್ಯ ಮತ್ತು ಸುನೀಲ್‌ನಡುವಿನ ದೃಶ್ಯಗಳು ಇನ್ನಷ್ಟು ಸೆಕ್ಸ್‌ಸ್ಮೆಲ್‌ ಇದ್ದಿದ್ದರೆ ಕತೆಗೆ ಪೋರ್ಸ್‌ ದೊರಕುತ್ತಿತ್ತು. ಎಲ್ಲ ಮಿತಿಗಳ ನಡುವೆ ದಯಾಳ್‌ಟೈಂಪಾಸ್‌ ಚಿತ್ರವನ್ನು ನೀಡಿದ್ದಾರೆ. ಎರಡನೇ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಬಂದ ರಸಿಕನನ್ನು ಹಿಡಿದುಕೊಳ್ಳಿ.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...