»   » ಭಾರತೀಯ ಸಂಸ್ಕೃತಿಯ ಬಗೆಗೆ ಭಾಷಣ ಹಾಗೂ ಯುವ ಪ್ರೇಮಿಗಳ ಪ್ರೇಮಾಯಣ- ಇದು ನಾಗತಿಹಳ್ಳಿಯ ಮುಂದುವರಿದ ಫಾರಿನ್‌ ಟೂರ್‌ !

ಭಾರತೀಯ ಸಂಸ್ಕೃತಿಯ ಬಗೆಗೆ ಭಾಷಣ ಹಾಗೂ ಯುವ ಪ್ರೇಮಿಗಳ ಪ್ರೇಮಾಯಣ- ಇದು ನಾಗತಿಹಳ್ಳಿಯ ಮುಂದುವರಿದ ಫಾರಿನ್‌ ಟೂರ್‌ !

Subscribe to Filmibeat Kannada

ಮೊದಲರ್ಧದಲ್ಲಿ ನವಿರಾಗಿ ಸಾಗುವ ಕಥೆ, ವಿರಾಮದ ನಂತರ ಅದರಲ್ಲೂ ಕೊನೆಯ ಅರ್ಧ ಗಂಟೆ ಹಾದಿ ತಪ್ಪುತ್ತದೆ. ನಿರ್ದಾಕ್ಷಿಣ್ಯವಾಗಿ ಕಥೆಯನ್ನು ಎಳೆದದ್ದು ಯಾರ ಮೇಲಿನ ಸೇಡಿಗೋ ಗೊತ್ತಾಗುವುದಿಲ್ಲ . ಅದಕ್ಕೆ ಬಿಗಿ ಇಲ್ಲದ ಚಿತ್ರಕಥೆಯದೇ ತಪ್ಪು .

ಹಾಗೆಯೇ ಕೆಲವು ಮುಖ್ಯ ದೋಷಗಳು ಚಿತ್ರದಲ್ಲಿ ಎದ್ದು ಕಾಣುತ್ತವೆ. ಭಾರತೀಯ ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ನಾಯಕಿ ಪ್ಯಾರಿಸ್ಸಿಗೆ ಬಂದ ಎರಡನೇ ಶಾಟ್‌ನಲ್ಲಿ ಮಿಡಿ, ಮಿನಿ ತೊಡುವುದು ಯಾವ ಸಂಸ್ಕೃತಿಯಾ? ನಾಯಕ ಹಾಗೂ ನಾಯಕಿ ನಡುವೆ ಪ್ರೀತಿ ಮೂಡುವ ಸಮಯದ ಮಧುರತೆ ಮಾಯವಾಗಿದೆ.

ಹೊಸ ಜೋಡಿ ರಘು ಮತ್ತು ಮಿನಲ್‌ ಕುಣಿತಕ್ಕೆ ತೋರಿಸಿದ ಆಸಕ್ತಿಯನ್ನು ಅಭಿನಯದಲ್ಲಿ ತೋರಿಸಿಲ್ಲ . ಹೊಸಬರಾದ್ದರಿಂದ ಕೊಂಚ ರಿಯಾಯಿತಿ ಕೊಟ್ಟುಬಿಡಿ.

ಸೆಲ್‌ ಸೀತಾಲಕ್ಷ್ಮಿಯಾಗಿ ತಾರಾ, ರಾಜಕೀಯ ಪುಢಾರಿಯಾಗಿ ಸುಂದರರಾಜ್‌, ಕಣ್ಣಿನಲ್ಲೇ ಹುರಿದು ತಿನ್ನುವ ಶರತ್‌ ಲೋಹಿತಾಶ್ವ, ಅರ್ಧ ಕೂಡ ಬಿಳಿ ಕೂದಲಿಲ್ಲದ ಅಮ್ಮನಾಗಿ ಸುಮಲತಾ ಇಷ್ಟವಾಗುತ್ತಾರೆ. ಕಲಾ ತಪಸ್ವಿ ರಾಜೇಶ್‌ ಬೇಜಾನ್‌ ಕಷ್ಟ ಕಣ್ರಿ.

ನಾಗತಿಹಳ್ಳಿ ಮೂರು ಚೆಂದದ ಹಾಡುಗಳನ್ನು ಬರೆದಿದ್ದಾರೆ. ಅದಕ್ಕೆ ಪ್ರಯೋಗ್‌ ಲಯಬದ್ಧ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್‌ ಛಾಯಾಗ್ರಹಣದಲ್ಲಿ ಪ್ಯಾರಿಸ್‌ ಬಹುಶಃ ಇರುವುದಕ್ಕಿಂತ ಹೆಚ್ಚು ಫ್ರೆಶ್ಶಾಗಿ ಕಾಣುತ್ತದೆ. ಮಾತು ಬರೆದ ನಾಗತಿಹಳ್ಳಿ ಸಹಜತೆಗೆ ಒತ್ತು ಕೊಟ್ಟಿದ್ದಾರೆ.

(ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada