For Quick Alerts
  ALLOW NOTIFICATIONS  
  For Daily Alerts

  'ಗೆಳೆಯ' ಚಿತ್ರದ ಪ್ರಜ್ವಲ್ ನ ಸ್ಟೈಲ್ ಬೇರೆನೆ, ಲುಕ್ ಬೇರೇನೆ

  By Staff
  |

  ಯಸ್, ಕನ್ನಡ ಚಿತ್ರರಂಗ ಬೇಕಾಗಿದ್ದ ಬಿಸಿರಕ್ತದ ಯಂಗ್ ಅಂಡ್ ಡೈನಾಮಿಕ್ ಅಂಡ್ ಆಲ್ಸೋ ಟ್ಯಾಲೆಂಟೆಡ್ ಹೀರೊ ಸಿಕ್ಕಾಯಿತು.ಮೊದಲ ದೃಶ್ಯದಿಂದ ಕೊನೆ ದೃಶ್ಯದವರೆಗೂ ಸ್ಟ್ರೇಟ್ ಫ್ರಮ್ ದಿ ಹಳ್ಳಿ ಜಾತ್ರೆಗೆ ಸ್ನೇಹಿತರಿಗೆ ಬಟ್ಟೆ ಸೆಲೆಕ್ಷನ್ ಮಾಡೊದು,ಇಸ್ಪೀಟ್ ಆಡೋದು,ನಗರಕ್ಕೆ ಕಾಲಿಟ್ಟಾಗ ಮಾಡೋ ಪ್ಲಾನಿಂಗ್ ನಿಂದ ಹಿಡಿದು ಕೊನೆ ದೃಶ್ಯವರೆಗೂ ಡೆರ್ ಡೆವಿಲ್ ರೋಲ್ ಗೆ ಹೇಳಿ ಮಾಡಿಸಿದ ಹಾಗೆ ಪ್ರಜ್ವಲ್ ಚಿತ್ರದಲ್ಲಿ ಎಕ್ಸಲೆಂಟ್ ಆಗಿ ಕಾಣಿಸಿದ್ದಾನೆ ಹಾಗೂ ನಟಿಸಿದ್ದಾನೆ.


  ಈ ಯುವಕರನ್ನು ಸುಮ್ನೆ ಪಡ್ಡೆ ಹೈಕಳು ಅಂತಾ ಹೇಳಿ ನೆಗ್ಲೆಟ್ ಮಾಡೋಗಿಲ್ಲ.ಹರ್ಷ ಬರೀ ಡಾನ್ಸ್ ಮಾಸ್ಟರ್ ಅಂತಾ ಗೊತ್ತಿತ್ತು ಆದರೆ ಮೈ ಜೊತೆಗೆ ಎಲ್ಲರ ಮನಸನ್ನು ತಕ್ಕ ಥೈ ಅಂತಾ ಕುಣಿಸಿ ರಂಜಿಸುವ ಕಲೆ ಒಲಿದಿರುವುದು ಶಾನೆ ಒಳ್ಳೆದಾಯ್ತು ಬಿಡಿ.

  ಈ ಚಿತ್ರದ ಹೈಲೈಟ್ ಏನು ಅಂತಾ ನಾನು ಚಿತ್ರ ಬಿಟ್ಟ ಮೇಲೆ ಯೋಚನೆ ಮಾಡಿ ಮಾಡಿ ಸಾಕಾಯ್ತು..ಒಮ್ಮೆ ಮರಿ ಡೈನಾಮಿಕ್ ಸ್ಟಾರ್ ಸ್ಟೈಲ್,ಲುಕ್,ಡೈಲಾಗ್ ಡೆಲವರಿ ಕಣ್ಮುಂದೆ ಬಂದರೆ ಮತ್ತೊಮ್ಮೆ ಮುದ್ದು ಮುಖದ ತರುಣ್ ನ ಸೆಂಟಿಮೆಂಟ್,ಪ್ರೀತಿಗೆ ಹಂಬಲಿಸುವ ದೃಶ್ಯ, ಸೆಕೆಂಡ್ ಆಫ್ ಫರ್ಫಾಮೆನ್ಸ್ ಆವರಿಸಿಬಿಡುತ್ತದೆ.ಇನ್ನೂ ಡಾನ್ಸ್ ಮಾಸ್ಟರ್ ಡಾನ್ಸ್ ಸೀಕ್ವೆನ್ಸ್ ಬಗ್ಗೆ ಕೆಮ್ಮಂಗಿಲ್ಲ ಬಿಡಿ. ಟಾಪ್ ಐಟಂ ಗರ್ಲ್ ರಾಖಿ ಕೂಡ ಹರ್ಷನ ಟ್ಯಾಲೆಂಟ್ ಗೆ ಸೆಲ್ಯೂಟ್ ಮಾಡಿ ಹೋಗಿದ್ದಾಳೆ ಅಂದ ಮೇಲೆ ...

  ಮುಂಗಾರು ಮಳೆ ಹುಡ್ಗ ಪ್ರೀತಂ ಬರೆದ ಕಥೆಯಲ್ಲಿ ಎಲ್ಲೂ ಎಳೆದಾಟವಿಲ್ಲ. ಹುಡುಗರ ಪ್ರತಿಭೆಗೆ ಸಾಥ್ ನೀಡೊಕೆ ನಿಂತ ದೈತ್ಯ ಪ್ರತಿಭೆಗಳಾದ ಕಿಶೋರ್ , ರಂಗಾಯಣ ರಘು ಬಗ್ಗೆ ನಾನೇನಾದರೂ ಕೆಟ್ಟದಾಗಿ ಬರೆದರೆ ಶಿವಾ ಮೆಚ್ಚಕ್ಕಿಲ್ಲ.ಕೆಮರಾ ಕಣ್ಣಿನಲ್ಲಿ ಜೋಗದ ಸಿರಿಯನ್ನು ಉಣಬಡಿಸಿದ್ದ ಕೃಷ್ಣ, 'ಈ ಸಂಜೆ ಯಾಕಾಗಿದೆ. .' ಹಾಡಿನಲ್ಲಿ ನೀಡಿದ ಸ್ಲೋ ಎಫ್ಟೆಕ್ ಎದೆಗೆ ಹಾಗೆ ಟಚ್ ಆಗಿ ಲಾಕ್ ಆಗಿಬಿಡುತ್ತದೆ. ಮಧುರ ಸಂಗೀತ ನೀಡುವ ಮನೋಮೂರ್ತಿಯವರ 'ಈ ಸಂಜೆ ಯಾಕಾಗಿದೆ...' ಹಾಡು ಸೋನು ನಿಗಂ ಬಾಯಲ್ಲಿ ಕೇಳುತ್ತಾ..ಬೇರೊಂದು ಲೋಕಕ್ಕೆ ಹೊಕ್ಕ ನಾನುಎಚ್ಚರವಾಗಿ.. 'ಈ ಹಾಡು ಯಾಕೆ ಮುಗಿದೋಗಿದೆ. .' ಎಂದು ಹಲಬುವಂತೆ ಮಾಡಿತು. ಟಪಾಂಗುಚ್ಚಿ ಸಾಂಗ್, ರೋಮ್ಯಾಂಟಿಕ್ ಸಾಂಗ್,ಸ್ಟೈಲಿಷ್ ಸಾಂಗ್ಸ್, ಮ್ಯಾರೇಜ್ ಸಾಂಗ್ ಎಲ್ಲ ಬಗೆಯ ಹಾಡುಗಳ ಸಮ್ಮಿಶ್ರಣ ನಿಮ್ಮನ್ನು ಮೋಡಿ ಮಾಡಿದರೆ ನಾನು ಜವಾಬ್ದಾರನಲ್ಲ. ಹೀಗೆ ಬಂದು ಹಾಗೆ ಹೋಗೋ ಪೂಜಾ ಗಾಂಧಿ,ಸ್ಯಾರಿ ಉಟ್ಟು ಕೂಡ ಐಟಂ ಸಾಂಗ್?(ಮ್ಯಾರೇಜ್ ಸಾಂಗ್)ನಲ್ಲಿ ಕುಣಿಬಹುದು ಅಂತಾ ತೋರಿಸಿದ್ದಾರೆ.

  ಶ್ರೆಯಾ ಘೋಷಲ್ ಹಾಡಿದ 'ಕನಸಲ್ಲೆ ಮಾತಾಡುವೆ ನಿನ್ನೊಂದಿಗೆ...' ಚಿತ್ರದಲ್ಲಿ ಯಾಕೆ ಜಾಗ ಪಡಿಲಿಲ್ಲ ಗೊತ್ತಾಗಲಿಲ್ಲ.

  ಹಿನ್ನೆಲೆ ಸಂಗೀತ ಓಕೆ, ಕೆಲವು ಕಡೆ ಹಿಂದಿ ಚಿತ್ರದ ಛಾಯೆಯಿದೆ. ಎಡಿಟಿಂಗ್ ಫರ್ಫೆಕ್ಟ್ . ನಿಮಗೆ ಎಲ್ಲೂ ಬೋರ್ ಅನ್ನಿಸೋದೇ ಇಲ್ಲ. ಅಕಸ್ಮಾತ್ ಅನ್ನಿಸಿದರೆ,ಅದು ಟಿಕ್ನಿಕಲ್ ಎರರ್ ಅಂತೂ ಅಲ್ಲ.
  ಬುಲೆಟ್ ಪ್ರಕಾಶ್,ಉದಯಟಿವಿ ಕಾಮೆಡಿಯನ್ ಕಾಮಿಡಿ ಟಚ್ ಸೂಪರ್ ಆಗಿದೆ.

  ಅಂತೂ ಈ ಫಿಲ್ಮಂ ಅಲ್ಲಿ ಏನಾದರೂ ಹುಳುಕು ಹುಡುಕಬೇಕು ಅಂತಾ ನಾನು ಶಾನೆ ಬುದ್ಧಿ ಖರ್ಚು ಮಾಡಿ, ಕೊನೆಗೆ ಗೆಪ್ತಿ ಇರೋ ವಿಸ್ಯನೆಲ್ಲಾ ಹೇಳ್ತೀನಿ ಕೇಳಿ

  ಮೊದಲು ಟೈಟಲ್ ಕಾರ್ಡ್ ಯಾರು ನೋಡುಕೊಲ್ಲು(ಳ್ಳು)ವವರೋ ಹುಡುಕಿ ನಮಸ್ಕಾರ ಹೇಳಬೇಕು.. ಕಮೀಷನರ್, ಮನೋ ಮೂರ್ತಿ ಸ್ಪೆಲ್ಲಿಂಗ್ ಸ್ವಲ್ಪ ಕೇಳಬೇಕಿತ್ತು.
  ನಾಯಕಿ ಕೀರತ್ ಕೆಲವೊಮ್ಮೆ ದಸರಾ ಬೊಂಬೆ, ಮತ್ತೊಮ್ಮೆ ಪ್ಲಾಸ್ಟಿಕ್ ಬೊಂಬೆ , ಐ ಮೀನ್ ಕೀ ಕೊಟ್ಟಾಗ ಆಡೊ ತರಾ ಅನ್ನಿಸುತ್ತದೆ. ಆದರೆ ನಟನೆ ಕಳಪೆ ಅಂತಾ ಹೇಳಿದರೆ ನೀವು ಬುಲೆಟ್ ಸ್ಟೈಲ್ ನಲ್ಲಿ ಕಾಮೆಡಿ ಮಾಡ್ತೀಯಾ ಅಂತಾ ನಂಗೆ ಹೋಡಿಬಹುದು. ಇನ್ನೊಬ್ಬ ನಾಯಕಿ ಪಾರಿ? ಅಡ್ಡಾ ಲಾಂಗ್ವೇಜ್ ಓಕೆ, ಆದರೆ ಆಕ್ಟಿಂಗ್ ಗೆ ತಕ್ಕಂತೆ ಇನ್ನಷ್ಟು ಮ್ಯಾನರಿಸಂ ಬೇಕಿತ್ತು. ಇಷ್ಟು ಸುಲಭವಾಗಿ ರೌಡಿಸಂ ಫೀಲ್ಡ್ ಗೆ ಎಂಟ್ರಿ ಕೊಡಬಹುದಾ ಅನ್ನೋ ಹಾಗೆ ಸಲೀಸಾಗಿ ಕಥೆಯ ಓಟ ಸಾಗುತ್ತದೆ. ಕೊನೆಯಲ್ಲಿ ಕ್ಲೈಮಾಕ್ಸ್ ಗೆ ಎನ್ ಕೌಂಟರ್ ಸ್ಪೆಷಲಿಸ್ಟ್ ಅಂತಾ ಬರೋ ನಮ್ಮ ದುನಿಯಾ ವಿಜಯ್ ಎಲ್ಲರನ್ನೂ ಕೊಲ್ಲೊದರಲ್ಲೆ ನಿಮ್ಮನ್ನು ಮೋಡಿ ಮಾಡುತ್ತಾನೆ.

  ಚಿತ್ರದ ಮುಗಿದ ಮೇಲೆ ಎಲ್ಲಾ ಓಕೆ , ಪ್ರಜ್ವಲ್ ಗೆ ಆ ಗತಿ ಯಾಕೆ ಅನ್ನೋ ಪ್ರಶ್ನೆ ಕಾಡುತ್ತದೆ? ಹೌದು, ಹರ್ಷನಿಗೆ ಕೇಳಬೇಕಾದ ಪ್ರಶ್ನೆ ಇದೊಂದೆ. ಕೊನೆ ಸೀನ್ ನಲ್ಲಿ ನಾಲ್ಕು ರೋಡುಗಳು ಕೂಡೋ ಕಡೆನಿಂತು ದುನಿಯಾ ವಿಜಯ್ ನಗುವಿಗೆ ಪ್ರತಿ ನಗು ನಗುತ್ತಾ ಎರಡು ಕೈಯನ್ನು ಆಡಿಸುತ್ತಾ, ವಿಜಯ್ ಕಡೆ ನೋಡೋ ದೃಶ್ಯ ತನಕ ಓಕೆ .ಮುಂದಿನದ್ದನ್ನು ಬೇರೆ ರೀತಿ ಮಾಡಬಹುದಾಗಿತ್ತು ಅಲ್ವಾ ಬಟ್ ಯಾಕೋ ಎಂಡಿಂಗ್ ಸಿಂಪಲ್ ಅನ್ನಿಸಿಬಿಟ್ತು.ದುನಿಯಾ ವಿಜಯ್ ಗೆ ಕೊಲ್ಲೊ ಕೆಲ್ಸ ದ ಜತೆಗೆ ಕಾಂಪರ್ ಮಾಡಿಸಿ, ಒಟ್ಟಾದ ಇಬ್ಬರೂ ಗೆಳೆಯರನ್ನು ಅವರ ಊರಿನ ಬಸ್ ಗೆ ಹತ್ತಿಸಿ,ಮಾನವೀಯತೆ? ಮೆರೆಯೋ ದೃಶ್ಯ ಕಲ್ಪನೆಯಲ್ಲಿ ಒಮ್ಮೆ ಹಾಗೆ ಬಂತು.ಪ್ರಜ್ವಲ್ ಪರವಾದ ಮನಸ್ಸು ಇರಲಿ, ಈಗಿರೋ ಕ್ಲೈಮಾಕ್ಸನ್ನು ಒಪ್ಪಿಕೊಳ್ಳೋಣ. ನಮ್ಮುಡಗರನ್ನು ಬೆನ್ನು ತಟ್ಟಿ ಪ್ರೋತ್ಸಾಹ ನೀಡೋಣ.
  ಎನಿವೇ ಹೋಪ್ ಫಾರ್ ದಿ ಹ್ಯಾಪಿ ಎಂಡಿಂಗ್ ನೆಕ್ಸ್ಟ್ ಟೈ..ಗುಡ್ ಬೈ ಫ್ರೆಂಡ್ಸ್

  ಸ್ಸಾರಿ ಚಿತ್ರದ ಕಥೆ ಹೇಳಲೆ ಇಲ್ಲಾ ಅಲ್ವಾ.. ತಗ್ಗೊಳ್ಳಿ ಹೇಳ್ತೀನಿ

  ಹಳ್ಳಿ ಹುಡುಗರಾದ ವಿಶ್ವ(ತರುಣ್) ಹಾಗೂ ಗುರು(ಪ್ರಜ್ವಲ್) ಆತ್ಮೀಯ ಸ್ನೇಹಿತರು.ವಿಶ್ವನ ಪ್ರಾಣಸಖಿ ನಂದಿನಿ ಗುರುವಿಗೆ ತಂಗಿ ಸಮಾನ. ಹಳ್ಳಿ ಚೇರ್ ಮನ್ ಮಗನ ಕಾರು ಗದ್ದೆಗೆ ಬಿಟ್ಟ ಗುರು,ಅವನು ಕಾರು ಕೊಟ್ಟ ವಿಶ್ವನಿಗೆ ಬೈದ ಅಂತಾ ಅವನ ತಲೆ ಹೊಡೆದು , ಸೈಕಲ್ ಶಾಪಿನಿಂದ ವಿಶ್ವನ್ನೂ ಕರೆದುಕೊಂಡು, ಎಂದೂ ಕಾಣದ ಬೆಂಗಳೂರು ನಗರಿಗೆ ಕಾಲಿಡುತ್ತಾರೆ. ಗುರು ಇಲ್ಲಿನ ಥಳಕು ಬಳಕು, ರೌಡಿಸಂನ ಅ ಆ ಇ ಈ ಕಲಿತರೆ, ವಿಶ್ವ ಹೋಟೆಲ್ ಮಾಣಿಯಾಗಿ ದುಡಿಯುತ್ತಾನೆ.
  ರೌಡಿಸಂನಿಂದ ಹಣಗಳಿಕೆಯ ಮಾರ್ಗ ಕಂಡುಕೊಂಡು ಡಾನ್ ಜಯಣ್ಣನಿಗೆ ಗುಂಡು ಹಾರಿಸುತ್ತಾನೆ. ಆಗ ಜಯಣ್ಣನ ಬಚಾವ್ ಮಾಡಿದ ವಿಶ್ವ ಜಯಣ್ಣನಿಗೆ ಹತ್ತಿರವಾಗುತ್ತಾನೆ. ಇತ್ತ ಗುರು ಪೊಲೀಸರ ಬಳಿಗೆ ಹೋಗಿ ಶರಣಾದವನು, ನೇರ ಇನ್ನೊಬ್ಬ ಡಾನ್ ಭಂಡಾರಿ ಗ್ಯಾಂಗ್ ಸೇರುತ್ತಾನೆ. ಮಧ್ಯಂತರದಲ್ಲಿ ಜಯಣ್ಣನ ಗುರು ಎತ್ತು ಬಿಡುತ್ತಾನೆ. ಇದರಿಂದ ಬೇಜಾರಾದ ವಿಶ್ವ ಸ್ನೇಹಕ್ಕೆ ಗುಡ್ ಬೈ ಹೇಳಿ, ಗುರುವಿನ ಬಾಸ್ ಭಂಡಾರಿನ ದಫನ್ ಮಾಡಿ, ಅಂಡರ್ ವರ್ಲ್ಡ್ ಗೆ ಎಂಟ್ರಿ ಕೊಟ್ಟೇ ಬಿಡುತ್ತಾನೆ.
  ಇಷ್ಟರ ಮಧ್ಯದಲ್ಲಿ ನಂದಿನಿಯನ್ನು ಊರಿಂದ ಕರೆತಂದು ಜಯಣ್ಣನ ಕೃಪೆಯಿಂದ ವಿಶ್ವ ಮದುವೆಯಾಗಿರುತ್ತಾನೆ.ಇಬ್ಬರ ಸ್ನೇಹಿತರ ಗ್ಯಾಂಗ್ ವಾರ್ ಕೊನೆಗೆ ಎನ್ ಕೌಂಟರ್ ವಿಜಯ್ ಗುಂಡಿಗೆ ಸಿಕ್ಕಿ ನಾಶವಾಗುವುದೇ?

  ಸ್ನೇಹಿತರು ಒಂದಾಗುವರೇ? ಗುರು ರೌಡಿಸಂ ಬಿಟ್ಟು ಪ್ರೀತಿ ಕಡೆ ನೋಡುತ್ತಾನಾ... ಎಲ್ಲವನ್ನೂ ತಿಳಿಯಲು ತಪ್ಪದೇ ವೀಕ್ಷಿಸಿ..

  ಕೊನೆಯಲ್ಲಿ ಒಂದೆರಡು ಮಾತು:ಆತ್ಮೀಯ ಯುವಜನತೆಗೆ ಎಚ್ಚರದ ಮಾತು ಈ ಚಿತ್ರ ಹೈಲಿ ಟಚ್ಚಿಂಗ್ ಟೂ ಯೂಥ್ ,ಸೋ ನಿಮ್ಮ ಕಂಟ್ರೋಲ್ ನಲ್ಲಿ ನೀವಿರಿ.ರಾಮ್ ಗೋಪಾಲ್ ವರ್ಮಾ ಸ್ಟೈಲ್, ದರ್ಶನ್ ಲಾಂಗ್ ಮಚ್ಚು, ಸಾಯಿಕುಮಾರ್ ಡೈಲಾಗ್ ಥ್ರಿಲ್ಲರ್ ಮಂಜು ಅಂಡ್ ಗ್ಯಾಂಗ್ ಆಕ್ಷನ್(ಹಾರರ್)ಚಿತ್ರಗಳನ್ನು ನೋಡಿದವರು,ನೋಡದವರು ಈ ಚಿತ್ರಕ್ಕೆ ಒಮ್ಮೆ ಹೋಗಿ ಬನ್ನಿ.ದೇರ್ ಇಸ್ ನಥಿಂಗ್ ಟೂ ಲೂಸ್ ಬೈ ವಾಚಿಂಗ್ ದಿಸ್ ಮೂವಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X