For Quick Alerts
  ALLOW NOTIFICATIONS  
  For Daily Alerts

  ಪ್ರಕಾಶ್‌ ಫಿಲ್ಮಾಗ್ರಫಿಯಲ್ಲಿ ಹೊಸ ‘ಶ್ರೀ’ ಕಾರ

  By Staff
  |

  ಮೊದಲು ಯೂತ್‌, ಎರಡನೆಯದು ಫ್ಯಾಮಿಲಿ.

  -ಇದು ನಿರ್ದೇಶಕ ಪ್ರಕಾಶ್‌ರ ಫಿಲ್ಮಾಗ್ರಫಿ. ಮೊದಲೆರೆಡು ಚಿತ್ರಗಳಲ್ಲಿ ಪ್ರಕಾಶ್‌ ವಿಭಿನ್ನ ಪ್ರಯತ್ನಗಳನ್ನು ಮಾಡಿ ಗೆದ್ದಿದ್ದ ಪ್ರಕಾಶ್‌, ತಮ್ಮ ಮೂರನೇ ಚಿತ್ರ ‘ಶ್ರೀಗೆ ಮತ್ತೊಮ್ಮೆ ಮಗ್ಗಲು ಬದಲಾಯಿಸಿದ್ದಾರೆ. ಈ ಬಾರಿ ಆ್ಯಕ್ಷನ್‌ ಕತೆಯನ್ನು ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದಾರೆ. ಮತ್ತು ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಕೂಡ.

  ‘ಶ್ರೀ’ ಚಿತ್ರದ ಕತೆ ಅಂಥಾ ನವನವೀನವಾದುದೇನಲ್ಲ. ಅದೇ ‘ಫೈರ್‌ ಇನ್‌ ದಿ ಮೌಂಟನ್‌ ರನ್‌ ರನ್‌ ರನ್‌’ ತರಹದ ಕತೆ ಈ ಚಿತ್ರದಲ್ಲಿದೆ. ಚಿತ್ರದ ಪೂರಾ ಎಲ್ಲರೂ ಓಡುತ್ತಲೇ ಇರುತ್ತಾರೆ. ಅದಕ್ಕೆ ಕಾರಣ ಕತೆ ಬ್ಯಾಂಕ್‌ ರಾಬರಿಯಾಂದರ ಸುತ್ತ ಸುತ್ತುತ್ತದೆ.

  ಆ ರಾಬರಿಯಲ್ಲಿ ಅನಿವಾರ್ಯ ಕಾರಣಗಳಿಂದ ಶಾಮೀಲಾಗುವ ನಾಯಕಿಯನ್ನು ಮುಗಿಸಿ ಬಿಡಲು ಖಳನಾಯಕ ಮುಂದಾದರೆ, ನಾಯಕ ರಕ್ಷಿಸಲು ಪ್ರಯತ್ನಿಸುತ್ತಾನೆ. ಒಟ್ಟಾ ನಾಯಕ-ನಾಯಕಿಯ ಹಿಂದೆ ಖಳನಾಯಕ ಆ್ಯಂಡ್‌ ಗ್ಯಾಂಗ್‌, ಅವರೆಲ್ಲರ ಹಿಂದೆ ಪೊಲೀಸ್‌. ಎಲ್ಲರೂ ರನ್‌, ರನ್‌, ರನ್‌ ... ಇಂಥವೇ ಕತೆ ಆಧರಿಸಿದ ಸಾಕಷ್ಟು ಚಿತ್ರಗಳು ಈಗಾಗಲೇ ಬಹಳಷ್ಟು ಭಾಷೆಗಳಲ್ಲಿ ಬಂದು ಹೋಗಿವೆ. ಅದರಲ್ಲೂ ಜೇಮ್ಸ್‌ ಬಾಂಡ್‌ ಮಾದರಿಯ ಚಿತ್ರಗಳಿಗೆ ಇಂಥ ಕತೆಗಳು ಸಾಕಷ್ಟು ಆಹಾರವಾಗಿವೆ.

  ಈಗ ಅದೇ ಕತೆಯನ್ನು ಪ್ರಕಾಶ್‌ ಕನ್ನಡಕ್ಕೆ ತಂದಿದ್ದಾರೆ ಅದಕ್ಕೆ ‘ಮುವಾಯ್‌-ಥಾಯ್‌’ ಎಂಬ ಒಂದಂಶದ ಕಾರ್ಯಕ್ರಮವನ್ನು ಹದವಾಗಿ ಬೆರೆಸಿದ್ದಾರೆ. ಒಂದು ಇಂಟರ್‌ನ್ಯಾಷನಲ್‌ ಲುಕ್‌ ಕೊಟ್ಟಿದ್ದಾರೆ. ಆದರೆ, ಏನೇ ತಂತ್ರ ಉಪಯೋಗಿಸಿದರೂ, ಎಷ್ಟೇ ಅದ್ಧೂರಿತನವಿದ್ದರೂ ಚಿತ್ರ ಬಹಳ ನಿಧಾನವಾಗಿ ಸಾಗಿ ಹಲವು ಕಡೆ ಬೋರ್‌ ಹೊಡೆಸುವುದನ್ನು ತಪ್ಪಿಸಲು ಅವರಿಂದ ಸಾಧ್ಯವಾಗಿಲ್ಲ. ಅದೊಂದು ಬಿಟ್ಟರೆ ಪ್ರಕಾಶ್‌ ಸತತ ಮೂರನೇ ಬಾರಿಗೆ ಸದಭಿರುಚಿಯ ಚಿತ್ರ ನೀಡಿ ಗೆದ್ದಿದ್ದಾರೆ.

  ಚಿತ್ರದ ನಿಜವಾದ ಸರಪ್ರೆೃಸು ವಿಜಯ ರಾಘವೇಂದ್ರ. ಪಾತ್ರಕ್ಕಾಗಿ ರಾಘು ಸಾಕಷ್ಟು ಕಷ್ಟಪಟ್ಟಿದ್ದು ಚಿತ್ರದುದ್ದಕ್ಕೂ ಕಾಣುತ್ತದೆ. ಆ್ಯಕ್ಷನ್‌ ಆಗಲಿ, ಸೆಂಟಿಮೆಂಟಿರಲಿ, ಹಾಡು ಬರಲಿ ... ಎಲ್ಲದರಲ್ಲೂ ಅವರು ಫೈನ್‌. ಜೆನಿಫರ್‌ ಹಾಡುಗಳಲ್ಲಿ ಮಾತ್ರ ಚೆಂದ. ಇನ್ನುಳಿದಂತೆ ಅವರಿಂದ ಹೆಚ್ಚು ನಿರೀಕ್ಷಿಸುವುದು ತಪ್ಪಾದೀತು.

  ಆಮದು ನಟ ರಾಹುಲ್‌ ದೇವ್‌ ಅಂಥ ಚಮತ್ಕಾರವನ್ನೇನೂ ಮಾಡಿಲ್ಲ. ಅನಂತ್‌ನಾಗ್‌, ಅವಿನಾಶ್‌, ವಿನಯಾ ಪ್ರಕಾಶ್‌, ಕೋಮಲ್‌ ಕುಮಾರ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಾಗಶೇಖರ್‌ ಹಾಗೂ ದೊಡ್ಡಣ್ಣ ತಮ್ಮ ಕಾಮಿಡಿಯಿಂದ ಕಿರಿಕಿರಿ ತರಿಸುತ್ತಾರೆ. ಚಿತ್ರವೊಂದರ ಯಶಸ್ಸಿಗೆ ಬರೀ ಅಭಿನಯ ಮಾತ್ರ ಸಾಲದು ಎಂದು ಪ್ರಕಾಶ್‌ಗೆ ಗೊತ್ತಿದೆ. ಹಾಗಾಗಿಯೇ ಉತ್ತಮ ತಂತ್ರಜ್ಞರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರಿಂದ ಸಾಕಷ್ಟು ಕೆಲಸವನ್ನು ತೆಗೆದಿದ್ದಾರೆ.

  ತೆರೆಮರೆುಂ ಹಿಂದಿದ್ದರೂ ಕೃಷ್ಣಕುಮಾರ್‌ ಹಾಗೂ ಕೃಷ್ಣ ತಮ್ಮ ಛಾಯಾಗ್ರಹಣದಿಂದ ನೆನಪಿನಲ್ಲುಳಿಯುತ್ತಾರೆ. ಅದರಲ್ಲೂ ಚೇಸಿಂಗ್‌, ಫೈಟಿಂಗ್‌ ಹಾಗೂ ಹಾಡುಗಳಲ್ಲಿ ನೋಡೇ ಸವಿಯಬೇಕು. ವಲೀಷಾ-ಸಂದೀಪ್‌ ಜೋಡಿಗೆ ಫುಲ್‌ ಮಾರ್ಕ್ಸ್‌. ‘ಜೋಕೆ’ ಹಾಡು ಪಡ್ಡೆಗಳಿಗಾದರೆ, ‘ದೀಪ ದೀಪ ’ ಕ್ಲಾಸ್‌ ಜನರಿಗೆ, ‘ಯಾರೋ ನೀನು’ ಪ್ರೇಮಿಗಳಿಗಾದರೆ, ‘ಕಾಂಚಾಣ’ ಹಾಡು ಎಲ್ಲರಿಗೂ ಹೊಂದುವಂತೆ ಮಾಡಿದ್ದಾರೆ.

  ನಿರೂಪಣೆಯೇ ನಿಧಾನವಾಗಿರುವುದರಿಂದ ಎಸ್‌. ಮನೋಹರ್‌ರ ಸಂಕಲನದ ಬಗ್ಗೆ ಚಕಾರವೆತ್ತುವ ಹಾಗಿಲ್ಲ. ರಮೇಶ್‌ ಹಾಗೂ ರಾಜಶೇಖರ್‌ರ ಸಂಭಾಷಣೆ ಅಲ್ಲಲ್ಲಿ ಖುಷಿ ಕೊಡುತ್ತದೆ. ರವಿವರ್ಮ ಫೈಟುಗಳು ಮಸ್ತಾಗಿವೆ.

  ಲಾಂಗು-ಮಚ್ಚು ಸಾಕಾಗಿ ಹೊಸ ತರಹದ ಆ್ಯಕ್ಷನ್‌ ನೋಡಬಯಸುವವರಿಗೆ ‘ಶ್ರೀ ಹಬ್ಬದೂಟವಾಗುವುದರಲ್ಲಿ ಆಶ್ಚರ್ಯವಿಲ್ಲ.

  (ಸ್ನೇಹ ಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X