»   » ಪ್ರೀತಿ ಪ್ರೇಮಕ್ಕಿಂಥ ಕುಟುಂಬದಲ್ಲಿ ರಕ್ತ , ಹೊಡೆದಾಟಗಳದೇ ಮೇಲುಗೈ.

ಪ್ರೀತಿ ಪ್ರೇಮಕ್ಕಿಂಥ ಕುಟುಂಬದಲ್ಲಿ ರಕ್ತ , ಹೊಡೆದಾಟಗಳದೇ ಮೇಲುಗೈ.

Subscribe to Filmibeat Kannada

ಪ್ರೇಮ, ಸೆಂಟಿಮೆಂಟು, ಕಾಮಿಡಿ, ಹಾಡು, ಹೊಡೆದಾಟ ಎಲ್ಲದರ ಮಿಸಳಭಾಜಿ ಇಲ್ಲಿದೆ. ಇದನ್ನು ತೆಲುಗಿಗೆ ಹೋಲಿಸಿ ನೋಡೋದು ಅಷ್ಟೇನೂ ಸಮಂಜಸವಲ್ಲ . ಹೋಲಿಸಿದರೂ ಇದು ಮೂಲಕ್ಕೆ ಹೇಳಿಕೊಳ್ಳುವ ಮೋಸವನ್ನೇನೂ ಮಾಡಿಲ್ಲ . ಕಾಲಕ್ಕೆ ತಕ್ಕಂತೆ ಕೆಲವು ಸಂಭಾಷಣೆ ಬದಲಿಸಲಾಗಿದೆ. ಉಪ್ಪಿಯ ಹಳೆಯ ಇಮೇಜನ್ನು ನೆನಪಿಸಿಕೊಡುವ ಹಠವೂ ಅಲ್ಲಲ್ಲಿ ಕಾಣುತ್ತದೆ.

ಥ್ರಿಲ್ಲರ್‌ ಮಂಜು ಎಷ್ಟು ಚೆನ್ನಾಗಿ ಸಾಹಸ ನಿರ್ದೇಶನ ಮಾಡಿದ್ದಾರೆಂದರೆ ಅವರು ಹೀರೋ ಆಗಿದ್ದೇ ತಪ್ಪು ಅಂತನ್ನಿಸುತ್ತದೆ. ಸತೀಶ್‌ ಛಾಯಾಗ್ರಹಣ, ಫೈವ್‌ಸ್ಟಾರ್‌ ಗಣೇಶ್‌, ನದೀಮ್‌ ಮತ್ತು ಅಶೋಕ್‌ರಾಜ್‌ ನೃತ್ಯ ನಿರ್ದೇಶನ ಸಕತ್ತಾಗಿದೆ. ಗುರುಕಿರಣ್‌ ಸಂಗೀತದಲ್ಲಿ ನಾಲ್ಕು ಹಾಡುಗಳು ತಾಜಾತನದಿಂದ ಕಂಗೊಳಿಸುವುದು ಎಂಟನೇ ಅದ್ಭುತ.

ಕವಿರಾಜ್‌ ಬರೆದ ‘ಮುಜೆ ಕುಚ್‌ ಕುಚ್‌ ಹೋಗಯಾ’ ಮತ್ತು ಉಪ್ಪಿಯ ‘ಜೈ ಗಣೇಶ’ ಹಾಡುಗಳು ಪಡ್ಡೆ ಹುಡುಗರ ಸುಪ್ರಭಾತವಾಗುವ ಸೂಚನೆಗಳಿವೆ. ಅಭಿನಯದಲ್ಲಿ ಉಪ್ಪಿ ಮೊದಲಿಗಿಂತ ಸಾಕಷ್ಟು ಸುಧಾರಿಸಿದ್ದಾರೆ. ಅವರಾಡುವ ಮಾತುಗಳು ಅರ್ಥವಾಗುವುದು ಚಿಕ್ಕ ಸಾಧನೆಯೇನಲ್ಲ . ಹೊಡೆದಾಟ ಮತ್ತು ನೃತ್ಯದಲ್ಲಿ ನಿಜಕ್ಕೂ ಕಷ್ಟಪಟ್ಟಿದ್ದಾರೆ.

ಮುಂಬೈ ಹುಡುಗಿ ನೇತನ್ಯ ಒಳ್ಳೇ ಸ್ಟ್ರಾಬೆರಿ ಹಣ್ಣಿನಂತಿದ್ದಾಳೆ. ಬಿ.ಸಿ.ಪಾಟೀಲ್‌ ಖಳನಾಯಕನಾಗಿ ಮಿಂಚುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ.

ನಿರ್ದೇಶಕ ನಾಗಣ್ಣ ಉಪ್ಪಿಯನ್ನು ಕಮರ್ಷಿಯಲ್‌ ಹೀರೋ ಮಾಡಲು ಎಲ್ಲ ರೀತಿಯ ಸರ್ಕಸ್‌ ಮಾಡಿದ್ದಾರೆ. ಅಂದಹಾಗೆ, ವಿರಾಮದ ನಂತರ ಕೊಲೆ, ರಕ್ತ ಮತ್ತು ಹೊಡೆದಾಟಗಳೇ ತುಂಬಿದ್ದರೂ ಇದಕ್ಕೆ ‘ಕುಟುಂಬ’ ಎಂದು ಯಾಕೆ ಹೆಸರಿಟ್ಟರೋ ಅರ್ಥವಾಗುವುದಿಲ್ಲ .

(ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada