twitter
    For Quick Alerts
    ALLOW NOTIFICATIONS  
    For Daily Alerts

    ಖುಷಿ ನೀಡಬಲ್ಲ ಈ ‘ರಿಷಿ’

    By Staff
    |
    • ಮಹಾಂತೇಶ ಬಹಾದುಲೆ
    ಪ್ರೇಕ್ಷಕರನ್ನು ಥೇಟರ್‌ಗೆ ಹೇಗೆ ಎಳೆದು ತರಬೇಕೆಂಬುದು ನಿರ್ದೇಶಕ ಪ್ರಕಾಶ್‌ ಅವರಿಗೆ ಗೊತ್ತಾದಂತಿದೆ. ಕುಟುಂಬ ಸಮೇತ ಸಿನಿಮಾ ಮಂದಿರದ ಕುರ್ಚಿಯಲ್ಲಿ ಕೂರಿಸುವ ಮರ್ಮವನ್ನು ಅವರು ಅರಿತಿದ್ದಾರೆ. ದುಡ್ಡು ಕೊಟ್ಟ ಪ್ರೇಕ್ಷಕ ಎಂತಹ ಮನರಂಜನೆ ಬಯಸುತ್ತಾನೆ ಅನ್ನೋದು ಅವರಿಗೆ ಅಂಡರ್‌ಸ್ಪಾಂಡ್‌ ಆಗಿದೆ.

    ಅದಕ್ಕೆ ತುಂಬಿದ ಕುಟುಂಬದ ಕಥೆಯಾಂದೆಡೆ, ತಂದೆಯೇ ಗೊತ್ತಿಲ್ಲದ ಹುಡುಗ ಪರಿತಪಿಸುವ ವ್ಯಥೆಯನ್ನು ಇನ್ನೊಂದೆಡೆ ಇಟ್ಟು, ಕೊನೆಗೆ ಅವೆರಡನ್ನು ಬ್ಯಾಲನ್ಸ್‌ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕನ್ನಡ ಪ್ರೇಕ್ಷಕ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಅಪ್ಪಟ ಮನರಂಜನೆಯ ಖುಷಿಯನ್ನು ಈ ರಿಷಿ ಚಿತ್ರ ನೀಡಬಲ್ಲದು.

    ರಿಷಿ(ಶಿವರಾಜಕುಮಾರ್‌) ತುಂಬಿದ ಸಂಸಾರದಲ್ಲಿ ಹುಟ್ಟಿ ಬೆಳೆದವ. ಪ್ರತಿಷ್ಠಿತ ಕಾಲೇಜೊಂದರಲ್ಲಿ ಟ್ರಸ್ಟಿ ಬೇರೆ. ಅದಕ್ಕೆ ತಕ್ಕಂತೆ ಅವನಿಗೆ ದುಡ್ಡು, ಅಂತಸ್ತು, ಗೌರವ ಧಾರಾಳ, ಧಾರಾಳ. ಅದೇ ಕಾಲೇಜಿಗೆ ವಿದ್ಯಾರ್ಥಿಯಾಗಿ ಬರುತ್ತಾನೆ ಹರಿ(ವಿಜಯ ರಾಘವೇಂದ್ರ).

    ಅಪ್ಪ ನ ವಿಷಯ ಯಾರಾದರೂ ಕೆಣಕಿದರೆ ಅವರ ಮೇಲೆ ಹರಿಹಾಯುವುದೇ ಈ ಹರಿಯ ಕಾಯಕ. ಇವನ ತಂದೆ ಯಾರೆಂಬುದನ್ನು ಹರಿಯ ತಾಯಿ(ವಿನಯ ಪ್ರಸಾದ್‌) ಮುಚ್ಚಿಟ್ಟಿರುವ ಕಾರಣ ಅದಕ್ಕುಂಟು. ಈ ವಿಷಯಕ್ಕಾಗೇ ಪ್ರಾಧ್ಯಾಪಕರೊಬ್ಬರ ಮೇಲೆ ಹರಿಹಾಯ್ದಾಗ ಕಾಲೇಜಿನಿಂದಲೇ ಇವನನ್ನು ಹೊರಗಟ್ಟುವ ಪ್ರಸಂಗ. ಆಗ ಆತನ ನೆರವಿಗೆ ಬರುವವನು ರಿಷಿ.

    ಹಾಗಿದ್ದರೆ ಇವರಿಬ್ಬರ ನಡುವಿನ ಸಂಬಂಧವೇನು ಎಂಬುದು ಗೊತ್ತಾಗುವುದು ವಿರಾಮದ ನಂತರವೆ. ಅದನ್ನು ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿ ಹರಿಯನ್ನು ಒಪ್ಪಿಸಲು ರಿಷಿ ಪಡುವ ಹರಸಾಹಸ ಕಥೆಯುದ್ದಕ್ಕೂ ಬೆಳೆದುಕೊಂಡು ಹೋಗಿದೆ. ಅಂದರೆ ಈ ಸಿನಿಮಾದಲ್ಲಿ ಹುಡುಗಿಯರೇ ಇಲ್ಲವೇ ಅಂತ ಕೇಳಬೇಡಿ.

    ನಮ್ಮ ಕನ್ನಡದ ಹುಡುಗಿ ರಾಧಿಕಾ ‘ಸ್ಫೂರ್ತಿ’ಯಾಗಿ, ಹರಿಯ ಪ್ರೇಯಸಿಯಾಗಿ ಕಾಣಿಸಿಕೊಂಡರೆ, ಪರಭಾಷೆ ನಟಿ ಸಿಂಧು ಅವಳದು ಸ್ನೇಹಾಳ ಪಾತ್ರ. ಅವಳ ‘ಸ್ನೇಹ’ ರಿಷಿಯ ಜತೆ. ಒಬ್ಬಳು ರಿಷಿಯ ಆಶಯಕ್ಕೆ ಪೂರಕವಾಗಿ ನಿಂತರೆ, ಮತ್ತೊಬ್ಬಳು ಕೊಂಚ ಅಡಚಣೆಯಾಗುತ್ತಾಳೆ. ಕೊನೆಗೆ ಎಲ್ಲವೂ ಸುಖಾಂತ್ಯ.

    ಇಲ್ಲಿನ ಪ್ರಸಂಗಗಳಲ್ಲಿ ಅಳುವಿನ ಆಲಾಪಕ್ಕಿಂತ ನಗುವಿನ ಕೇಕೆಯೇ ಹೆಚ್ಚು. ಎಲ್ಲಿ ಕಥೆ ಎಡವಟ್ಟಾಯ್ತಾ ಏನೊ ಎಂಬ ಅಳುಕನ್ನು ಪ್ರೇಕ್ಷಕರಲ್ಲಿ ಹುಟ್ಟಿಸಿ, ಅದನ್ನು ಮತ್ತೆ ಸರಾಗವಾಗಿ ಪೋಣಿಸುತ್ತ ಹೋಗುವ ನಿರ್ದೇಶಕನ ಜಾಣ್ಮೆ, ಚಿತ್ರಕ್ಕೆ ತೂಕ ತಂದಿದೆ. ಇವರ ಮೊದಲ ಚಿತ್ರ ‘ಖುಷಿ’. ಆ ಹೆಸರಿನ ಭಾವ ಇದರಲ್ಲಿ ಕಾಣಿಸಿಕೊಂಡಿದೆ.

    ಇತ್ತೀಚೆಗಂತೂ, ಬರೀ ಸೋಲಿನ ಸರಮಾಲೆಯನ್ನೇ ಕಂಡಿರುವ ಶಿವರಾಜ್‌ಕುಮಾರ್‌ ಹಾಗೂ ವಿಜಯ ರಾಘವೇಂದ್ರ, ಸೋಲಿನ ಮೇಲೆ ಸೇಡು ತೀರಿಸಿಕೊಳ್ಳುವಂತೆ ನಟಿಸಿದ್ದಾರೆ.

    ವಿಜಯ ರಾಘವೇಂದ್ರ ಈಗ ಎಳೆ ಹುಡುಗನಲ್ಲ. ರಾಧಿಕಾ ತಾನು ಗ್ಲಾಮರ್‌ಗೂ ಸೂಟ್‌ ಆಗುತ್ತೇನೆ ಎಂದು ತೋರಿಸಿಕೊಟ್ಟಿದ್ದಾಳೆ. ಸಿಂಧು ಅಭಿನಯ ಪರವಾಗಿಲ್ಲ.

    ಹಿನ್ನೆಲೆ ಸಂಗೀತ ಹಿತವಾಗಿದೆ. ಗುರುಕಿರಣ್‌ ಸಂಗೀತ ಸುಮಧುರವಾಗಿದ್ದು, ಒಂದೆರಡು ಹಾಡುಗಳು ಗುನುಗುವಂತಿವೆ. ತಿಳಿಯಾದ ಹಾಸ್ಯ ಆಗಾಗ ಕಚಗುಳಿ ಇಡುತ್ತದೆ. ದೊಡ್ಡಣ್ಣ ಹಾಗೂ ರಾಮಕೃಷ್ಣ ಅದನ್ನು ಪೋಷಿಸಿದ್ದಾರೆ. ಕೃಷ್ಣಕುಮಾರ್‌ ತಮ್ಮ ಕ್ಯಾಮರಾ ಕೈಚಳಕ ತೋರಿಸಿದ್ದಾರೆ. ಈ ಟೀಮ್‌ ವರ್ಕ್‌ಗೆ ತುಂಬ ದಿನದ ಹೋಂ ವರ್ಕ್‌ ಚೆನ್ನಾಗಿ ನೆರವಾಗಿದೆ ಎಂದು ಬೇರೆ ಹೇಳಬೇಕಿಲ್ಲ.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, March 29, 2024, 4:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X