ಆ 'ಬಂಧನ' ಅಲ್ಲ ಈ ಬಂಧನ!

By Staff

ಕನ್ನಡ ಪ್ರೇಕ್ಷಕರಿಗೆ ಇಂಥ ಕತೆ ಹೊಸತಲ್ಲ. ಸ್ಕೂಲ್ ಮಾಸ್ಟರ್ ಕಾಲದಿಂದಲೂ ಇಂತ ಕತೆ ಆಗಾಗ ವೇಷ ಬದಲಿಸಿಕೊಂಡು ಬರುತ್ತಿರುತ್ತದೆ. ಈಗ 'ಈ ಬಂಧನ' ಎಂದು ನಾಮಕರಣ ಮಾಡಿಕೊಂಡಿದೆ. ಇದು ಹಿಂದಿಯ ಬಾಗ್ ಬನ್ ಚಿತ್ರದ ರಿಮೇಕು. ಆದರೆ ಹೀಗಂದರೆ ನಿರ್ಮಾಪಕ ಜೈಜಗದೀಶ್ ಕೋಪ ಮಾಡಿಕೊಳ್ಳುತ್ತಾರೆ. ಹೀಗಾಗಿ ಇದನ್ನು ನೀವು ಅಪ್ಪಟ ಕನ್ನಡ ಚಿತ್ರ ಎಂದು ನೋಡಬೇಕು.

  • ದೇವ್

ಮಕ್ಕಳೇ ಅವರಿಗೆ ಜೀವ ಮತ್ತು ಜೀವನ. ಅವರಿಗಾಗಿ ತಮ್ಮ ಬದುಕಿನ ಎಲ್ಲಾ ಇಡುಗಂಟನ್ನೂ ಖರ್ಚು ಮಾಡುತ್ತಾರೆ. ಅದೇ ಮಕ್ಕಳನ್ನು ನಂಬಿ ಹಿಡಿಕಾಸನ್ನು ತಮಗಾಗಿ ಉಳಿಸಿಕೊಂಡಿರುವುದಿಲ್ಲ. ಕೊನೆಗಾಲದಲ್ಲಿ ಅವರು ನಮ್ಮನ್ನು ಸಾಕುತ್ತಾರೆ ಎಂದು ತಿಳಿದಿರುತ್ತಾರೆ. ಆದರೆ ಆಗುವುದೇ ಬೇರೆ. ಆ ಮಕ್ಕಳು ಅಪ್ಪ ಅಮ್ಮನನ್ನು ಸಾಕಲು ಹಿಂದೇಟು ಹಾಕುತ್ತಾರೆ. ಎರಡು ದೇಹ ಒಂದು ಪ್ರಾಣ ಎಂದು ನಂಬಿರುವ ಅಪ್ಪ ಅಮ್ಮನನ್ನು ಬೇರೆ ಬೇರೆ ಮಗನ ಮನೆಯಲ್ಲಿ ಇಟ್ಟರೆ ಈ ಸಾಕುವ ತರಲೆಯಿಂದ ಪಾರಾಗಬಹುದು ಎಂದು ಸ್ಕೆಚ್ ಹಾಕುತ್ತಾರೆ. ಆದರೆ ಅದಕ್ಕೂ ಆ ತಂದೆ ತಾಯಿ ಒಪ್ಪುತ್ತಾರೆ. ಆಗ ಅವರಿಗೆ ಮಕ್ಕಳ ಸ್ವಾರ್ಥ ಗೊತ್ತಾಗುತ್ತದೆ. ಮಕ್ಕಳು ಮಕ್ಕಳಲ್ಲ ಎಂದು ತಿಳಿಯುತ್ತದೆ. ಮುಂದೆ ಏನಾಗುತ್ತದೆ?

ಕನ್ನಡ ಪ್ರೇಕ್ಷಕರಿಗೆ ಇಂಥ ಕತೆ ಹೊಸತಲ್ಲ. ಸ್ಕೂಲ್ ಮಾಸ್ಟರ್ ಕಾಲದಿಂದಲೂ ಇಂತ ಕತೆ ಆಗಾಗ ವೇಷ ಬದಲಿಸಿಕೊಂಡು ಬರುತ್ತಿರುತ್ತದೆ. ಈಗ 'ಈ ಬಂಧನ' ಎಂದು ನಾಮಕರಣ ಮಾಡಿಕೊಂಡಿದೆ. ಇದು ಹಿಂದಿಯ ಬಾಗ್ ಬನ್ ಚಿತ್ರದ ರಿಮೇಕು. ಆದರೆ ಹೀಗಂದರೆ ನಿರ್ಮಾಪಕ ಜೈಜಗದೀಶ್ ಕೋಪ ಮಾಡಿಕೊಳ್ಳುತ್ತಾರೆ. ಹೀಗಾಗಿ ಇದನ್ನು ನೀವು ಅಪ್ಪಟ ಕನ್ನಡ ಚಿತ್ರ ಎಂದು ನೋಡಬೇಕು. ಇದು ಬಿಟ್ಟರೆ ನಿಮಗೆ ನೆನಪಿನಲ್ಲಿ ಉಳಿಯುವುದು ವಿಷ್ಣುವರ್ಧನ್, ಜಯಪ್ರದಾ ಹಾಗೂ ದರ್ಶನ್. ಮೂವರೂ ತಮ್ಮ ಪಾತ್ರಗಳನ್ನು ನೀಟಾಗಿ ನಿಭಾಯಿಸಿದ್ದಾರೆ. ತೆರೆ ಮೇಲೆ ವಿಷ್ಣು ಜಯಪ್ರದಾ ಜೋಡಿ ಗ್ಲಾಮರಸ್ ಆಗಿ ಕಾಣಿಸುತ್ತಾರೆ. ಸೆಂಟಿಮೆಂಟ್ ದೃಶ್ಯಗಳಲ್ಲಿ ವಿಷ್ಣು ಮನಸನ್ನು ತಟ್ಟುತ್ತಾರೆ. ಆದರೆ ಇನ್ನು ಕೆಲವು ಕಡೆ ಯಾಕೋ ನಾಟಕೀಯತೆಯನ್ನು ರೂಢಿಸಿಕೊಂಡಿದ್ದು ಅಚ್ಚರಿ. ಅನಂತ್‌ನಾಗ್ ಮತ್ತು ತಾರಾ ಜೋಡಿ ರಿಲ್ಯಾಕ್ಸ್ ಮಾಡುತ್ತಾರೆ. ರಘು ಸಮರ್ಥ, ನೀನಾಸಂ ಅಶ್ವತ್ಥ್ ಸೇರಿದಂತೆ ಮೂವರು ಮಕ್ಕಳು ಇರುವಷ್ಟರಲ್ಲಿ ಪ್ರತಿಭೆ ತೋರಿಸಿದ್ದಾರೆ. ಮನೋಮೂರ್ತಿ ಸಂಗೀತದಲ್ಲಿ ಎರಡು ಹಾಡುಗಳು ಗುಂಗು ಹಿಡಿಸುತ್ತವೆ. ಸಂಭಾಷಣೆ ಇನ್ನಷ್ಟು ಚುರುಕಾಗಿದ್ದರೆ ಚೆನ್ನಾಗಿತ್ತು. ಆದರೆ 'ಪ್ರೀತಿಗೆ ಮೋಸ ಮಾಡಬಹುದು. ಆದರೆ ಪ್ರೀತಿ ಯಾಗಿಗೂ ಮೋಸ ಮಾಡುವುದಿಲ್ಲ ಎನ್ನುವ ಸಾಲಿನಿಂದ ಬಿ.ಎ. ಮಧು ಹತ್ತಿರವಾಗುತ್ತಾರೆ.

ವಿಜಯಲಕ್ಷ್ಮೀ ಸಿಂಗ್ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರು ತಮಗೆ ಎಷ್ಟು ಸಾಧ್ಯವೋ ಅಷ್ಟು ಜತನದಿಂದ ಕೆಲಸ ಮಾಡಿದ್ದಾರೆ. ಆದರೆ ಕೆಲವು ಮಾತುಗಳನ್ನು ಹೇಳಲೇ ಬೇಕು. ಅದು ನಿರೂಪಣೆಗೆ ಸಂಬಂಧಿಸಿದ್ದು. ಇಲ್ಲಿ ಎಲ್ಲವೂ ಇದೆ. ಆದರೆ ಜೀವಂತಿಕೆ ತುಂಬಾ ಕಡಿಮೆ ಇದೆ. ಬರೀ ದೃಶ್ಯಗಳು ಮಾತ್ರ ಕತೆಯಾಗುವುದಿಲ್ಲ. ಅದನ್ನು ಒಂದೇ ದಾರದಲ್ಲಿ ಪೋಣಿಸುವ ಹಾಗೂ ಅದೆಲ್ಲಾ ಒಂದೇ ಅನ್ನಿಸುವಂಥ ಚೇತನವೇ ಇಡೀ ಚಿತ್ರಕ್ಕೆ ಬುನಾದಿ ಹಾಕುತ್ತದೆ. ಅದನ್ನು ಮುಂದಿನ ಚಿತ್ರದಲ್ಲಿ ಇವರು ಮರೆಯದಿರಲಿ. ಆದರೆ ಮನೆ ಮಂದಿಯೆಲ್ಲಾ ಮುಜಗರ ಇಲ್ಲದೆ ನೋಡುವ ಚಿತ್ರವನ್ನು ಕೊಟ್ಟಿದ್ದಾರೆ. ತಂದೆ ತಾಯಿ ಅಂದರೆ 'ವೇಸ್ಟ್ ಬಾಡಿ'ಗಳು ಎಂದು ತಿಳಿದಿರುವ ಮಕ್ಕಳಿಗೆ ಶಾಲಲ್ಲಿ ಸುತ್ತಿ ಹೊಡೆದಿದ್ದಾರೆ. ಕಳೆದು ಹೋಗುತ್ತಿರುವ ಸಂಬಂಧಗಳ ಅರ್ಥವನ್ನು ತೋರಿಸಿದ್ದಾರೆ. ರಕ್ತ ಸಂಬಂಧಕ್ಕಿಂತ ಪ್ರೀತಿಯ ಸಂಬಂಧ ದೊಡ್ಡದು ಎಂದು ನಿರೂಪಿಸಿದ್ದಾರೆ. ಇದಕ್ಕಾದರೂ ನೆವೊಮ್ಮೆ 'ಈ ಬಂಧನ' ನೋಡಲೇ ಬೇಕು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X