ಅಮೂಲ್ಯಾ ಮನಸಾಲಜಿ ಸಿನಿಮಾ ಹೇಗಿದೆ ?

manasaalogy
ಮನಸಾಲಜಿ ಸಿನಿಮಾ ನೋಡಿದಾಗ ಈ ಶೀರ್ಷಿಕೆ 'ಈ ಸಿನಿಮಾ'ಕ್ಕೆ ಅದೆಷ್ಟು ಹೊಂದಿಕೆಯಾಗಿದೆ ಎಂಬ ಗೊಂದಲ ಮನಸ್ಸಿನಲ್ಲಿ ಮೂಡುವುದು ಖಂಡಿತ. ಹಾಗಾಗಲು ಕಾರಣ ಮನಸಾಲಜಿಯ ಮಾಮೂಲಿ ಎನಿಸುವ ಕಥೆ, ನಿರೂಪಣೆ.

ಇದೊಂದು ಮೊಬೈಲ್ (ತ್ರಿಕೋನ?) ಪ್ರೇಮಕಥೆ. ಮೊಬೈಲಿನಲ್ಲಿ ಬರುವ ಕವನಕ್ಕೆ ಮನಸೋತು (ಕವಿ!), ಕಾಣದ ಅವನನ್ನು ಪ್ರೀತಿಸುವ ನಾಯಕಿ. ಅಪ್ಪನನ್ನು ಫ್ರೆಂಡ್ ನಂತೆ ಕಾಣುವ ನಾಯಕಿ ಅವಳ ಪ್ರೀತಿಯ ವಿಷಯ ಹೇಳಿಕೊಳ್ಳುವುದು ನಾಟಕೀಯ ಎನಿಸದೇ ಅಪ್ಪ-ಮಗಳ ನವಿರಾದ ಬಾಂದವ್ಯಕ್ಕೆ ಕನ್ನಡಿಯಂತಿದೆ. ಮಗಳ ಪ್ರೀತಿಯನ್ನೊಪ್ಪಿ ಸಹಕರಿಸುವ ಅಪ್ಪ, ಅಪರಿಚಿತ, ಗೊತ್ತು-ಗುರಿ ಇಲ್ಲದ ಹುಡುಗನನ್ನು ಪ್ರೀತಿಸುವ ಮಗಳ ಬಾಳು ಏನಾಗುತ್ತೋ ಎಂಬ ತಳಮಳದಲ್ಲಿ ದಿನ ದೂಡುವುದು ಹೃದಯ ತಟ್ಟುವುದು ಖಂಡಿತ.

ಆದರೆ... ಮನಸಾಲಜಿಯಲ್ಲಿ ಏನೋ ಮಿಸ್ ಆಗಿದೆ ಎಂದು ಅನ್ನಿಸಿದರೆ ಅದು ನಿಮ್ಮ ತಪ್ಪಲ್ಲ, ನಿರ್ದೇಶಕರದು. ತೆರೆಯ ತುಂಬೆಲ್ಲಾ ತುಂಬಿಕೊಳ್ಳುವ ಅಮೂಲ್ಯಾ, ಸಿಹಿಸಿಹಿ ಅನಿಸುವುದು ಸುಳ್ಳಲ್ಲ. ಲವ್ ಓಕೆ, ಸೆಂಟಿಮೆಂಟ್ ಯಾಕೆ ಅನ್ನುವಂತಿದೆ ಅಮೂಲ್ಯಾ ನಟನೆ. ಆದರೂ ನಾಯಕಿ ಪ್ರಧಾನ ಚಿತ್ರವನ್ನು ಹೆಗಲಮೇಲೆ ಹೊತ್ತು ಓಡಿದ್ದನ್ನು ಮೆಚ್ಚಿಕೊಳ್ಳಲೇಬೇಕು. ಇನ್ನು ಕಾಕೇಶ್ ಪಕ್ಕಾ ಲವರ್ ಬಾಯ್. ನೋಡುವುದಕ್ಕೆ ಮದ್ದು ಮುದ್ದು, ನಟನೆಯೂ ಚೆಂದ. ಇಬ್ಬರೂ ಸ್ವಲ್ಪ ಸ್ಲಿಮ್ ಆದರೆ ಒಳ್ಳೆಯದು...

ಅಪ್ಪನ ಪಾತ್ರದ ಅಚ್ಯುತ್ ಇಷ್ಟವಾಗುತ್ತಾರೆ. ಸಾಧುಕೋಕಿಲ ಹಾಸ್ಯ ಎಂದಿನಂತೇ ಇದೆ. ಮಿತ್ರ, ಶತ್ರು ಆಗಿಲ್ಲ ಎನ್ನುವುದು ಚಿಕ್ಕ ಸಂಗತಿ ಅಲ್ಲ.

ಅನೂಪ್ ಸೀಳಿನ್ ಸಂಗೀತದಲ್ಲಿ ಎರಡು ಹಾಡುಗಳು ಮಧುರವಾಗಿದ್ದು ಥಿಯೇಟರಿನಿಂದ ಆಚೆ ಬಂದ ಮೇಲೂ ಗುನುಗುವಂತಿದೆ. ಅಶೋಕ್ ಮದ್ದೂರ್ ಸಂಭಾಷಣೆ ಹಾಗೇ ಸುಮ್ಮನೆ. ಕುಟುಂಬ ಸಮೇತ ಹೋಗಿ ನೋಡುಬಹುದಾದ ಸಿನಮಾ, ನೋಡಿ ಬನ್ನಿ ಎನ್ನಬಹುದು...

ಚಿತ್ರ: ಮನಸಾಲಜಿ
ನಿರ್ದೇಶನ, ನಿರ್ಮಾಣ: ದೀಪಕ್ ಅರಸ್
ತಾರಾಗಣ: ರಾಕೇಶ್. ಅಮೂಲ್ಯ, ಅಚ್ಯುತ, ಸಾಧುಕೋಕಿಲ, ಮಿತ್ರ
ಅನೂಪ್ ಸೀಳಿನ್ ಸಂಗೀತ, ಅಶೋಕ ಮದ್ದೂರ್ ಸಂಭಾಷಣೆ

More from Filmibeat

English summary
Kannada Movie "Manasaalogy" is released and making sound in sandalwood. But sound is ok, but is it higher sound or lower sound? Answer for the question is here, read it...
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X