»   » ‘ಸಿಂಹಾದ್ರಿಯ ಸಿಂಹ’ ಮತ್ತು ‘ಜಮೀನ್ದಾರ್ರು’ ಚಿತ್ರಗಳ ಮುಂದುವರಿದ ಭಾಗದಂತೆ ಕಾಣುವ ‘ರಾಜ ನರಸಿಂಹ’ದಲ್ಲಿ ತೆಲುಗಿನ ಛಾಯೆ ದಟ್ಟವಾಗಿದೆ.

‘ಸಿಂಹಾದ್ರಿಯ ಸಿಂಹ’ ಮತ್ತು ‘ಜಮೀನ್ದಾರ್ರು’ ಚಿತ್ರಗಳ ಮುಂದುವರಿದ ಭಾಗದಂತೆ ಕಾಣುವ ‘ರಾಜ ನರಸಿಂಹ’ದಲ್ಲಿ ತೆಲುಗಿನ ಛಾಯೆ ದಟ್ಟವಾಗಿದೆ.

Posted By:
Subscribe to Filmibeat Kannada

‘ಸಿಂಹಾದ್ರಿಯ ಸಿಂಹ’ ಮತ್ತು ‘ಜಮೀನ್ದಾರ್ರು’ ಚಿತ್ರಗಳ ಮುಂದುವರಿದ ಭಾಗದಂತೆ ಈ ‘ರಾಜ ನರಸಿಂಹ’ ಕಾಣಿಸೋದು ಅಚ್ಚರಿಯೇನಲ್ಲ. ನಿರ್ದೇಶಕ ಮುತ್ಯಾಲ ಸುಬ್ಬಯ್ಯ ತೆಲುಗಿನವರಾದ್ದರಿಂದ ಇಲ್ಲೂ ತೆಲುಗಿನ ಛಾಯೆ ದಟ್ಟವಾಗಿ ಕಾಣುತ್ತದೆ. ಅವರು ವಿಷ್ಣುವರ್ಧನ ಅವರಿಗೆ ಬಳಸಿದ ಮ್ಯಾನರಿಸಂಗಳು ಅದಕ್ಕೊಂದು ಉದಾಹರಣೆ. ಹಾಗೆಯೇ ಎರಡು ಮೂರು ದೃಶ್ಯಗಳಲ್ಲಿ ತಾಜಾತನದ ಸ್ಪರ್ಶವಿದೆ. ಇದು ಸಂಪೂರ್ಣ ವಿಷ್ಣುಮಯ ಚಿತ್ರ. ಮೈನಸ್‌ ವಿಷ್ಣು ಇಲ್ಲೇನೂ ಇಲ್ಲ.

ಸೆಂಟಿಮೆಂಟ್‌ ದೃಶ್ಯಗಳಲ್ಲಿ ಕಾಣಿಸುವ ಸಂಯಮ ವಿಷ್ಣು ಅವರೊಳಗಿನ ಕಲಾವಿದನ ದರ್ಶನ ಮಾಡಿಸುತ್ತದೆ. ಆದರೆ ಇಂತಹ ಪಾತ್ರಗಳಲ್ಲಿ ಸಾಕಷ್ಟು ಸಾರಿ ಕಾಣಿಸಿಕೊಂಡಿರುವುದರಿಂದ ಇದರಲ್ಲಿ ಹೊಸತನ ಹುಡುಕುವುದು ತಪ್ಪು.

ರಾಶಿ, ರಾಶಿರಾಶಿ ಸೌಂದರ್ಯದಿಂದ ಕಣ್ಣು ಕುಕ್ಕುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಮತ್ತೊಬ್ಬ ನೀಲಾಂಬರಿಯಾಗುವ ಅವಕಾಶವನ್ನು ರಮ್ಯಕೃಷ್ಣ ತಪ್ಪಿಸಿಕೊಂಡಿದ್ದಾರೆ. ಶೋಭರಾಜ್‌ ನೆನಪಿನಲ್ಲಿ ಉಳಿಯುತ್ತಾರೆ. ಅಭಿಜಿತ್‌ ಯಾಕಾದರೂ ನೆನಪಾಗುತ್ತಾರೋ ಅನ್ನುವಂತಿದ್ದಾರೆ.

ದೇವಾ ಸಂಗೀತದಲ್ಲಿ ಎರಡು ಹಾಡು ಮಧುರವಾಗಿವೆ. ಆದರೆ ಕಲ್ಯಾಣ್‌ ಬರೆದ ಹಾಡಿನಲ್ಲಿ ವಿಷ್ಣು ಬಹುಪರಾಕ್‌ ಬಿಟ್ಟು ಬೇರೇನೂ ಇಲ್ಲ. ‘ಹಿಮಾಲಯ ಪರ್ವತ, ಹಿಂದೂ ಮಹಾಸಾಗರ ಮತ್ತು ರಾಜ ನರಸಿಂಹ’ ನೋಡೋದಕ್ಕೆ ಚಂದ. ಈ ಮೂರನ್ನು ಕೇಳೋದಕ್ಕೆ ಸಾಧ್ಯವಿಲ್ಲ’.

ಹೀಗೆ ಚಪ್ಪಾಳೆ ಗಿಟ್ಟಿಸುವ ಸಂಭಾಷಣೆ ಬರೆದದ್ದು ಎಂ. ಎಸ್‌.ರಮೇಶ್‌. ಅವರೇ ಚಿತ್ರದ ಹೈಲೈಟ್‌ ಕೂಡ. ಫೋಟೋಗ್ರಫಿ, ಕಲಾ ನಿರ್ದೇಶನ ಮುದ ನೀಡುತ್ತದೆ.

(ವಿಜಯ ಕರ್ನಾಟಕ)

Post your views

ಪೂರಕ ಓದಿಗೆ-
‘ರಾಜಾ ನರಸಿಂಹ’ನ ಏಡ್ಸ್‌ ರ್ಯಾಲಿ !
ವಿಷ್ಣುವರ್ಧನ್‌ : ಏನು ಮಾಡ್ತಿದಾರೆ ? ಎಲ್ಲಿಗೆ ಹೋಗ್ತಾರೆ ?
ವಿಷ್ಣುವರ್ಧನ್‌ ಸಂದರ್ಶನ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada