»   » ಉಲ್ಟಾಪಲ್ಟಾ ನಂತರ ದೀರ್ಘಕಾಲ ಅಜ್ಞಾತವಾಸದಲ್ಲಿದ್ದ ಎನ್‌.ಎಸ್‌.ಶಂಕರ್‌ ರಾಂಗ್‌ ನಂಬರ್‌ ಮೂಲಕ ಗಾಂಧಿನಗರಕ್ಕೆ ಮರಳಿದ್ದಾರೆ. ರಾಂಗ್‌ ನಂಬರ್‌ ಮಹತ್ವದ ಚಿತ್ರವಲ್ಲದಿದ್ದರೂ ಗಮನಾರ್ಹ ಚಿತ್ರ.

ಉಲ್ಟಾಪಲ್ಟಾ ನಂತರ ದೀರ್ಘಕಾಲ ಅಜ್ಞಾತವಾಸದಲ್ಲಿದ್ದ ಎನ್‌.ಎಸ್‌.ಶಂಕರ್‌ ರಾಂಗ್‌ ನಂಬರ್‌ ಮೂಲಕ ಗಾಂಧಿನಗರಕ್ಕೆ ಮರಳಿದ್ದಾರೆ. ರಾಂಗ್‌ ನಂಬರ್‌ ಮಹತ್ವದ ಚಿತ್ರವಲ್ಲದಿದ್ದರೂ ಗಮನಾರ್ಹ ಚಿತ್ರ.

Posted By:
Subscribe to Filmibeat Kannada

ಎಚ್‌. ಎಂ. ರಾಮಚಂದ್ರ ಛಾಯಾಗ್ರಹಣ ಚಿತ್ರದ ಗಮನಾರ್ಹ ಅಂಶ. ವಿ. ಮನೋಹರ್‌ ಹಿನ್ನೆಲೆ ಸಂಗೀತ ಕತೆಗೊಂದು ಫೋರ್ಸ್‌ ತಂದಿದೆ. ಒಂದು ಹಾಡು ಕೇಳುವಂತಿದೆ. ಉಳಿದದ್ದು ಇರದಿದ್ದರೂ ನಡೆಯುತ್ತಿತ್ತು. ಭಾವನಾ ತನ್ನ ಪಾತ್ರವನ್ನು ಅತಿರೇಕವಿಲ್ಲದೇ ನಿಭಾಯಿಸಿದ್ದಾರೆ.

ನೆಗೆಟಿವ್‌ ಪಾತ್ರದ ಸುದೇಶ್‌ ತಮ್ಮ ಕಡೆಗೆ ಉದ್ಯಮ ನೋಡುವಂತೆ ಅಭಿನಯಿಸಿದ್ದಾರೆ. ಆದರೆ ಅವರ ನಟನೆಯಲ್ಲಿ ಬೇರೆ ಬೇರೆ ನಟರ ಛಾಪು ಎದ್ದು ಕಾಣುತ್ತದೆ. ಶೋಭರಾಜ್‌ ಪಾತ್ರಕ್ಕೆ ನಿರ್ದಿಷ್ಟ ಆಯಾಮವಿಲ್ಲ. ಪ್ರೀತಿಯ ತಮ್ಮನಾಗಿ ಹರೀಶ್‌ ರಾಜ್‌ ಮುದ್ದು ಮಾಡುವಂತಿದ್ದಾನೆ. ಎಲ್ಲ ಮಿತಿಗಳ ನಡುವೆಯೂ ಪ್ರೇಕ್ಷಕರು ರಾಂಗ್‌ ನಂಬರ್‌ ಎಂದು ಹೇಳುವಂತಿಲ್ಲ ಎನ್ನುವುದೇ ಸಮಾಧಾನ. ಯಾಕೆಂದರೆ ಇದು ಅಲ್ಲಲ್ಲಿ ಮಾತ್ರ ರಾಂಗ್‌ ನಂಬರ್‌ ಮಾರಾಯ್ರೇ...

(ವಿಜಯ ಕರ್ನಾಟಕ)

Post your views

ಪೂರಕ ಓದಿಗೆ-
ಕಾವೇರಿಯಲ್ಲಿ ಕಾಲ್ಜಾರಿದ ಎನ್‌.ಎಸ್‌. ಶಂಕರ್ರೂ..

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada