»   » ನಾಯಕನಾಗಿ ಉಪೇಂದ್ರ ಅವನತಿಯ ಮುಂದುವರಿದ ಭಾಗದಂತಿರುವ ಈ ‘ನಾಗರಹಾವು’ ಕಚ್ಚುವುದಿಲ್ಲ - ನುಂಗುತ್ತದೆ!

ನಾಯಕನಾಗಿ ಉಪೇಂದ್ರ ಅವನತಿಯ ಮುಂದುವರಿದ ಭಾಗದಂತಿರುವ ಈ ‘ನಾಗರಹಾವು’ ಕಚ್ಚುವುದಿಲ್ಲ - ನುಂಗುತ್ತದೆ!

Subscribe to Filmibeat Kannada

ತಮ್ಮೊಳಗಿನ ಕಲಾವಿದನನ್ನು ತಣಿಸುವ ಅಮೂಲ್ಯ ಅವಕಾಶವನ್ನು ಉಪೇಂದ್ರ ಕಳೆದುಕೊಂಡಿದ್ದಾರೆ. ಇವರನ್ನು ಶಾರೂಕ್‌ಗೆ ಹೋಲಿಸುತ್ತಿಲ್ಲ . ಉಪ್ಪಿಯ ಮಾಮೂಲಿ ಗಿಮಿಕ್ಕು ಇಲ್ಲದ್ದು ಈ ಚಿತ್ರದ ವೈಶಿಷ್ಟ್ಯವೂ ಹೌದು, ದೌರ್ಬಲ್ಯವೂ ಹೌದು. ಇದು ಉಪೇಂದ್ರ ಅವರ ದುರಂತವೇ ಹೊರತು ಚಿತ್ರದ್ದಲ್ಲ.

ಅಕ್ಕ-ತಂಗಿಯರಿಬ್ಬರನ್ನು ಒಟ್ಟಿಗೆ ಪ್ರೀತಿಸುವ ನಾಯಕನ ಎರಡು ಮುಖಗಳನ್ನು ನಿಖರವಾಗಿ ತೋರಿಸಲು ಅವರಿಗೆ ಸಾಧ್ಯವಾಗಿಲ್ಲ . ಎರಡನೇ ಭಾಗವೇ ಕತೆಗೊಂದು ಫೋರ್ಸ್‌ ತಂದಿದೆ. ಉಪ್ಪಿ ಏನಾದರೂ ನಟಿಸಿದ್ದರೆ ಇಲ್ಲಿಯೇ. ರಿಮೇಕ್‌ ಮಾಡಿದರೂ ಸ್ವಂತ ಟ್ಯೂನ್‌ಗಳನ್ನು ಬಳಸಿದ್ದಕ್ಕೆ ಹಂಸಲೇಖಾಗೆ ಥ್ಯಾಂಕ್ಸ್‌ ಹೇಳಬೇಕು.

ಗಿರಿ ಛಾಯಾಗ್ರಹಣ ಇಡೀ ಚಿತ್ರವನ್ನು ಎತ್ತಿ ಹಿಡಿದಿದೆ. ವಿದೇಶದ ಸಂಜೆ ಬಿಸಿಲಿನಲ್ಲಿ ಅವರ ಕೆಮರಾ ಕೈಚಳಕದ ಮಸಲತ್ತಿದೆ. ದ್ವಿಪಾತ್ರದ ತಾಂತ್ರಿಕ ಕೌಶಲ್ಯವೂ ಉಲ್ಲೇಖಾರ್ಹ. ದ್ವಿಪಾತ್ರದಲ್ಲಿ ನಟಿಸಿರುವ ಜ್ಯೋತಿಕಾ ಪರವಾಗಿಲ್ಲ. ಅಂಬಿಕಾಗೆ ಅವಕಾಶವಿಲ್ಲ . ಸಾಧುಕೋಕಿಲಾ ಹಾಸ್ಯ ವರ್ಕ್‌ಔಟ್‌ ಆಗಿಲ್ಲ. ರಾಜೀವ್‌ ಪಾತ್ರದಲ್ಲಿ ಬೇರೆ ಯಾರಾದರೂ ನಟಿಸಿದ್ದರೆ ಒಳ್ಳೆಯದಿತ್ತು. ದೊಡ್ಡಣ್ಣನವರ ದೇಹದಷ್ಟೇ ಗಂಟಲೂ ದೊಡ್ಡದಾಗಿದೆ. ಅಂದಹಾಗೆ ಈ ‘ನಾಗರಹಾವು’ ಕಚ್ಚುವುದಿಲ್ಲ, ನುಂಗುತ್ತದೆ.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada