»   » ತುಂಬಾ ದಿನಗಳ ನಂತರ ಕಾಣಿಸಿರುವ ಸಾಯಿಕುಮಾರ್‌ ಜಾಸ್ತಿ ಭಾಷಣ ಮಾಡಿಲ್ಲವೆಂಬುದು, ನಿಂತಲ್ಲಿಯೇ ಕುಣಿಯುವ ಚಟವನ್ನು ಕಡಿಮೆ ಮಾಡಿಕೊಂಡಿರೋದೆ ಎಂಟನೇ ಅದ್ಭುತ.

ತುಂಬಾ ದಿನಗಳ ನಂತರ ಕಾಣಿಸಿರುವ ಸಾಯಿಕುಮಾರ್‌ ಜಾಸ್ತಿ ಭಾಷಣ ಮಾಡಿಲ್ಲವೆಂಬುದು, ನಿಂತಲ್ಲಿಯೇ ಕುಣಿಯುವ ಚಟವನ್ನು ಕಡಿಮೆ ಮಾಡಿಕೊಂಡಿರೋದೆ ಎಂಟನೇ ಅದ್ಭುತ.

Subscribe to Filmibeat Kannada

ಸಾಯಿಕುಮಾರ್‌ ಚಿತ್ರಕ್ಕೆ ಕತೆ ಮಾಡುವುದು ಎಷ್ಟು ಸುಲಭವೆಂದು ನಿರ್ದೇಶಕ ಹ.ಸೂ.ರಾಜಶೇಖರ್‌ ತೋರಿಸಿದ್ದಾರೆ. ಸಾಯಿ ನಟಿಸಿರುವ ಹಳೆಯ ನಾಲ್ಕೈದು ಚಿತ್ರಗಳನ್ನು ಸೇರಿಸಿದರೆ ಅಲ್ಲೊಬ್ಬ ‘ಸೂಪರ್‌ ಪೊಲೀಸ್‌’ ಅನಾಯಾಸವಾಗಿ ಹುಟ್ಟಿಕೊಳ್ಳುತ್ತದೆ. ಜನ ಸಾಮಾನ್ಯರಿಗೆ ಮಾಡಲಾಗದ ಕೆಲಸವನ್ನು ಯಾರೋ ಒಬ್ಬ ಮಾಡಿದನೆಂದರೆ ಶಿಳ್ಳೆ, ಚಪ್ಪಾಳೆ ಖಂಡಿತ. ಅದು ನಿರ್ದೇಶಕನಿಗೆ ಗೊತ್ತು. ಅಂತಹ ಘಟನೆಗಳನ್ನು ಸರದಂತೆ ಜೋಡಿಸಿದ್ದಾರೆ. ಹೆಸರಿಗೊಬ್ಬ ನಾಯಕಿಯನ್ನು ತೂರಿಸಿದ್ದಾರೆ. ಅಗತ್ಯವಿಲ್ಲದಿದ್ದರೂ ಹಾಡುಗಳಿಗೆ ಮೊರೆ ಹೋಗಿದ್ದಾರೆ.

ಕೊನೆಯ ಅರ್ಧ ಗಂಟೆಯ ಕತೆಯನ್ನು ‘ಮುದಲ್‌ವನ್‌’ ಚಿತ್ರದಿಂದ ಕದ್ದಿದ್ದರೂ ಇದನ್ನು ಸ್ವಮೇಕ್‌ ಎನ್ನುವ ನಿರ್ಮಾಪಕರ ಧೈರ್ಯಕ್ಕೆ ಸಾಯಿಕುಮಾರ್‌ ಕೂಡಾ ಬೆರಗಾಗಬಹುದು. ಒಮ್ಮೊಮ್ಮೆ ಚಿರಂಜೀವಿ, ಮಗದೊಮ್ಮೆ ರಜನಿ ಸ್ಟೈಲುಗಳನ್ನು ಕದ್ದರೂ ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಪ್ರತಿ ಫ್ರೇಮ್‌ನಲ್ಲೂ ಸಾಯಿ ಮುಖಾರವಿಂದವೇ ಕಂಗೊಳಿಸುವುದರಿಂದ ಉಳಿದವರು ನಾಮಕಾವಸ್ತೆ.

ಹಾಸಿಗೆಯಲ್ಲಿ ಹೊರಳಾಡುವ ದೃಶ್ಯಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಭಾವನಾಗೆ ಶೀಘ್ರದಲ್ಲಿ ಥ್ರಿಲ್ಲರ್‌ ಮಂಜು ಚಿತ್ರಕ್ಕೆ ಆಫರ್‌ ಬರುವ ಸಂಭವವಿದೆ. ರಕ್ತ, ಕೊಲೆ, ಹೊಡೆದಾಟಗಳಿಗೆ ಮಾತ್ರ ತಮ್ಮ ನಿಯತ್ತನ್ನು ಮೀಸಲಾಗಿಸಿರುವ ನಿರ್ದೇಶಕರಿಂದ ಉಳಿದ ಯಾವ ವಿಭಾಗಗಳಿಂದ ಹೆಚ್ಚೇನನ್ನೂ ನಿರೀಕ್ಷಿಸುವುದು ತಪ್ಪು.

ಹೊಡೆದಾಟಗಳ ನಡುವೆ ಆಗೊಮ್ಮೆ ಈಗೊಮ್ಮೆ ಸಂಭಾಷಣೆ ಇಣುಕಿ ಹಾಕುವ ಸೂಪರ್‌ ಪೊಲೀಸಪ್ಪನನ್ನು ಸೂಪರ್‌ ಫೈಟರ್‌ಗಳು ನೋಡಿ ಕನಸಿನಲ್ಲಿಯೂ ಜಪಿಸಬಹುದು.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada