twitter
    For Quick Alerts
    ALLOW NOTIFICATIONS  
    For Daily Alerts

    ಆಪ್ತದಲ್ಲಿ ದೋಷವಿಲ್ಲದಿದ್ದರೂ ವಿಶೇಷವೇನೂ ಇಲ್ಲ

    By * ಚಿತ್ರಗುಪ್ತ
    |

    ಆಪ್ತ ಹೆಸರಿಗೂ ಅದರ ಚಿತ್ರ-ಕತೆಗೂ ಒಂದಕ್ಕೊಂದು ಸಂಬಂಧವಿಲ್ಲ. ಒಬ್ಬ ವ್ಯಕ್ತಿ ತನ್ನ ಆಪ್ತೆಯನ್ನು ಕೊಂಡವರ ಮೇಲೆ ಸೇಡು ತೀರಿಸಿಕೊಳ್ಳುವ ಕತೆಯೇ ಆಪ್ತ.

    ಈ ಆಪ್ತ ಇನ್ನೂ ಅಪ್ರಾಪ್ತನಾಗಿದ್ದಾಗ ನಾಯಕಿಯ ಮನೆಯಲ್ಲಿ ಬೆಳೆದಿರುತ್ತಾನೆ. ಆಕೆಯ ಅಪ್ಪನ ಆಶ್ರಯದಲ್ಲಿ ನೆಲೆ ಕಂಡುಕೊಂಡಿರುತ್ತಾನೆ. ಆದರೆ ಆ ಯಜಮಾನ ಸಾವಿಗೀಡಾಗುತ್ತಾನೆ. ನಂತರ ಆತ ಅವಳ ಅಪ್ಪನಿಗೆ ನೀಡಿದ ಪ್ರಾಮಿಸ್ ಮೇರೆಗೆ ಅವಳ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾನೆ. ಅಲ್ಲಿಂದ ಸಿಟಿಗೆ ಶಿಫ್ಟ್ ಆಗುತ್ತೇವೆ. ಒಂದಷ್ಟು ಕಾಲೇಜು ರಂಗ. ಅಲ್ಲಿ ಒಂದು ದುರಂತ. ನಾಯಕಿ ವಿಲನ್ ಮತ್ತು ಅವನ ಸಹಪಾಠಿಗಳು ಕೊಡುವ ಕಿರುಕುಳ ತಾಳಲಾರದೇ ಸಾವಿಗೀಡಾಗುತ್ತಾಳೆ. ಅಲ್ಲಿಂದ ಹೀರೋ ತನ್ನ ಹುಡುಗಿಯನ್ನು ಕೊಂದವರನ್ನು ಮಟ್ಟಹಾಕಲು ಪಣತೊಡುತ್ತಾನೆ.

    ನಿರ್ದೇಶಕ ಸಂಜೀವ್ ಕುಮಾರ್ ಮೇಗೋಟಿ ಕತೆಯಲ್ಲಿ ಒಂದು ಎಳೆಯನ್ನು ಕಮಲಹಾಸನ್‌ರ ಸಿಗುಪ್ಪು ರೋಜಾಕಲ್ ಚಿತ್ರದಿಂದ ಎತ್ತಿದ್ದಾರೆ. ಆದರೆ, ಚಿತ್ರಕತೆಯಲ್ಲಿ ವೇಗ ಕಾಪಾಡಿಕೊಳ್ಳುವಲ್ಲಿ ಸೋತಿದ್ದಾರೆ. ಪೂಜಾ ಗಾಂಧಿ ನಟನೆಯಲ್ಲಿ ದೋಷವಿಲ್ಲದಿದ್ದರೂ ವಿಶೇಷವಿಲ್ಲ. ನಾಯಕ ನೀರಜ್ ಶಾಮ್ ಬೇರೆಬೇರೆಯವರ ಹೆಸರಲ್ಲಿ ಬಂದು ವಿಲನ್‌ಗಳ ನಾಶಕ್ಕಿಳಿಯುವ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತಾರೆ. ಪ್ರಜ್ಞಾ, ಪೂನಂ, ಮಾನಸಿ, ಭವ್ಯಕಲಾ ಎಲ್ಲರದ್ದೂ ಪೋಷಕ ಪಾತ್ರ. ಅಲ್ಲಲ್ಲಿ ಇನ್ ಆಗಿ ಅಲ್ಲಲ್ಲೇ ಔಟ್ ಆಗುತ್ತಾರೆ.

    ಒಟ್ಟಾರೆ ಇಡೀ ಆಪ್ತ ಚಿತ್ರದಲ್ಲಿ ಓಹೋ ಎನ್ನುವಂಥ ದೃಶ್ಯಗಳಿಲ್ಲದಿದ್ದರೂ ಅಯ್ಯಯ್ಯೋ ಎನ್ನುವಷ್ಟು ಹಳಸಿಲ್ಲ. ಅಲ್ಲಲ್ಲಿ ಒಂದಷ್ಟು ಅಂಶಗಳು, ಸನ್ನಿವೇಶಗಳು ಇಷ್ಟವಾಗುತ್ತದೆ. ಅವು ಯಾವುವು ಎನ್ನುವುದು ಗೊತ್ತಾಗಬೇಕಾದರೆ... ತೆರೆದಿದೆ ಥಿಯೇಟರ್ ಓ.. ಬಾ ಅತಿಥಿ...

    English summary
    Kannada movie Aptha review. Nothing special about Pooja Gandhi's performance, though she does not disappoint. Actress Pragna, Poonam, Manasi are also in the lead. Aptha directed by Sanjeev Kumar Megoti.
    Saturday, February 26, 2011, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X