ವಿಮರ್ಶೆ: ಯಕ್ಕಾ. . .ಮಕ್ಕಾ. .. ಪಕ್ಕಾ... ಚುಕ್ಕಾ
ಯಕ್ಕಾ... ಇದು ಇಸ್ಪೀಟ್ ಆಟ ಎಂದು ಕೊಂಡರೆ ಅದೇ.. ಇದನ್ನು ಜೀವನದ ಪಾಠ ಎಂದುಕೊಂಡರೆ ಅದೂ ನಿಜ. ನಿರ್ದೇಶಕ ನಾಗನಾಥ ಜೋಶಿಗಳು ಇಲ್ಲಿ ಹಳೇ ಪಾತ್ರೆಗಳಿಗೆ ವಿಷಯಗಳಿಗೆ ಸುಣ್ಣ ಬಣ್ಣ ಬಳಿದಿದ್ದಾರೆ. ಇದೂ ಒಂದು ಬಾಲ್ಯದ ಗೆಳತಿಯ ಸುತ್ತ ಕತೆ ಕುಂಟುತ್ತಾ ಸಾಗುತ್ತದೆ.
ವಾಡೆ ಎಂಬ ಕಡೆ ಆತ ತನ್ನ ಗೆಳತಿಯನ್ನು ಕಿಡ್ನಾಪ್ ಮಾಡಿ, ಕೂಡಿಹಾಕುತ್ತಾನೆ. ಅಲ್ಲಿ ಕತೆ ಕಮ್ ದೃಶ್ಯಗಳು ಗಿರಕಿ ಹೊಡೆಯುತ್ತವೆ. ನಿರ್ದೇಶಕ ನಾಗನಾಥರ ಹಿಂದಿನ ಜಾಲ ಚಿತ್ರಕ್ಕೆ ಹೋಲಿಸಿದರೆ ಇದು ಸಾವಿರ, ಲಕ್ಷ ಪಾಲು ವಾಸಿ. ಬದಲಾವಣೆ ಜಗದ ನಿಯಮ...
ಭರತ್‌ಕಲ್ಯಾಣ್ ಕೊಟ್ಟ ಪಾತ್ರವನ್ನು ನಿಯತ್ತಾಗಿ ಬಳಸಿಕೊಂಡಿದ್ದಾರೆ. ನಾಯಕ ರಮೇಶ್ ಪವರ್ ಇಲ್ಲಿ ಪವರ್‌ಲೆಸ್ ಸ್ಟಾರ್! ನಾಯಕಿ ಸುಭಾಷಿಣಿ ಶಾಕ್‌ಟ್ರೀಟ್ ಮೆಂಟಿಗೇ ಸವಾಲು ಹಾಕುವಂತೆ ನಟಿಸಿದ್ದಾರೆ!
ಕೃಪಾಕರ್ ಹಾಡುಗಳು ಓಕೆ, ರಾಜಶೇಖರ್ ಹೆಗಡೆ ಸಂಭಾಷಣೆ ಡಬಲ್ ಓಕೆ. ಕ್ಯಾಮೆರಾ, ಸಂಕಲನ, ಚಿತ್ರಕತೆ ಮತ್ತು ನಿರೂಪಣೆ ನಾಟ್ ಓಕೆ...
ಚಿತ್ರವಿಮರ್ಶೆ ಯಕ್ಕಾ ವಿನಾಯಕರಾಮ್ ಭರತ್ ಕಲ್ಯಾಣ್ ಕಲ್ಯಾಣ್ ಕುಮಾರ್ ಸುಭಾಷಿಣಿ ನಾಗನಾಥ್ ಜೋಶಿ yakka yakka review bharat kalyan subashini vinayakram kalyan kumar naganath joshi


Click it and Unblock the Notifications