»   » ಮಾಡ್‌ ಹುಡುಗಿಯನ್ನು ಪಟಾಯಿಸಲು ನಾಯಕ ಮಾಡುವ ಸರ್ಕಸ್ಸು, ಅದರಿಂದ ಅನುಭವಿಸುವ ಕಿರಿಕ್ಕು, ಕಾಲೇಜು ಕ್ಯಾಂಪಸ್ಸಿನ ಜೋಕು... ‘ಮೀಸೆ ಚಿಗುರಿದಾಗ’ ಆಗುವ ಎಲ್ಲ ಎಬಡುತನ ತೋರುವಲ್ಲಿ ಪ್ರವೀಣ್‌ ನಾಯಕ್‌ ಸ್ವಂತಿಕೆಯಿದೆ.

ಮಾಡ್‌ ಹುಡುಗಿಯನ್ನು ಪಟಾಯಿಸಲು ನಾಯಕ ಮಾಡುವ ಸರ್ಕಸ್ಸು, ಅದರಿಂದ ಅನುಭವಿಸುವ ಕಿರಿಕ್ಕು, ಕಾಲೇಜು ಕ್ಯಾಂಪಸ್ಸಿನ ಜೋಕು... ‘ಮೀಸೆ ಚಿಗುರಿದಾಗ’ ಆಗುವ ಎಲ್ಲ ಎಬಡುತನ ತೋರುವಲ್ಲಿ ಪ್ರವೀಣ್‌ ನಾಯಕ್‌ ಸ್ವಂತಿಕೆಯಿದೆ.

Subscribe to Filmibeat Kannada

ಸ್ವಾನುಭವವನ್ನು ನಿಷ್ಪಕ್ಷಪಾತವಾಗಿ ಬಳಸಿಕೊಂಡಿದ್ದಾರೆ. ಮೂವತ್ತು ವರ್ಷಗಳ ಹಿಂದೆ ತೆರೆ ಕಂಡ ‘ಬಾಬ್ಬಿ’ ಚಿತ್ರದ ಕೊನೆಯನ್ನೇ ಸಂಕೋಚವಿಲ್ಲದೆ ತಮ್ಮ ಚಿತ್ರದ ಬಾಲವಾಗಿ ಅಂಟಿಸಿದ್ದಾರೆ. ಒಟ್ಟಿನಲ್ಲಿ ಕಾಲೇಜು ಹುಡುಗ ಹುಡುಗಿಯರಿಗೆ ಏನೇನು ಬೇಕೆನ್ನುವುದನ್ನು ಪ್ರವೀಣ್‌ ಅರೆದು ಕುಡಿದಿದ್ದರಲ್ಲಿ ಅನುಮಾನವೇ ಇಲ್ಲ ಬಿಡಿ.

ಹೊಸ ಹುಡುಗ ತೇಜ ತನ್ನ ಪೆದ್ದುತನದಿಂದಲೇ ಇಷ್ಟವಾಗುತ್ತಾನೆ. ಕ್ಯಾಮರಾ ಎದುರಿರುವ ಖಬರಿಲ್ಲದೆ ನಟಿಸಿದ್ದಾನೆ. ಆದರೆ ಈ ರೀತಿಯ ಹುಡುಗರು ಮುಂದೆ ಇಂಥದೇ ಪಾತ್ರಗಳಿಗೆ ಜೋತುಬೀಳುವ ಅಥವಾ ಮಿತಿಯಾಗಿಸಿಕೊಳ್ಳುವ ಅಪಾಯವೂ ಇರುತ್ತದೆ. ಹಳ್ಳಿ ಹುಡುಗಿ ಶ್ರೀ ಪರವಾಗಿಲ್ಲ. ಸೆಕ್ಸಿ ಬೆಡಗಿ ದುರ್ಗಾಶೆಟ್ಟಿ ಅಭಿನಯ ಶಬ್ದದಿಂದ ತುಂಬಾ ದೂರವಿದ್ದಾಳೆ. ಗೆಳೆಯರ ಗುಂಪಿನ ಬೀಡು ಎನ್ನುವ ಹುಡುಗ ಗಮನಸೆಳೆಯುತ್ತಾನೆ. ಚುರುಕು ಮಾತುಗಳಿಂದ ಮಿಂಚು ಹರಿಸಿದವಳು ಪ್ರವೀಣ್‌ ನಾಯಕ್‌ ಅವರ ಪುಟ್ಟ ಮಗಳು. ಕೃಪಾಕರ್‌ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ಆದರೆ ಎಲ್ಲೋ ಕೇಳಿದಂತೆನಿಸಿದರೆ ಅದು ಅವರದೇ ತಪ್ಪು. ಪ್ರವೀಣ್‌ ಕಥೆಗೆ ತಕ್ಕಂತೆ ಮಾತುಗಳನ್ನು ಹೊಸೆದಿದ್ದಾರೆ. ಅಲ್ಲಲ್ಲಿ ಪಂಚ್‌ ಹುಟ್ಟಿಸಿದ್ದಾರೆ. ಅಂದಹಾಗೆ ಇದೊಂದು ಸ್ವಮೇಕ್‌ ಚಿತ್ರ. ಮಾಮೂಲಿ ಕಥೆ ಅನಿಸಿದರೂ ಸ್ವಂತ ಕಥೆ ಬರೆದವರಿಗೆ ಬೆನ್ನು ತಟ್ಟಬೇಕಿರುವುದು ಪ್ರೇಕ್ಷಕರ ಧರ್ಮ.

(ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada