»   » ರಾಜ್‌ ಕಂಪನಿಯ ಟ್ರೇಡ್‌ಮಾರ್ಕ್‌ ಹೊಂದಿರುವ ಚಿತ್ರ- ‘ಅಭಿ’.

ರಾಜ್‌ ಕಂಪನಿಯ ಟ್ರೇಡ್‌ಮಾರ್ಕ್‌ ಹೊಂದಿರುವ ಚಿತ್ರ- ‘ಅಭಿ’.

Subscribe to Filmibeat Kannada

‘ಅಭಿ’ ಪ್ರೇಕ್ಷಕರಿಗೆ ಇಷ್ಟವಾಗಲಿಕ್ಕೆ ಇನ್ನೊಂದು ಕಾರಣ ಚಿತ್ರದ ಸಮಕಾಲೀನತೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಮೀನಾ ಹಾಗೂ ಪಾಲರಾಜ್‌ ಎನ್ನುವ ನತದೃಷ್ಟ ದಂಪತಿಗಳ ಹತ್ಯೆಯ ಪ್ರಕರಣದಿಂದ ದಿನೇಶ್‌ಬಾಬು ಕಥೆ ಹೊಸೆದಿದ್ದಾರೆ. ಅಂತರ್ಜಾತಿ ಮದುವೆಯ ಕಾರಣ, ಹುಡುಗಿಯ ಕಡೆಯವರು ಯುವ ದಂಪತಿಗಳನ್ನು ದಾರುಣವಾಗಿ ಹತ್ಯೆ ಮಾಡಿದ್ದು , ಈ ದಂಪತಿಗಳ ಪುಟ್ಟ ಮಗು ಪೊಲೀಸ್‌ ಠಾಣೆಯಲ್ಲಿ ಚೀರುತ್ತಿದ್ದ ಮಾಧ್ಯಮಗಳಲ್ಲಿನ ಚಿತ್ರ-ವರದಿಯನ್ನು ಜನ ಇನ್ನೂ ಮರೆತಿಲ್ಲ .

ಇಡೀ ಚಿತ್ರದಲ್ಲಿ ದಿನೇಶ್‌ಬಾಬು ಮಿಂಚಿರುವುದು ನಿರ್ದೇಶಕರಾಗಿ. ಸಾಮಾನ್ಯವಾಗಿ ಮಲಯಾಳಿ ಬಾಬು ಚಿತ್ರಗಳಲ್ಲಿ ಕಂಡು ಬರುವ ನವಿರು ನಿರೂಪಣೆ ಹಾಗೂ ಮನೆಯಾಳಗಿನ ದೃಶ್ಯಗಳ ಅಪರೂಪದ ಸಂಯೋಜನೆ ‘ಅಭಿ’ಯಲ್ಲಿಲ್ಲ . ಅಲ್ಲದೆ, ನಾಯಕಿ ನಾಯಕಿಯನ್ನೇ ಚಿತ್ರದ ತುಂಬಾ ತುಂಬುವ ಹವ್ಯಾಸಕ್ಕೆ ದಿನೇಶ್‌ಬಾಬು ಇಲ್ಲಿ ವಿದಾಯ ಹೇಳಿದ್ದಾರೆ. ಚಿತ್ರದ ಪ್ರತಿ ಪಾತ್ರದ ಪೋಷಣೆಗೂ ಒತ್ತು ನೀಡಲಾಗಿದೆ.

ನಾಗತಿಹಳ್ಳಿ ಭಾಷೆಯಲ್ಲಿ ಹೇಳುವುದಾದರೆ- ‘ಅಭಿ’ಯಲ್ಲಿ ಕಥೆಯೇ ನಾಯಕ, ಕಥೆಯೇ ನಾಯಕಿ. ಆ ಕಾರಣದಿಂದಾಗಿಯೇ ಪುನೀತ್‌ರ ಮೊದಲ ಚಿತ್ರ ‘ಅಪ್ಪು’ವಿನ ಓಘ- ಓಟ ‘ಅಭಿ’ಯಲ್ಲಿ ಆಬ್ಸೆಂಟು.

‘ಅಪ್ಪು’ ಮೂಲಕ ನಾಯಕನಾಗಿ ಭರವಸೆ ಮೂಡಿಸಿದ್ದ ಪುನೀತ್‌ ಆ ಭರವಸೆಯನ್ನು ‘ಅಭಿ’ಯಲ್ಲಿ ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ಎರಡನೇ ಚಿತ್ರದಲ್ಲಿಯೇ ಇಮೇಜ್‌ನ ಗುಂಗು ಬಿಟ್ಟು ಕಥೆಗೆ ನಿಷ್ಠರಾಗಿ ನಟಿಸಿರುವುದು ಪುನೀತ್‌ ಅಗ್ಗಳಿಕೆ. ಸತ್ಯರಾಜ್‌ ಹಾಗೂ ಸುಮಿತ್ರ ಅದ್ಭುತವಾಗಿ ನಟಿಸಿದ್ದಾರೆ. ಸತ್ಯರಾಜ್‌ ಅಪ್ಪಾಜಿ ಆಯ್ಕೆ ಎನ್ನುತ್ತಾರೆ ರಾಘವೇಂದ್ರ.

‘ಅಭಿ’ಯ ಹಾಡು ಹಾಗೂ ನೃತ್ಯಗಳಲ್ಲಿ ‘ಅಪ್ಪು’ ಚಿತ್ರದ ನೆರಳು ಢಾಳಾಗಿ ಕಂಡುಬರುತ್ತದೆ. ಅಪ್ಪು ಚಿತ್ರದ ಭರ್ಜರಿ ಯಶಸ್ಸು ಈ ಭಾವನೆಗೆ ಕಾರಣವಿದ್ದರೂ ಇದ್ದೀತು.

‘ಅಭಿ’ ಸದಭಿರುಚಿಯ ಚಿತ್ರ. ‘ಅಭಿ’ ಸ್ವಮೇಕ್‌!
ಒಂದೇ ಮಾತಲ್ಲಿ ಹೇಳುವುದಾದರೆ- ‘ಅಭಿ’ ರಾಜ್‌ ಕಂಪನಿಯ ಟ್ರೇಡ್‌ಮಾರ್ಕ್‌ ಹೊಂದಿರುವ ಚಿತ್ರ!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada