»   » ‘ನಿರ್ಮಾಪಕರನ್ನು ಉಳಿಸಿ’ ಎಂಬ ಘೋಷಣೆಯಾಂದಿಗೆ ಮೊನ್ನೆಯಷ್ಟೇ ಧರಣಿ ನಡೆದಿತ್ತು. ಆದರೆ ಈಗ ಪ್ರೇಕ್ಷಕರನ್ನು ಉಳಿಸಲು ಧರಣಿ ನಡೆಸುವ ಜರೂರತ್ತು ಎದುರಾಗಿದೆ... !

‘ನಿರ್ಮಾಪಕರನ್ನು ಉಳಿಸಿ’ ಎಂಬ ಘೋಷಣೆಯಾಂದಿಗೆ ಮೊನ್ನೆಯಷ್ಟೇ ಧರಣಿ ನಡೆದಿತ್ತು. ಆದರೆ ಈಗ ಪ್ರೇಕ್ಷಕರನ್ನು ಉಳಿಸಲು ಧರಣಿ ನಡೆಸುವ ಜರೂರತ್ತು ಎದುರಾಗಿದೆ... !

Posted By:
Subscribe to Filmibeat Kannada

ಇಲ್ಲಿ ಕತೆಗಾಗಲಿ, ಪಾತ್ರಗಳಿಗಾಗಲಿ ದಿಕ್ಕು ದೆಸೆ ಇಲ್ಲ. ಅಸಲಿಗೆ ಪಾತ್ರಗಳಿಗೆ ಜೀವವೇ ಇಲ್ಲ. ಇವರೆಲ್ಲರೂ ನಿರ್ಭಾವುಕ ಮನುಷ್ಯರು. ಮದುವೆಯಾದಾಗಲೂ ಮಸಣದ ಸುದ್ದಿ ಬಂದಾಗಲೂ ಇವರದು ಒಂದೇ ಮುಖಭಾವ. ನೋ ಎಕ್ಸ್‌ಪ್ರೆಶನ್ಸ್‌ ! ಗಂಭೀರತೆ ಮಾಯವಾಗಿದೆ. ಇನ್ನೇನು ಕೊಲೆ ಆಗುತ್ತೆ ಅನ್ನುವಾಗ ಕೋಡಂಗಿತನದ ಪಾತ್ರಗಳು ಹಾಜರಾಗುತ್ತವೆ. ಅದು ಮುಗಿದರೆ ಮತ್ತೆ ಕೊಲೆ ಪ್ರಕರಣ...

ಚರಣ್‌ ರಾಜ್‌, ಮೋಹನ್‌, ಶೋಭರಾಜ್‌, ಸಿರಿ ಹೆಸರಿಗೆ ಇದ್ದಾರೆ. ಅವರು ತಮಗೆ ಅವಕಾಶ ಸಿಕ್ಕಷ್ಟು ತಮ್ಮ ಕೈಲಾದಷ್ಟು ನಟಿಸಿದ್ದಾರೆ. ಶ್ರೀಕಂಠ ಮತ್ತು ಮುತ್ತು ರಾಜ್‌ ಎಂಬ ಹಾಸ್ಯ ಕಲಾವಿದರು ಈ ಚಿತ್ರದ ಮೂಲಕ ಕನ್ನಡಕ್ಕೆ ಅಮರಿಕೊಂಡಿದ್ದಾರೆ. ಹಾಡು ಸಂಗೀತ, ಫೋಟೋಗ್ರಫಿ ಎಲ್ಲದಕ್ಕೂ ಎಳ್ಳು ನೀರು ಬಿಡಲಾಗಿದೆ. ಕೆಟ್ಟ ಸಂಕಲನ ತನ್ನ ಕೈಚಳಕದಿಂದ ಚಿತ್ರಕ್ಕೆ ಹೊಸ ಆಯಾಮ ನೀಡಿದೆ !

‘ನಿರ್ಮಾಪಕರನ್ನು ಉಳಿಸಿ’ ಎಂಬ ಘೋಷಣೆಯಾಂದಿಗೆ ಮೊನ್ನೆ ತಾನೆ ಉದ್ಯಮ ಧರಣಿ ನಡೆಸಿತ್ತು. ಆದರೆ ಈಗ ಪ್ರೇಕ್ಷಕರನ್ನು ಉಳಿಸಲು ಯಾರು ಧರಣಿ ನಡೆಸಬೇಕು ಎಂಬುದನ್ನು ಈ ಚಿತ್ರ ನೋಡಿ ಅವರೇ ನಿರ್ಧರಿಸಬೇಕು !

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada