ಪ್ರಭಾವಗಳಿಂದ ಮುಕ್ತವಾದ ವಿಭಿನ್ನ ಸಿನಿಮಾ ಕಾಂಚಾಣ

By * ಅಜಯ್ ಕುಮಾರ್

ಸಾಮಾನ್ಯವಾಗಿ ನಾವು ನೋಡುವ ಕನ್ನಡ ಸಿನಿಮಾಗಳಲ್ಲಿ, ಕನ್ನಡಕ್ಕಿಂತ ಹೆಚ್ಚಾಗಿ ನೋಡುವ ಪರಭಾಷಾ ಸಿನಿಮಾಗಳನ್ನು ಕನ್ನಡ ಸಿನಿಮಾದಲ್ಲಿ ಹುಡುಕುತ್ತಿರುತ್ತೇವೆ. ಅದಕ್ಕೆ ಪೂರಕವಾಗಿ ಯಥೇಚ್ಚವಾಗಿ ಹಳಸಿದ ಅನ್ನವನ್ನು ಕನ್ನಡ ಪ್ರೇಕ್ಷಕರಿಗೆ ಬಡಿಸುತ್ತಲೇ ಬರುತ್ತಿದ್ದಾರೆ. ಇಂತಹ ಸಿನಿಮಾಗಳ ಮಧ್ಯೆ ವಿಭಿನ್ನ ಸಿನಿಮಾ ಮಾಡಿದ್ದಾರೆ. ಶ್ರೀಗಣೇಶ್ ಅವರು.

ಇದು ಅವರ ಮೊದಲ ಸಿನಿಮಾ ಎಂಬ ಅನುಭವವನ್ನು ಮೊದಲ ನೋಟಕ್ಕೇ ನೀಡುತ್ತಾ.. ಸಿನಿಮಾ ಮುಗಿದು ಹೊರಗೆ ಬರುವ ಹೊತ್ತಿಗೆ ಇನ್ನಿತರ ಸಿನಿಮಾಗಳಿಗಿಂತ ವಿಭಿನ್ನವಾದ ಹೊಸತೊಂದು ಅನುಭವದ ಗುಂಗು ತಲೆಯಲ್ಲಿ ಪ್ರಾರಂಭವಾಗಿರುತ್ತದೆ.

ಅದು ಮೊದಮೊದಲಿಗೆ ನಕಾರಾತ್ಮಕವಾಗಿ ಆರಂಭವಾದರು, ಆ ನಕಾರಾತ್ಮಕ ಅಂಶಗಳು ಉಳಿದುಕೊಂಡೇ ಕೆಲವೊಂದು ಮೆಚ್ಚುಗೆಯ ಅಂಶಗಳು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತವೆ. ಸಾಮಾನ್ಯವಾಗಿ ನಮ್ಮ ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಬಹುತೇಕ ಅಪಹಾಸ್ಯವಾಗುತ್ತಲೇ ಸಾಗಿ ಬಂದಿದೆ, ಅದರಲ್ಲು ಸ್ವಘೋಷಿತ ಹಾಸ್ಯ ಬ್ರಹ್ಮರ ಹಾಸ್ಯವನ್ನು ನೋಡುತ್ತಿದ್ದರೆ ಮೈಯೆಲ್ಲ ಪರಚಿಕೊಳ್ಳಬೇಕೆನಿಸುವ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ.

ಅಂತಹ ಸಿನಿಮಾಗಳ ಮಧ್ಯೆ ಶುಕ್ರವಾರ ತೆರೆಕಂಡಿರುವ ಹಾಸ್ಯ ಸಿನಿಮಾದಲ್ಲಿನ ಬಹುತೇಕ ಸನ್ನಿವೇಶಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿವೆ ಎಂದೇ ಹೇಳಬಹುದು. ಅದಕ್ಕೆ ಪೂರಕವಾಗಿ ಹಾಸ್ಯ ಪಾತ್ರಗಳಿಗೆ ತಬಲಾ ನಾಣಿಯವರ ಟೈಮಿಂಗ್ ಮತ್ತು ಈ ಸಿನಿಮಾಕ್ಕೆ ಅವರು ಬರೆದಿರುವ ಸಂಭಾಷಣೆ ಹಾಸ್ಯ ಎಲ್ಲೂ ತನ್ನ ಮಿತಿ ಮೀರುವುದೇ ಇಲ್ಲ. ಅಷ್ಟರಮಟ್ಟಿಗೆ ತಬಲಾ ನಾಣಿಯವರು ನಟನೆಯ ಜೊತೆಗೆ ಸಂಭಾಷಣೆಯಲ್ಲು ಗೆದ್ದಿದ್ದಾರೆ.

ಹಾಗಂತ ಇಡೀ ಸಿನಿಮಾ ಚೆನ್ನಾಗಿದೆ ಅಂತ ಹೇಳಲಿಕ್ಕೆ ಬರುವುದಿಲ್ಲ. ಆದರೆ ಸಣ್ಣ ಸಣ್ಣ ದೃಶ್ಯಗಳ ಕೊಲಾಜ್‌ನಂತಿರುವ ಕಾಂಚಾಣ ಸಿನಿಮಾ, ತನ್ನೊಳಗಿನ ಮೂಲ ಕಥೆಗೆ ಎಲ್ಲು ನಿಲುಕಿಲ್ಲವಾದರು ದೃಶ್ಯ ನಿರೂಪಣೆ ಅವಧಿಯಲ್ಲಿ ಪ್ರೇಕ್ಷಕರಿಗೆ ಬೋರಂತು ಹೊಡೆಸುವುದಿಲ್ಲ. ಅಷ್ಟು ಬಿಗಿಯಾದ ನಿರೂಪಣೆಯಲ್ಲಿದೆ, ಅದೂ ದೃಶ್ಯದಿಂದ ದೃಶ್ಯಕ್ಕೆ ಕೊಂಡಿ ಕಳಚಿಯೂ ಸಹ.

ಸಿನಿಮಾ ಬಿಡುಗಡೆಗೆ ಮುಂಚೆ ಯಾವುದೋ ಸಂದರ್ಶನದಲ್ಲಿ ನಿರ್ದೇಶಕ ಶ್ರೀಗಣೇಶ್ ಹೇಳಿದಂತೆ ಕಥೆಯೇ ಇದರಲ್ಲಿ ಹೀರೋ.. ಹಾಗಾಗಿ ದಿಗಂತ್ ಇದ್ದೂ ಈ ಸಿನಿಮಾದಲ್ಲಿ ಎಲ್ಲು ನಿಮಗೆ ಇನ್ನಿತರ ಸಿನಿಮಾಗಳಲ್ಲಿ ಹೆಜ್ಜೆ ಹೆಜ್ಜೆಗು ಕಾಣಸಿಗುವ ಹಿರೋಯಿಸಂ ಈ ಸಿನಿಮಾದಲ್ಲಿ ಎರಡು ಹಾಡುಗಳು ಮೂರು ದೃಶ್ಯಗಳನ್ನು ಹೊರತುಪಡಿಸಿ ಎಲ್ಲು ಕಾಣಸಿಗುವುದಿಲ್ಲ. ಅಷ್ಟರಮಟ್ಟಿಗೆ ನಿರ್ದೇಶಕರು ಸಿನಿಮಾದಲ್ಲಿನ ಪಾತ್ರಗಳಿಗೆ ಅವುಗಳ ಪ್ರಾಮುಖ್ಯತೆಯನ್ನು ಸಿನಿಮಾ ಕಥೆಯಲ್ಲಿ ಸರಿದೂಗಿಸಿದ್ದಾರೆ.

ಒಟ್ಟಿನಲ್ಲಿ ಕುಟುಂಬ ಸಮೇತ ಯಾವುದೇ ಸೀರಿಯಸ್ ವಿಷಯಗಳ, ಧೀರ್ಘ ಸಂಭಾಷಣೆಗಳ, ಕ್ಯೂಸಕ್ ಗಟ್ಟಲೆ ಕಣ್ಣೀರು ಹರಿಯುವ ಸೆಂಟಿಮೆಂಟುಗಳ ಗೊಡವೆಯಿಲ್ಲದ, ಪರಿಪೂರ್ಣ ಹಾಸ್ಯ ಸಿನಿಮಾ ನೊಡುವುದಕ್ಕೆ ಈ ವೀಕೆಂಡಿಗೆ " ಕಾಂಚಾಣ" ಬೆಸ್ಟ್ ಸಿನಿಮಾ.

More from Filmibeat

English summary
Kannada movie Kanchana review by our reader Ajay Kumar. Diganth, Ragini Dwivedi, Tabla Nani, Satish, Kiran, Mithra and others are in the cast. Sri Ganesh directed movie kanchana is woth to watch says the reader.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X