twitter
    For Quick Alerts
    ALLOW NOTIFICATIONS  
    For Daily Alerts

    ಸಿಹಿಯೆನ್ನಿಸುವ ಮಿಠಾಯಿ ಮನೆ

    By Staff
    |

    ಎಂಥ ಅಜಗಜಾಂತರ!

    ವೀರು ನೋಡಿ ಮಿಠಾಯಿಮನೆ ನೋಡಿದರೆ ಆ ವ್ಯತ್ಯಾಸ ಥಟ್ಟನೆ ಗೊತ್ತಾಗುತ್ತದೆ. ಎರಡು ಚಿತ್ರಗಳೂ ಹೆಚ್ಚು ಕಡಿಮೆ ಒಂದೇ ವಿಷಯವನ್ನು ಬಿಂಬಿಸಿವೆ. ಉದ್ದೇಶ, ಆಶಯವೂ ಒಂದೇ. ಅದು ಬಾಲ ಕಾರ್ಮಿಕ ಪದ್ಧತಿಯನ್ನು ತಪ್ಪು ಎನ್ನುವುದು. ಆದರೆ ಎರಡೂ ಚಿತ್ರಗಳ ಮೇಕಿಂಗ್‌ ಮಾತ್ರ ಒಂದಕ್ಕಿಂತ ಒಂದು ಭಿನ್ನ.

    ಅದೇ ಉದ್ದೇಶದಿಂದ ಆರತಿ ಒಂದು ಸಣ್ಣ ಕತೆ ಹೆಣೆದಿದ್ದಾರೆ. ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ, ಮತ್ತ್ಯಾವುದೋ ತಾಲ್ಲೂಕಿನ, ಇನ್ಯಾವುದೋ ಹಳ್ಳಿಯ ಕಡುಬಡವ ಕುಟುಂಬದ ದಂಪತಿಗಳು ಬರದ ಬೇಗೆ ತಾಳಲಾರದೆ ತಮ್ಮ ಮಗಳು ಗಂಗಾ ಅಲಿಯಾಸ್‌ ಪುಟ್ಟಿಯನ್ನು ನಗರದಲ್ಲಿ ಮನೆ ಕೆಲಸಕ್ಕೆ ಕಳುಹಿಸಿ ಕೊಡುವುದರಿಂದ ಚಿತ್ರ ಪ್ರಾರಂಭವಾಗುತ್ತದೆ. ಆ ಮನೆಯಲ್ಲಿ ತಮ್ಮ ಮಗಳು ನೆಮ್ಮದಿಯಾಗಿರುವಳೆಂಬ ನಂಬಿಕೆ ಪುಟ್ಟಿಯ ಹೆತ್ತವರದ್ದು. ಆದರೆ, ಆಗುವುದೇ ಬೇರೆ. ಗಂಗಾಳನ್ನು ಮನೆಯಲ್ಲಿ ಕೆಲಸಕ್ಕಿಟ್ಟುಕೊಳ್ಳುವವರು ಆಕೆಗೆ ಮಮ್ಮಿ ಡ್ಯಾಡಿ ಕರೆಯಲು ಹೇಳಿ ಕೊಡುತ್ತಾರೆ. ಹಾಗೆ ಕರೆದರೂ ಹೆತ್ತವರ ಪ್ರೀತಿ ತೋರಿಸಲು ವಿಫಲರಾಗುತ್ತಾರೆ. ಅವಳನ್ನು ಶಾಲೆಗೇನೋ ಕಳುಹಿಸುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಊಟ ಕೊಡುವುದಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ಇದರಿಂದ ಓದಬೇಕು, ಓದಿ ದೊಡ್ಡವಳಾಗಬೇಕು ಎಂಬ ಗಂಗಾಳ ಆಸೆ ನುಚ್ಚುನೂರಾಗುತ್ತದೆ. ಹಳ್ಳಿಯಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ಗಂಗಾಗೆ ಆ ಮನೆಯಲ್ಲಿ ಉಸಿರುಕಟ್ಟುವ ವಾತಾವರಣ ಎದುರಾಗುತ್ತದೆ. ಕೊನೆಗೆ ತಮ್ಮ ಮಗಳ ರಬ್ಬರ್‌ ಬ್ಯಾಂಡ್‌ ಅನ್ನು ಗಂಗಾ ಎತ್ತಿಕೊಂಡಳು ಎಂಬ ಏಕೈಕ ಕಾರಣ ನೀಡಿ ಅವಳನ್ನು ಹಳ್ಳಿಗೆ ಕಳುಹಿಸುವಲ್ಲಿಗೆ ಚಿತ್ರ ಮುಗಿಯುತ್ತದೆ.

    ಇಷ್ಟಕ್ಕೂ‘ಮಿಠಾಯಿ ಮನೆ’ ಯೆಂದರೆ ಏನು?ಈ ವಿಷಯವನ್ನು ಆರತಿ ಚಿತ್ರದ ಆರಂಭದಲ್ಲಿಯೇ ಜರ್ಮನಿಯ ಜಾನಪದ ಕತೆಯಾಂದನ್ನು ತೊಗಲುಬೊಂಬೆಯಾಟದ ಮೂಲಕ ಸ್ಪಷ್ಟಪಡಿಸುತ್ತಾರೆ. ನಂತರ ಚಿತ್ರ ನಿರೂಪಿಸುತ್ತಾರೆ. ಗೊಂಬೆಯಾಟ ಹಾಗೂ ಚಿತ್ರ ನೋಡಿ ‘ಮಿಠಾಯಿ ಮನೆ’ಎಂದರೇನು ಎಂದು ತಿಳಿದುಕೊಳ್ಳುವ ಜವಾಬ್ದಾರಿಯನ್ನು ಅಂತಿಮವಾಗಿ ಪ್ರೇಕ್ಷಕರಿಗೇ ಬಿಡುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಬಾಯಲ್ಲಿ ಹೇಳುವ ಒಂದು ಸರಳ ಕತೆಯನ್ನು ವಿಷ್ಯುಯಲೈಸ್‌ ಮಾಡಿದ್ದಾರೆ. ಹಾಗಾಗಿ ಟಾಯ್ಲೆಟ್‌ ಜೋಕ್‌ ಕೂಡ ಮುಗ್ಧವೆನಿಸುತ್ತದೆ. ಮತ್ತು ಈ ಎಲ್ಲ ಕಾರಣಕ್ಕಾಗಿಯೇ ಚಿತ್ರ ಹಲವೆಡೆ ಆಪ್ತವೆನಿಸುತ್ತದೆ.

    ಚಿತ್ರದ ಪ್ಲಸ್‌ ಪಾಯಿಂಟ್‌ ಎಂದರೆ ಅಭಿನಯ. ಪುಟ್ಟಿಯಾಗಿ ಅದಿತಿ, ಮನೆಯಾಡತಿಯಾಗಿ ಪಂಚಮಿ ಅಭಿನಯ ಬಹಳ ಕಾಲ ನೆನಪಿನಲ್ಲುಳಿಯುತ್ತದೆ. ರಾಗಶ್ರೀ, ಅಕ್ಷರ, ದೀಕ್ಷಾ ಮುಂತಾದವರು ಇದಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಚಿತ್ರವನ್ನು ಚಂದಗಾಣಿಸುವಲ್ಲಿ ಆರತಿ ಜತೆ ಸಂತೋಷ್‌ ಕುಮಾರ್‌ ಪಾತಾಜೆ ಸಾಕಷ್ಟು ದುಡಿದಿದ್ದಾರೆ. ಮಳೆ ಬರುವಾಗ, ಕತ್ತಲಲ್ಲಿ ಪುಟ್ಟಿ ಓಡಾಡುವಾಗ ಮುಂತಾದ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಚಿತ್ರದಲ್ಲಿ ನೇರವಾಗಿ ಯಾವುದೇ ಹಾಡುಗಳಿಲ್ಲ. ಆದರೂ, ಗೊಂಬೆಯಾಟಕ್ಕೆ ಅಗತ್ಯವಾದ ಹಾಡನ್ನು ಸಂಗೀತ ನಿರ್ದೇಶಕ ಪ್ರಸಾದ್‌ ಕೇಳುವಂತೆ ಮಾಡಿಕೊಟ್ಟಿದ್ದಾರೆ.

    ಒಟ್ಟಾರೆ ನಟಿ ಆರತಿ ಒಂದು ಚೆಂದದ ಡೀಸೆಂಟ್‌ ಸಿನಿಮಾ ಮಾಡಿಕೊಟ್ಟಿದ್ದಾರೆ. ಪೂರ್ತಿಯಲ್ಲದಿದ್ದರೂ ಕೆಲವು ಕಡೆ ‘ಮಿಠಾಯಿ ಮನೆ’ಯ ರುಚಿ ಕಟ್ಟಿಕೊಟ್ಟಿದ್ದಾರೆ.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 12:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X