ಜೋಗಯ್ಯ ಸಿನೆಮಾ ಮಾಸ್‌ಗಲ್ಲ ಕ್ಲಾಸ್‌ಗೆ

By * ಅಂಜಲಿ ರಾಮಣ್ಣ, ಬೆಂಗಳೂರು

Next »

« Previous

ಪ್ರಾರಂಭವಾದ ಒಂದಷ್ಟು ನಿಮಿಷಗಳಲ್ಲೇ ಏನೋ ಹಿತಾನುಭವ. ಮುಂದೆ ನೋಡಬೇಕು ಅಂತ ಅನಿಸತೊಡಗಿತು. ಅರಿವಿಲ್ಲದಂತೆಯೇ ಮುಖದಲ್ಲಿ ಮಂದಹಾಸ ಅರಳಿತ್ತು. ಪೂರ್ತೀ ಸಿನೆಮಾ ಮುಗಿಯೋವಾಗ ತರ್ಕಬದ್ಧ ಮನಸ್ಸು ಒಂದಷ್ಟು ನ್ಯೂನತೆಗಳನ್ನು ಅನಾಯಾಸವಾಗಿ ಪಕ್ಕಕ್ಕಿಟ್ಟು ಜೋಗಯ್ಯನಿಗೆ ಐದು ಸ್ಟಾರ್ ಗಳನ್ನು ಕೊಡಲು ಮುಂದಾಗಿತ್ತು! ಪ್ರತೀ ಸಂಭಾಷಣೆಯನ್ನೂ ಉದ್ದೇಶಪೂರ್ವಕವಾಗಿಯೇ ಬರೆದದ್ದು ಅನ್ನಿಸಿತ್ತು.

ಕ್ಯಾಮೆರಾದ ಒಂದೊಂದು ಚಲನೆಯೂ ಸಿಕ್ಕಾಪಟ್ಟೆ ಅರ್ಥಗರ್ಭಿತವಾಗಿತ್ತು. ಅಷ್ಟೇ ಅಲ್ಲ, ಕಡೆಗೆ ಕಾಸ್ಟ್ಯೂಮ್ ಅನ್ನು ಕೂಡ ಅತೀ ಜತನದಿಂದ ಉದ್ದೇಶವೊಂದನ್ನು ಎತ್ತಿ ಹಿಡಿಯಲೆಂದೇ ರಚಿಸಲಾಗಿದೆ ಅನಿಸುವಷ್ಟರ ಮಟ್ಟಿಗೆ ಇಷ್ಟವಾಗ್ತಿತ್ತು! ಪರದೆಯ ಮೇಲೆ ಮೂಡಿ ಬರುವ ಪ್ರತೀ ಬಣ್ಣವೂ ನನ್ನೊಳಗೆ ವಿಭಿನ್ನ ಅರ್ಥವರಳಿಸುತ್ತಾ ಬೆಳೆಯುತ್ತಿತ್ತು. ಒಂದೊಂದು ಪಾತ್ರದ ಭಾಷಾ ಶೈಲಿಯೂ ಕೂಡ ಎಲ್ಲೂ ಹದ ತಪ್ಪದೆ “ಮಿಕ್ಸ್ ಎಂಡ್ ಮ್ಯಾಚ್" ಆಗದೆ ಹೊರ ಹೊಮ್ಮಿದೆ.

ಭಾಷೆಯನ್ನು ಯದ್ವಾತದ್ವ ಉಪಯೋಗಿಸಿ ಜಾಳಾಗಿಸಲಾಗುತ್ತಿದೆ ಅಂತ ಬೊಬ್ಬಿರಿಯೋ ಭಾಷಾಭಿಮಾನಿಗಳಿಗೂ ಸರಳ ಭಾಷೆಯಲ್ಲೆ ಸಂಕೀರ್ಣ ಆಧ್ಯಾತ್ಮವಡಗಿರಬಲ್ಲುದು ಅಂತ ಹೇಳತ್ತೇನೋ ಈ ಸಿನೆಮಾದ ಹಾಡುಗಳು ಅನಿಸಿಬಿಡ್ತು. ಕಥಾ ತರಂಗಗಳ ಹಿಂದು ಮುಂದಿನ ಜೋಡಣೆ ನಿಜಕ್ಕೂ "ವಾಹ್" ಅನ್ನುವಷ್ಟು ಸೊಗಸಾಗಿದೆ. ಕಥೆಗಾರನಿಗೆ ಹೀಗನಿಸಿತ್ತೋ ಇಲ್ಲ್ವೋ ನನಗೆ ಗೊತ್ತಿಲ್ಲ, ಆದರೆ ಅರ್ಧನಾರೀಶ್ವರನ ಕಲ್ಪನೆ ಎಷ್ಟೊಂದು ಪವರ್ಫುಲ್ ಅಂತಾನೂ ತೋರಿಸಿಕೊಟ್ಟಿದ್ದಾನೆ ಜೋಗಯ್ಯ ಅನ್ನಿಸುತ್ತೆ!

ಮೇಕಪ್ಪಿನಿಂದ ಸ್ಟೇಜ್ ಸೆಟ್ಟಿನವರೆಗೂ ಏನೋ ಹೊಸತೊಂದರ ಅಗಾಧತೆಯ ಆಳವನ್ನು ತೋರಿಸುವ ಪ್ರಯತ್ನ ಎನ್ನಬಹುದೇನೋ. ಹೆಣ್ಣಿನ ಮೈ ತೆರೆದಿಟ್ಟಿಲ್ಲ; ಹಿಂಸೆ ವೈಭವೀಕರಣಗೊಂಡಿಲ್ಲ. ಅದಕ್ಕೆ ಇರಬೇಕು ನನಗನಿಸಿದ್ದು ಈ ಸಿನೆಮಾ massಗಲ್ಲ classಗೆ ಅಂತ! "ಟಾಕೀಸಿನಿಂದ" ಹೊರಬರುವಾಗ ಜೋಗಯ್ಯನ ಕಂಟಿನ್ಯುಟಿ ಮ್ಯಾನೇಜರ್ ಬಗ್ಗೆಯೂ ಹೆಮ್ಮೆ ಎನಿಸಿತು!

ಹಿಂದಿನ ದಿನ ಪ್ರೇಂ ಮತ್ತು ತಂಡದವರು ಟೀವಿಯಲ್ಲಿ ಮಾತ್ನಾಡಿದ್ದು ನೋಡಿದ್ದೆ. ಆತನ ಮಾತಿನ ಶೈಲಿ, ಹಾವಭಾವ ಎಲ್ಲಾ ನೋಡಿದ್ರೆ, ತಲೆ ಬಗೆದು ಹುಡುಕಿದ್ರೂ ಇಂತಹ ಅದ್ಭುತ ಕಲ್ಪನೆ ಅಲ್ಲಿದ್ದೀತು ಎನ್ನುವ ಯಾವ ಪುರಾವೆಯೂ ಸಿಗಲಾರದಷ್ಟು ಅಂತರ ಆತ ನಿರ್ದೇಶಕನಾದಾಗ ಅನ್ನಿಸಿತು! Hats off ಹೇಳಲೇ ಬೇಕು, ಕ್ರಿಯಾಶೀಲ ಮನಸನ್ನು ಸೃಷ್ಟಿಸೋ ಈ ಪ್ರಕೃತಿಗೆ! ಯಾವುದೋ ಹಂಗು, ಯಾರದ್ದೊ ಮಾತು ಇವುಗಳಿಗೆ ಕಟ್ಟು ಬೀಳದೆ ಪ್ರೇಂನನ್ನು ಸರಿಯಾದ ದಾರಿಯಲ್ಲಿ ಕಟ್ಟಿ ಹಾಕಿದರೆ ಆತ ನಿಜಕ್ಕೂ asset ಎನಿಸುವಷ್ಟು ಬೆಳೆಯಬಲ್ಲ.

Next »

« Previous

More from Filmibeat

English summary
Jogayya is a movie for the Class ( that is you) not for the mass. Kannada movie Jogayya wonderful direction, great insights by talented director Prem.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X