ಜೋಗಯ್ಯ ಆಸಕ್ತ, ಕ್ರಿಯಾಶೀಲ ಮನಸುಗಳಿಗೆ ಮಾತ್ರ
ಸರಿ, ಸಿನೆಮಾ ಮುಗಿದ ಮೇಲೆ ಮತ್ತೊಮ್ಮೆ ನನ್ನಿಂದ ಎಸೆಂಎಸ್ ರವಾನೆ. “ ವಾಹ್...ಜೋಗಯ್ಯ ಅದ್ಭುತ" ಅಂತ. ಏನು ಉತ್ತರ ಬಂತು ಗೊತ್ತಾ? “ತಲೆ ಕೆಟ್ಟವರಿಗೆ ಹೀಗೆ ಆಗೋದು. ಊಟ ಮಾಡಿ ಮಲಗು". ರೀಮೇಕೋ ಡಬ್ಬಿಂಗೋ ಈ ವಿಚಾರ ಮಾತನಾಡಲು ನಾನು ಶಕ್ತಳಲ್ಲ. ಅಥವಾ ಸಿನೆಮಾ ರಂಗದ ಯಾವುದೇ ವಿಷಯಗಳ ಚರ್ಚೆಗೆ ನಾನು ಅರ್ಹಳೇ ಅಲ್ಲ. ಆದರೂ ಕನ್ನಡಿಗಳಾಗಿ, ಕ್ರಿಯಾಶೀಲ ಮನಸ್ಸುಳ್ಳವಳಾಗಿ ನನಗನಿಸುತ್ತೆ, ಕನ್ನಡ ಸಿನೆಮ ನೋಡುವ ಜನಗಳಲ್ಲಿ ಎರಡು ವರ್ಗ.
ಒಬ್ಬರು ಪೂರ್ವಾಗ್ರಹ ಪೀಡಿತರು ಮತ್ತೊಬ್ಬರು ಸಾಮಾನ್ಯರು! ನಾವು ಯಾಕೆ ಹೀಗೆ? ಮಾಧ್ಯಮದವರು ಹಾಕಿ ಕೊಟ್ಟ ಮಾರ್ಗವನ್ನು "ಲಕ್ಷ್ಮಣ ರೇಖೆ" ಅಂತ ಭಾವಿಸಿ ರಾಮಾಯಣಕ್ಕೇ ಮೋಸ ಮಾಡ್ತಿದ್ದೀವಿ ಅನ್ನಿಸೋದಿಲ್ಲ್ವಾ?! ನನ್ನ ಪ್ರಕಾರ ಜೋಗಯ್ಯ ಆಸಕ್ತ, ಕ್ರಿಯಾಶೀಲ, ಬದುಕಿರುವ ದೃಷ್ಟಿ, ಮನಸ್ಸು ಮತ್ತು ಮೆದುಳುಗಳು ನೋಡಬೇಕಾದ್ದ ಸಿನೆಮಾ.
ಹಾಂ, ಅಂದಹಾಗೆ ಇಲ್ಲಿ ನಾ ಹೇಳಿರೋದೆಲ್ಲ ಆ ಸಿನೆಮಾದ ಪ್ರಚಾರಕ್ಕಾಗಿಯಲ್ಲ. ಗಾಂಧಿನಗರದ ಪರಿಚಯ ನನಗಿಲ್ಲ. ಆ ಸಿನೆಮಾ ತಂಡದಲ್ಲಿ ನನ್ನ ನೆಂಟರೂ ಇಲ್ಲ ಇಷ್ಟರೂ ಇಲ್ಲ. ಯಾರ ಬೆಂಬಲವನ್ನೂ ನಾನು ನಿರೀಕ್ಷಿಸುತ್ತಿಲ್ಲ. ತೆಗಳಿಕೆಯ ಮೇಲೆ ನನ್ನ ಅಧಿಕಾರವಿಲ್ಲ. ರಾಂಗೋಪಾಲ್ ವರ್ಮ ಮಾಡಿದ್ದಾನೆ ಅನ್ನುವ ಒಂದೇ ಕಾರಣಕ್ಕೆ “ನಾಟ್ ಎ ಲವ್ ಸ್ಟೋರಿ" ಸಿನೆಮಾವನ್ನು ಇಷ್ಟ ಪಡುವ ಚಮಚಾಗಿರಿ ನನಗೆ ಗೊತ್ತಿಲ್ಲ.
ಕನ್ನಡದ್ದು ಅನ್ನುವ ಒಂದೇ ಕಾರಣಕ್ಕೆ ಜೋಗಯ್ಯನನ್ನು ದೂರ ತಳ್ಳುವ ಹುಳಿ ಮನಸ್ಸೂ ನನ್ನದಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಮಾಧ್ಯಮಗಳು ಎಂದೂ ನನ್ನ ಸ್ವಂತದಲ್ಲ! ಈ ಕನ್ನಡ ಮನಸ್ಸಿಗೆ ಭೇದವೆಣಿಕೆ ತಿಳಿದಿಲ್ಲ, ಹಾಗಾಗಿ ನಿಸ್ಪೃಹವಾಗಿ ಅನಿಸಿದ್ದನ್ನು ಹೇಳಿದ್ದೇನೆ. ಒಮ್ಮೆ ಜೋಗಯ್ಯನನ್ನು ನೋಡಿ ಬನ್ನಿ.


Click it and Unblock the Notifications











