twitter
    For Quick Alerts
    ALLOW NOTIFICATIONS  
    For Daily Alerts

    ಜನಪದ : ಬರಗೂರು ಬ್ರಿಜ್‌ ಸಿನಿಮಾ

    By Staff
    |


    ಮಾಮೂಲಿ ಹೊಡಿಬಡಿ ಚಿತ್ರಗಳನ್ನು ನೋಡಿದವರಿಗೆ ರಿಲ್ಯಾಕ್ಸ್‌ ನೀಡುತ್ತದೆ ‘ಜನಪದ’. ಮೊದಲೇ ಹೇಳಿದಂತೆ ಇದೊಂದು ಕಲೆಗಾರನ ಕತೆ ಮತ್ತು ವ್ಯಥೆ.

    ಚಿತ್ರ : ಜನಪದ
    ನಿರ್ಮಾಣ : ಪಂಜು ಪೂಜಾರಿ
    ನಿರ್ದೇಶನ : ಬರಗೂರು ರಾಮಚಂದ್ರಪ್ಪ
    ಸಂಗೀತ : ಹಂಸಲೇಖ
    ತಾರಾಗಣ : ರಾಘವ, ರಾಧಿಕಾ, ಕರಿಬಸವಯ್ಯ, ವತ್ಸಲಾ ಮೋಹನ್‌ ಮತ್ತಿತರರು.

    ಅಸೂಯೆ, ದ್ವೇಷ, ಅಹಂಗಳ ನಡುವೆ ನಲುಗುವ ಕಲೆ ಮತ್ತು ಕಲೆಗಾರ, ಕೊನೆಗೆ ಹೇಗೆ ಎಲ್ಲವನ್ನೂ ಮೀರಿ ಬೆಳೆಯುತ್ತಾನೆ, ಬಂಡಾಯದ ಬಾವುಟ ಹಾರಿಸುತ್ತಾನೆ ಅನ್ನೋದು ‘ಜನಪದ’ ಚಿತ್ರದ ಒನ್‌ ಲೈನ್‌ ವಿಮರ್ಶೆ.

    ಇದು ಬರಗೂರು ರಾಮಚಂದ್ರಪ್ಪ ನವರ ಬ್ರಿಜ್‌ ಸಿನಿಮಾ. ಇದುವರೆಗೆ ಬಹುತೇಕ ಕಲಾತ್ಮಕ ಹಣೆಪಟ್ಟಿ ಹೊತ್ತ ಕತೆಗಳಿಗೆ ಕ್ಯಾಮರಾ ಹಿಡಿಯುತ್ತಿದ್ದ ಇವರು, ಮೊದಲ ಬಾರಿಗೆ ಎರಡನ್ನೂ ಬ್ಲೆಂಡ್‌ ಮಾಡಿ ಸದಭಿರುಚಿಯ ಚಿತ್ರ ಕೊಟ್ಟಿದ್ದಾರೆ. ಜನಪದ ಸೊಗಡಿನ ಹಾಡು, ಗುಂಗು ಹಿಡಿಸುವ ಹಿನ್ನೆಲೆ ಸಂಗೀತ, ಗ್ರಾಮ್ಯ ಘಮಲಿನ ಸಂಭಾಷಣೆ, ಬದುಕಿಗೆ ಹತ್ತಿರದ ಪಾತ್ರಗಳು, ಚೆಂದದ ಲೊಕೆಶನ್ಸು...

    ಮಾಮೂಲಿ ಹೊಡಿಬಡಿ ಚಿತ್ರಗಳನ್ನು ನೋಡಿದವರಿಗೆ ರಿಲ್ಯಾಕ್ಸ್‌ ನೀಡುತ್ತದೆ ‘ಜನಪದ’. ಮೊದಲೇ ಹೇಳಿದಂತೆ ಇದೊಂದು ಕಲೆಗಾರನ ಕತೆ ಮತ್ತು ವ್ಯಥೆ. ಹಳ್ಳಿಯಲ್ಲಿ ಬೆಳೆದ ಚಂದ್ರ ಅದ್ಭುತ ಗಾಯಕ. ಆತನ ಶಾರೀರಕ್ಕೆ, ಸರಕಾರ ಜಾನಪದ ರತ್ನ ಪ್ರಶಸ್ತಿ ಕೊಡುತ್ತದೆ. ಅದರ ಹಣವನ್ನು ಆತ ಶಾಲೆ ಕಟ್ಟಲು ಕೊಡುತ್ತಾನೆ.

    ಹೊಟ್ಟಿಕಿಚ್ಚಿನ ಮಾರ, ಊರ ಪಟೇಲನಿಗೆ ಇದು ಅಪಥ್ಯ. ಹೇಗಾದರೂ ಚಂದ್ರನನ್ನು ಮಟ್ಟ ಹಾಕಲು ಹುನ್ನಾರ ಮಾಡುತ್ತಾರೆ. ಏನೇನೊ ನೆಪ ಹೇಳಿ ಆತನಿಗೆ, ಆತನ ಹಾಡಿಗೆ ಬಹಿಷ್ಕಾರ ಹಾಕುತ್ತಾರೆ. ಈ ನಡುವೆ ಪ್ರೇಮ ಕತೆ , ಅನುಮಾನದ ಜತೆ ಸಾಗುತ್ತದೆ...ಜನಪದ ಲೋಕ... ಮುಂದಾಗುವುದನ್ನು ತೆರೆ ಮೇಲೆ ನೋಡಿ.

    ಬಹುಶಃ ಕನ್ನಡದಲ್ಲಿ ಒಬ್ಬ ಜನಪದ ಕಲಾವಿದರ ಮತ್ತು ಅವರ ಒಳಗುದಿಯನ್ನು ನೇರವಾಗಿ ಹೇಳುವ ಕತೆಗಳು ನಮ್ಮಲ್ಲಿ ಬಂದಿರಲಿಲ್ಲ. ಅವರಿಗೂ ಇರುವ ಸ್ವಾಭಿಮಾನ, ಹಠ ಮತ್ತು ಆತ್ಮ ಗೌರವವನ್ನು ತೋರಿಸುವ ಚಿತ್ರ ಇದಾಗಿರುವುದು ಅವರ ಜೀವನಕ್ಕೆ ಸಂದ ಗೌರವ.

    ಚಂದ್ರನಾಗಿ ನಟಿಸಿದ ರಾಘವ, ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಂಗಿಕ ಚಲನೆ ಮತ್ತು ಡೈಲಾಗ್‌ ಡೆಲಿವರಿಯಲ್ಲಿ ಅವರ ಕಲೆಯ ಪ್ರೀತಿ ಅರಿವಾಗುತ್ತದೆ. ರಾಧಿಕಾ ನಾಟ್‌ ಬ್ಯಾಡ್‌. ಅವರಿಗಿಂತ ಗಮನ ಸೆಳೆಯುವುದು ಕಿರುತೆರೆ ನಟಿ ನಂದಿನಿ. ಪಕ್ಕಾ ಹಳ್ಳಿ ಹುಡುಗಿಯಾಗಿ ಅವರು ಗೆದ್ದಿದ್ದಾರೆ. ಶರತ್‌ ಲೋಹಿತಾಶ್ವ, ವತ್ಸಲಾ ಮೋಹನ್‌, ಕರಿಬಸವಯ್ಯ, ಉಮೇಶ್‌, ಯತಿರಾಜ್‌ ನೆನಪಿನಲ್ಲಿ ಉಳಿಯುತ್ತಾರೆ. ಸಂಗೀತ ನೀಡಿದ ಹಂಸಲೇಖ ಹೊಸ ಅನುಭವ ನೀಡುತ್ತಾರೆ.

    ಹಾಗಂತ ಇಲ್ಲಿ ತಪ್ಪುಗಳೇ ಇಲ್ಲವೆಂದಲ್ಲ, ಇನ್ನೊಬ್ಬರ ಮಾತನ್ನು ಕದ್ದು ಕೇಳುವ ದೃಶ್ಯಗಳು ಐವತ್ತರ ದಶಕದ ಚಿತ್ರಗಳಲ್ಲೇ ಇದ್ದವು, ಮೊಬೈಲ್‌ ಯುಗದಲ್ಲೂ ಪಟ್ಟಣದಿಂದ ಬಂದು ರಾಧಿಕಾ ಪತ್ರ ಬರೆಯುವುದು, ಹೆಣದ ಮುಂದೆ ಹಾಡುವ ದೃಶ್ಯವನ್ನೂ ಹ್ಯಾಂಡಿ ಕ್ಯಾಮ್‌ನಲ್ಲಿ ಸೆರೆ ಹಿಡಿಯುವುದು, ನಾಯಕ ಮತ್ತು ಆತನ ತಂಗಿಯನ್ನು ನಾಯಕಿ ಅಗತ್ಯಕ್ಕಿಂತ ಹೆಚ್ಚಾಗಿ ಅನುಮಾನಿಸುವುದು... ಇವೆಲ್ಲಾ ಮರೆಯಬಹುದಾದ ತಪ್ಪುಗಳು.

    ಏನೇ ಆದರೂ ಬೇಸಿಗೆ ಬಿಸಿಲಿನಲ್ಲಿ ತಂಪುತಂಪು ಹಾಡಿನ ಜನಪದಕ್ಕೆ ಇದರಿಂದ ಯಾವುದೇ ಧಕ್ಕೆ ಆಗೊಲ್ಲ ಅನ್ನೋದು ಸಮಾಧಾನ.

    Friday, March 29, 2024, 20:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X