»   » ಮೀರಾ ಮಾಧವ ರಾಘವ :ಸೀತಾರಾಂರ ಇನ್ನೊಂದು ಎಪಿಸೋಡ್ !

ಮೀರಾ ಮಾಧವ ರಾಘವ :ಸೀತಾರಾಂರ ಇನ್ನೊಂದು ಎಪಿಸೋಡ್ !

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts


  ಕನ್ನಡದಲ್ಲಿ ಇಂಥ ಕತೆಗಳು ಬಂದು ಅದೆಷ್ಟು ವರ್ಷಗಳಾಗಿದ್ದವೋ...ಬಹುಶಃ ಪುಟ್ಟಣ್ಣನವರ ನಂತರ ಮಹಿಳೆಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು, ಅದೇ ಧಾಟಿಯಲ್ಲಿ, ಅದೇ ತೂಕದಲ್ಲಿ ಕನ್ನಡದಲ್ಲಿ ಚಿತ್ರ ಬಂದಿರಲಿಲ್ಲ. ಅದನ್ನು ಸೀತಾರಾಂ ಮಾಡಿದ್ದಾರೆ.  ಚಿತ್ರ : ಮೀರಾ ಮಾಧವ ರಾಘವ
  ನಿರ್ಮಾಣ : ಭೂಮಿಕಾ ಬಳಗ
  ಕತೆ, ಚಿತ್ರಕತೆ, ನಿರ್ದೇಶನ :ಟಿ.ಎನ್.ಸೀತಾರಾಮ್
  ಸಂಗೀತ : ಹಂಸಲೇಖ
  ತಾರಾಗಣ :ತಿಲಕ್, ದಿಗಂತ್, ರಮ್ಯಾ, ಮಂಡ್ಯ ರಮೇಶ್, ಆನಂದ್ ಮತ್ತಿತರರು

  ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಮಾಡುತ್ತಾಳೆ. ಒಂದು ಹಂತದವರೆಗೆ ಜೀವಕ್ಕೆ ಜೀವ ನೀಡುವ ಆಕೆ ಮನಸ್ಸು ಮುರಿದರೆ ಅದೇ ಜೀವನ ಬಿಟ್ಟು ಹೊರಡಲೂ ತಯಾರಾಗುತ್ತಾಳೆ. ಅದಕ್ಕೆ ಗಂಡಿನ ಅಹಂ, ಸ್ವಾರ್ಥ ಮತ್ತು ಶೋಷಣೆಯೇ ಮುಖ್ಯ ಕಾರಣ. ಇದನ್ನೇ ಮುಖ್ಯ ಉದ್ದೇಶ ಮಾಡಿಕೊಂಡು ಸೀತಾರಾಂ ‘ಮೀರಾ ಮಾಧವ ರಾಘವಚಿತ್ರವನ್ನು ನಿರ್ದೇಶಿಸಿದ್ದಾರೆ.

  ಕನ್ನಡದಲ್ಲಿ ಇಂಥ ಕತೆಗಳು ಬಂದು ಅದೆಷ್ಟು ವರ್ಷಗಳಾಗಿದ್ದವೋ...ಬಹುಶಃ ಪುಟ್ಟಣ್ಣನವರ ನಂತರ ಮಹಿಳೆಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು, ಅದೇ ಧಾಟಿಯಲ್ಲಿ, ಅದೇ ತೂಕದಲ್ಲಿ ಕನ್ನಡದಲ್ಲಿ ಚಿತ್ರ ಬಂದಿರಲಿಲ್ಲ. ಅದನ್ನು ಸೀತಾರಾಂ ಮಾಡಿದ್ದಾರೆ.

  ಉಳಿದ ವಿವರ ಕೇಳುವ ಮುನ್ನ ಕತೆ ಕೇಳಿಬಿಡಿ. ಮೀರಾ ಒಬ್ಬ ಸಂಗೀತಗಾರ್ತಿ. ಅವಳ ಹಾಡನ್ನು ಕೇಳುತ್ತಾ ರೌಡಿ ರಾಘವ, ಆಕೆಯನ್ನು ಮದುವೆ ಆಗುವಂತೆ ಪೀಡಿಸುತ್ತಾನೆ. ಅವಳು ಇಲ್ಲ ಎನ್ನುತ್ತಾಳೆ. ಅದೇ ಹೊತ್ತಿಗೆ ಮಾಧವನನ್ನು ಮದುವೆ ಆಗುತ್ತಾಳೆ. ಆತನದು ಬಡ ಕುಟುಂಬ. ಆದರೆ ಐಎಎಸ್ ಓದುವ ಆಸೆ. ಅದಕ್ಕೆ ತಮ್ಮ ತಂದೆಯ ಮನೆ ಮಾರಿ ಹಣ ಕೊಡುವುದಾಗಿ ಹೇಳುತ್ತಾಳೆ ಮೀರಾ. ಅನಿವಾರ್ಯವಾಗಿ ಅದು ಆಗುವುದಿಲ್ಲ.

  ಮಾಧವ ಪರೀಕ್ಷೆಗೆ ಅಂತಿಮ ತಯಾರಿ ಮಾಡಿಕೊಂಡಿರುತ್ತಾನೆ. ಇತ್ತ ಹಣ ಇಲ್ಲ. ಆತ್ತ ಮೀರಾ ಆ ರಾಘವನ ಫೈನಾನ್ಸ್ ಕಂಪನಿಯಿಂದ ಹತ್ತು ಲಕ್ಷ ಸಾಲ ಪಡೆಯುತ್ತಾಳೆ. ಬಾಂಡ್ ಪೇಪರ್ ಮೇಲೆ ಸಹಿ ಮಾಡಿ ಹಣ ಪಡೆಯುತ್ತಾಳೆ. ಅಲ್ಲಿಂದ ಅವಳ ಬದುಕು ಬೇರೆ ದಿಕ್ಕಿನೆಡೆ ಹೊರಳುತ್ತದೆ.

  ತಿಂಗಳ ಬಡ್ಡಿ ಕಟ್ಟಲು ರಾಘವನ ಬಾರ್ ನಲ್ಲಿ ಹಾಡುತ್ತಾಳೆ. ಯಾರಿಗೂ ಗೊತ್ತಾಗದಂತೆ ಗುಟ್ಟು ನಿಭಾಯಿಸುತ್ತಾಳೆ. ಆಕೆಯ ಪತಿ ಐಎಎಸ್ ಅಧಿಕಾರಿಯಾಗಿ ಅದೇ ಊರಿಗೆ ಬರುತ್ತಾನೆ. ರಾಘವನ ರೌಡಿಗಿರಿ ಮಟ್ಟ ಹಾಕಲು ಆತನನ್ನು ಗಡಿಪಾರು ಮಾಡಲು ನಿರ್ಧರಿಸುತ್ತಾನೆ. ಅದನ್ನು ಬದಲಿಸುವಂತೆ ಎಲ್ಲರಿಂದ ಒತ್ತಡ ತರುತ್ತಾನೆ ರಾಘವ. ಆದರೆ ಮಾಧವ ಒಪ್ಪುವುದಿಲ್ಲ.

  ಕೊನೆಗೆ ಗುಟ್ಟು ರಟ್ಟಾಗುತ್ತದೆ. ಮಾಧವ ಪತ್ನಿಯ ಮೇಲೆ ಕೆಂಡ ಕಾರುತ್ತಾನೆ. ಸಾಲದ ಹಣವನ್ನು ಹೇಗೋ ಹೊಂದಿಸಿ ರಾಘವನಿಗೆ ಕೊಡುತ್ತಾನೆ. ಆದರೆ ರಾಘವನಿಗೆ ದುಡ್ಡಿಗಿಂತ ತನ್ನನ್ನು ಗಡಿಪಾರು ಮಾಡುವ ಮಾಧವನ ನಿರ್ಧಾರವನ್ನು ಬದಲಿಸುವುದು ಮುಖ್ಯವಾಗಿರುತ್ತದೆ. ಮಾಧವನಿಗೆ ಬಾಂಡ್ ಪೇಪರ್ ಕತೆ ಹೇಳಿ ಹೆದರಿಸುತ್ತಾನೆ. ಫೋರ್ಜರಿ ಮಾಡಿದ್ದನ್ನು ಪತ್ರಿಕೆಗೆ ತಿಳಿಸುವುದಾಗಿ ಹೆದರಿಸುತ್ತಾನೆ. ಅದರಿಂದ ಮಾಧವ ಇನ್ನಷ್ಟು ಉಗ್ರನಾಗುತ್ತಾನೆ. ಹೇಗಾದರೂ ಮಾಡಿ ಬಾಂಡ್ ಪೇಪರ್ ತರುವಂತೆ ಪತ್ನಿಗೆ ಒತ್ತಾಯಿಸುತ್ತಾನೆ. ಅದನ್ನು ತರಲು ಹೋಗು ಮೀರಾ, ರಾಘವನತ್ತ ಗುಂಡು ಹಾರಿಸುತ್ತಾಳೆ....

  ಮುಂದೆ ಏನಾಗುತ್ತದೆ ಎನ್ನುವುದನ್ನು ತೆರೆ ಮೇಲೆ ನೋಡಿ. ಕೇಳಲು ವಿಚಿತ್ರ ಮತ್ತು ಸರಳ ಕತೆ ಅನ್ನಿಸುತ್ತದೆ. ಆದರೆ ಸೀತಾರಾಂ ಒಂದು ಹೊಸ ಬದುಕಿನ ರೀತಿಯನ್ನು ಇಲ್ಲಿ ತೆರೆದಿಟ್ಟಿದಾರೆ. ಜೀವನದ ಅನುಭವಗಳಿಗೆ ದೃಶ್ಯ ರೂಪ ಕೊಟ್ಟಿದ್ದಾರೆ. ತುಂಬಾ ಸರಳವಾಗಿ, ಎಲ್ಲೂ ಹೆಜ್ಜೆ ತಪ್ಪದಂತೆ, ವಾಚ್ಯವಾಗದಂತೆ, ಬೋರ್ ಆಗದಂತೆ ನಿರೂಪಿಸಿದ್ದಾರೆ. ಎಲ್ಲಾ ಪಾತ್ರಗಳು ಮನೆಯ ಸುತ್ತ ಮುತ್ತ ಇದೆ ಎನಿಸುವಷ್ಟು ಸಹಜವಾಗಿ, ಮುಖ್ಯವಾಗಿ ಇಂಥ ಕತೆಯನ್ನೂ ಸಿನಿಮಾ ಮಾಡಬಹುದೆನ್ನುವ ಇವರ ಧೈರ್ಯವನ್ನು ಮೆಚ್ಚಲೇಬೇಕು.

  ಸಾಲದಿಂದ ಆಗುವ ಅನಾಹುತ, ಪತಿ ಪತ್ನಿ ನಡುವಿನ ನಂಬಿಕೆ, ಪ್ರೀತಿಯ ಹಾಕುವ ಅದರ ತೀವ್ರತೆಯನ್ನು ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ತಟ್ಟುವಂತೆ ಸೀತಾರಾಂ ವಿವರಿಸಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಹೀರೋ ಅನ್ನಿಸಿಕೊಂಡವನು ವಿಲನ್ ಆಗುತ್ತಾನೆ. ವಿಲನ್ ಆದವನು ಹೀರೋ ಆಗುತ್ತಾನೆ. ಗಂಡು ಹೆಣ್ಣನ್ನು ಯಾವ ರೀತಿ ನೋಡುತ್ತಾನೆ, ತನ್ನ ಸ್ವಾರ್ಥಕ್ಕಾಗಿ ಅವಳನ್ನು ಏನಾದರೂ ಮಾಡಬಲ್ಲ ಅವನ ನೀಚತನ, ಜೊತೆಗೆ ಒಳ್ಳೆಯತನವನ್ನು ಪಾತ್ರಗಳ ಮುಖಾಂತರ ಕಟ್ಟಿ ಕೊಟ್ಟಿದ್ದಾರೆ.

  ಇದಕ್ಕೆ ಹಂಸಲೇಖ ಸಂಗೀತ ಅದ್ಭುತ ಸಾಥ್ ನೀಡಿದೆ. ಹಿನ್ನೆಲೆ ಸಂಗೀತ ಒಂದು ತೂಕವಾದರೆ, ಹಾಡುಗಳದು ಇನ್ನೊಂದು ತೂಕ. ಬಹುತೇಕ ಎಲ್ಲಾ ಹಾಡುಗಳೂ ಮನಸಿಗೆ ತಟ್ಟುತ್ತವೆ. ವಸಂತ ವಸಂತ... ಹಾಡು ವಸಂತದಷ್ಟೇ ಸ್ವೀಟಾಗಿದೆ. ಸಂಭಾಷಣೆ ಕತೆಯ ಓಟಕ್ಕೆ ಬೆನ್ನೆಲುಬಾಗಿ ನಿಂತಿದೆ.
  ಇನ್ನು ಅಭಿನಯದ ವಿಷಯಕ್ಕೆ ಬಂದರೆ ರಮ್ಯಾ ನಂಬರ್‌ವನ್ ಪಟ್ಟವನ್ನು ಮುಲಾಜಿಲ್ಲದೆ ಪಡೆದಿದ್ದಾರೆ. ಇದು ರಮ್ಯಾನಾ ಎನ್ನುವ ಅನುಮಾನ ಬರುವಷ್ಟು ಚೆನ್ನಾಗಿ ನಟಿಸಿದ್ದಾರೆ. ಹೊಸ ರಮ್ಯಾ ಈ ಚಿತ್ರದ ಮುಖಾಂತರ ಜನ್ಮ ಪಡೆದಿದ್ದಾರೆ.

  ನಾಯಕ ದಿಗಂತ್ ತನ್ನ ಪಾತ್ರಕ್ಕೆ ಏನು ಬೇಕೋ ಅದನ್ನು ಕೊಟ್ಟಿದ್ದಾರೆ. ವಿಲನ್ ಪಾತ್ರಕ್ಕೆ ಕಳೆ ನೀಡಿದ್ದು ತಿಲಕ್. ಒಂದು ವಿಚಿತ್ರ ಗುಂಗು ಹಿಡಿಸುವ ತಾಕತ್ತು ಇವರಿಗಿದೆ. ಸೀತಾ ಕೋಟೆ, ಆನಂದ್, ಮಂಡ್ಯ ರಮೇಶ್ ... ಮುಂತಾದವರು ನೆನಪಿನಲ್ಲಿ ಉಳಿಯುತ್ತಾರೆ.

  ಸಂಪೂರ್ಣ ಕಲಾತ್ಮಕ ಅಲ್ಲದ, ಪೂರ್ಣ ಕಮರ್ಶಿಯಲ್ ಅಲ್ಲದ , ಮೀರಾ ಮಾಧವ ರಾಘವವಿಭಿನ್ನ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಅಲ್ಲಲ್ಲಿ ಗಂಡಸರ ಬಗ್ಗೆ ದ್ವೇಷ, ಅದೇ ಹೊತ್ತಿಗೆ ಹೆಮ್ಮೆಯನ್ನೂ ಮೂಡಿಸುತ್ತದೆ. ಹೆಣ್ಣಿನ ಬಗ್ಗೆ ಗೌರವ, ಅಭಿಮಾನಕ್ಕೆ ಮುನ್ನುಡಿ ಬರೆಯುತ್ತದೆ. ಎಲ್ಲರೊಂದಿಗೆ ಹೋಗಿ ಬನ್ನಿ. ಏನನ್ನೋ ಪಡೆದ ಸಂತಸ ನಿಮ್ಮದಾಗುತ್ತದೆ...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more