ಬಾಡಿ ಗಾರ್ಡ್ ವಿಮರ್ಶೆ: ಬ್ಯೂಟಿಫುಲ್ ಲವ್ ಸ್ಟೋರಿ

By * ರಾಜೇಶ್ ಕಾಮತ್, ಪಣಿಯಾಡಿ

Bodyguard  film review
ಗೌರಿಗಣೇಶ, ಈದ್ ಹಬ್ಬದ ಸಮಯದಲ್ಲಿ ಸಲ್ಲು ಮಿಯಾ ಅಭಿಮಾನಿಗಳಿಗೆ ಮಸಾಲಭರಿತ ಫುಲ್ ಮೀಲ್ಸ್ ಉಣಬಡಿಸಿದ್ದಾರೆ ನಿರ್ದೇಶಕರು. ಕಥೆಯಲ್ಲಿ ಹೇಳಿ ಕೊಳ್ಳುವಂತದ್ದು ಏನು ಇಲ್ಲವಾದರೂ ಎರಡೂವರೆ ಗಂಟೆ ಪ್ರೇಕ್ಷರಿಗೆ ಏನು ಬೇಕು ಅದನ್ನು ಚಿತ್ರ ನೀಡಿದೆ. ಇದು 'ಬಾಡಿಗಾರ್ಡ್' ಎನ್ನುವ ಮಲಯಾಳಂ ಚಿತ್ರದ ರಿಮೇಕ್. ಇದೊಂದು ಬ್ಯೂಟಿಫುಲ್ ಲವ್ ಸ್ಟೋರಿ.

ಲವ್ಲಿ ಸಿಂಗ್ (ಸಲ್ಮಾನ್) ಒಬ್ಬ ನಿಷ್ಠಾವಂತ ಅಧಿಕಾರಿ. ವಾಣಿಜ್ಯೋದ್ಯಮಿ ಸರ್ತಾಜ್ ರಾಣ (ರಾಜ್ ಬಬ್ಬರ್) ಅವರ ಮಗಳೇ ದಿವ್ಯಾ (ಕರೀನಾ ಕಪೂರ್) ಚಿತ್ರದ ಕಥಾನಾಯಕಿ. ನಾಯಕಿಗೆ ಬಾಡಿಗಾರ್ಡ್ ಆಗಿ ಕೆಲಸ ನಿರ್ವಹಿಸುವ ನಾಯಕ ಯಜಮಾನನ ವಹಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಾನೆ. ನಾಯಕಿ ಹೋದಡೆ ಎಲ್ಲಾ ಆಕೆಗೆ ರಕ್ಷಕನಾಗಿ ನಿಲ್ಲುತ್ತಾನೆ.

ನಾಯಕಿಯನ್ನು ಚುಡಾಯಿಸುವ ಪೋಲಿಗಳಿಗೆ ಬುದ್ಧಿ ಕಲಿಸುತ್ತಾ ನಿಯತ್ತಿನ ಬಾಡಿಗಾರ್ಡ್ ಆಗಿ ಕೆಲಸ ನಿರ್ವಹಿಸುವ ಈತನ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಾಯಕಿ ಬೇರೆ ನಂಬರ್ ಮತ್ತು ಬೇರೆ ಹೆಸರಿನಿಂದ ನಾಯಕನಿಗೆ ಫೋನ್ ಮಾಡಿ ಪ್ರೀತಿಯ ನಾಟಕ ವಾಡುತ್ತಾಳೆ. ನಾಯಕಿ ತನ್ನ ಬಾಡಿಗಾರ್ಡ್ ಪ್ರೀತಿಗೆ ಬೀಳುತ್ತಾಳೋ, ನಾಯಕನಿಗೆ ನಿಜವಾದ ಪ್ರೀತಿ ಸಿಗುತ್ತೋ ಕ್ಲೈಮ್ಯಾಕ್ಷ್ ನಲ್ಲಿ ಉತ್ತರ ಸಿಗಲಿದೆ.

ಸಲ್ಮಾನ್ ನಟನೆ ಚಿತ್ರದ ಜೀವಾಳ. ಕಾಮಿಡಿ, ಸೆಂಟಿಮೆಂಟ್ ಮತ್ತು ಸ್ಟಂಟ್ ದೃಶ್ಯಗಳಲ್ಲಿ ಇವರ ನಟನೆ ಮೆಚ್ಚುವಂತದ್ದು. ಕರೀನಾ ನಟನೆ ಕೂಡ ಪೈಪೋಟಿ ನೀಡುವಂತದ್ದು. ರಜತ್ ರಾವ್ಲಿ ಅವರ ಹಾಸ್ಯ ಸನ್ನಿವೇಶ ಚಿತ್ರಕಥೆಗೆ ಪೂರಕವಾಗಿದೆ. ಆದಿತ್ಯ ಪಾಂಚೋಲಿ, ರಾಜ್ ಬಬ್ಬರ್, ಅಸ್ರಾಣಿ, ವಿದ್ಯಾ ಸಿನ್ಹಾ ಮುಂತಾದವರ ನಟನೆ ಕೂಡ ಉತ್ತಮವಾಗಿದೆ.

ಹಿಮೇಶ್ ರೇಷ್ಮಿಯಾ ಮತ್ತು ಪ್ರೀತಂ ಅವರ ಸಂಗೀತ ಚಿತ್ರದ ಪ್ರಮುಖ ಹೈಲೈಟ್ಸ್. ಸಂದೀಪ್ ಶಿರೋಡ್ಕರ್ ಅವರ ಹಿನ್ನಲೆ ಸಂಗೀತ, ಶೆಜಲ್ ಶಾ ಅವರ ಕ್ಯಾಮೆರಾ, ವಿಜಯನ್ ಅವರ ಸಾಹಸ, ಸಂಜಯ್ ಸಂಕಿಯಾ ಅವರ ಎಡಿಟಿಂಗ್ ಚಿತ್ರದ ಗಮನಿಸ ಬೇಕಾದ ಪ್ರಮುಖ ಅಂಶಗಳು. Overall, ಸಲ್ಮಾನ್ ಅಭಿಮಾನಿಗಳು ಏನು ಬಯಸುತ್ತಾರೋ ಅದನ್ನು ನೀಡಿದ್ದಾರೆ ನಿರ್ದೇಶಕ ಸಿದ್ದಿಕಿ.

More from Filmibeat

English summary
Director Siddique debut Bollywood film Bodyguard is a romantic action flick, which features actor Salman Khan and actress Kareena Kapoor in the leads. Read Bodyguard movie review and other Bollywood reviews.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X