ಎರಡು ಚಿತ್ರಗಳ ಸಿನಿಸಿಕೆ ಖದೀಮರು, ಒಲವಿನ ಗೆಳತಿ

By * ಮಂದಾಕಿನಿ, ಜನ್ನಾಪುರ

ತಿಂಗಳಲ್ಲಿ ಒಂದಷ್ಟು ಚಿತ್ರಗಳು ಹೇಳಹೆಸರಿಲ್ಲದಂತೇ ಬಂದು ಹೋಗುತ್ತವೆ. ತೆರೆಕಂಡ ಎರಡೇ ದಿವಸದಲ್ಲಿ ಮಾಯದಂಥ ಮಳೆಯಾಗುತ್ತದೆ. ಅಂಥ ಕೆಲ ಚಿತ್ರಗಳ ಸಾಲಿಗೆ ಸೇರುತ್ತವೆ-ಖದೀಮರು ಮತ್ತು ಒಲವಿನ ಗೆಳತಿ. ಈ ಎರಡೂ ಚಿತ್ರಗಳು ಒಂದೇ ವಾರದೊಳಗೆ ಅಂದರ್-ಬಾಹರ್ ಆಗಿಬಿಟ್ಟಿದೆ.

ಒಂದು ಕಾಲದಲ್ಲಿ ಸಸ್ಪೆನ್ಸ್ ಚಿತ್ರಗಳಿಂದ ಹೆಸರು ಮಾಡಿದ್ದ ಹ.ಸು.ರಾಜಶೇಖರ್ ನಿರ್ದೇಶನದ ಖದೀಮರು ಚಿತ್ರ ನೋಡನೋಡುತ್ತಾ ಪ್ರೇಕ್ಷಕರ ನಿದ್ರೆ ಕದಿಯುತ್ತದೆ. ನಿರ್ದೇಶಕರು ಅಪ್‌ಡೇಟ್ ಆಗದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ತಾಜಾ-ಮಜಾ ಉದಾಹರಣೆ ಖದೀಮರು.

ಇಲ್ಲಿ ಹುಡುಗರ ಹಿಂಡೇ ಇದೆ. "ಶಿಷ್ಯ" ದೀಪಕ್, ಗಂಡಹೆಂಡತಿ ಗುಂಡಣ್ಣ ತಿಲಕ್, ಪಟ್ರೆ ಅಜಿತ್, ಕಾಳಿದಾಸ ಲವ್ವಲ್ ಬಿದ್ದಿರುವ ಹೀರೋ ಅಮಿನ್, ಲೋಕಿವೇ ಹೇಳಿದ ಮಾತಿದು ನಾಯಕ ರವಿತೇಜ.. ಹೀಗೆ ಚಿಕ್ಕಪುಟ್ಟ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಚಿಲ್ಪುಪುಲ್ಟುಗಳದ್ದೇ ಸಾಮ್ರಾಜ್ಯ.

ಅವರೆಲ್ಲ ಸೇರಿ ಕಿಡ್ನಾಪ್ ಮಾಡಲು ಹೋಗುತ್ತಾರೆ. ಅಲ್ಲಿಯೂ ಸೋಲುತ್ತಾರೆ. ಕೊನೆಗೆ ಹಳ್ಳಿಗೆ ಹೋಗಿ ಸೇರಿಕೊಳ್ಳುತ್ತಾರೆ! ಕ್ಲೈಮ್ಯಾಕ್ಸ್ ಹೊತ್ತಿಗೆ ಸಿನಿಮಾ ಹೋಗಿ ಪ್ಯಾಟೇ ಹುಡುಗರ ಹಳ್ಳೀ ಲೈಫ್ ಆಗುತ್ತದೆ! ಒಂದಷ್ಟು ಪೋಷಕ ಪಾತ್ರಗಳು ವೇಸ್ಟ್ ಆಗಿವೆ. ನಾಯಕಿಯರಂತೂ ಹಾಟ್ ಹಾಡಿಗಷ್ಟೇ ಮೀಸಲು.

ಇನ್ನು ಒಲವಿನ ಗೆಳತಿ. ಮಂಡ್ಯ ನಾಗರಾಜ್ ನಿರ್ದೇಶನದ ಒಲವಿನ ಗೆಳತಿ ಚಿತ್ರವಂತೂ ಥೇಟ್ ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು! ನಾಯಕಿ ಪೇಟೆಯಿಂದ ಬಂದು ಹಳ್ಳಿಯಲ್ಲಿ ಟೆಂಟ್ ಹಾಕುತ್ತಾಳೆ. ಅಲ್ಲಿದ್ದ ಹಮ್ಮೀರನೊಬ್ಬ ತಾನು ಸಾಹುಕಾರ ಎಂದು ಯಾಮಾರಿಸುತ್ತಾನೆ.

ಕೊನೆಗೆ ಅಲ್ಲಿ ಒಂದಷ್ಟು ತಿರುವು, ಮುರುವು, ಹರಿವು, ಹಸಿವು.. ಇಷ್ಟು ಬಿಟ್ಟರೆ ಒಬ್ಬ ಜಮೀನ್ದಾರನ ಜಿಪುಣತನ.. ನಾಯಕ ಪ್ರಶಾಂತ್ ಮುಟ್ಟಿದ್ದೆಲ್ಲಾ ಮಣ್ಣಾದವೋ ಎಲ್ಲ ಮಣ್ಣಾದವೋ! ನಾಯಕಿಯಂತೂ ಗೋಳು ತೋಡಿಕೊಳ್ಳುವ ಗೊಳಗುಮ್ಮಟ!

ಕೊನೆಸಿಕೆ: ಈ ಎರಡೂ ಚಿತ್ರಗಳನ್ನು ಒಂದೇ ದಿವಸ ಒಂದರ ಮೇಲೊಂದರಂತೇ ನೋಡಿದವರಿಗೆ ಒಲವಿನ ಖದೀಮ ಕಪ್ ಕೊಟ್ಟು ಸತ್ತ್‌ಕರಿಸಬಹುದು!

More from Filmibeat

English summary
Here is the review of two Kannada movies Khadhimaru and Olavina Gelathi. "Khadeemaru" is an oridinary film, which can be missed. There is absolutely nothing special to rejoice in Olavina Gelathi. Also read other Kannada movie reviews.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X