Aadi Lakshmi Purana Review : ಸಾಮಾನ್ಯ ಕಥೆ... ಸಾಮಾನ್ಯ ಸಿನಿಮಾ...

ಆದಿ ಒಬ್ಬ ಅಂಡರ್ ಕವರ್ ಪೊಲೀಸ್... ಲಕ್ಷ್ಮಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಹುಡುಗಿ.. ಇವರಿಬ್ಬರ ಲವ್ ಸ್ಟೋರಿಯೇ 'ಆದಿ ಲಕ್ಷ್ಮಿ ಪುರಾಣ'. ಬಾಯಿ ಬಿಟ್ಟರೆ ಸುಳ್ಳು ಹೇಳುವ ಲಕ್ಷ್ಮಿ ಹಾಗೂ ಸುಳ್ಳಿನ ವಾಸನೆ ಕಂಡರೂ ಆಗದೆ ಇರುವ ಆದಿ, ಇವರಿಬ್ಬರು ಸೇರಿದರೆ ಏನೆಲ್ಲ ಆಗುತ್ತದೆ ಎನ್ನುವುದನ್ನು ಹಾಸ್ಯದ ಜೊತೆಗೆ ಹೇಳುವ ಸಿನಿಮಾ ಇದಾಗಿದೆ.

Rating:
3.0/5
Star Cast: ರಾಧಿಕಾ ಪಂಡಿತ್, ನಿರೂಪ್ ಭಂಡಾರಿ
Director: ಪ್ರಿಯಾ

ಲವ್ ಅಟ್ ಫಸ್ಟ್ ಸೈಟ್

ಲವ್ ಅಟ್ ಫಸ್ಟ್ ಸೈಟ್

ರೌಡಿಯನ್ನು ಹಿಡಿಯುವ ಭರದಲ್ಲಿ ಲಕ್ಷ್ಮಿಗೆ (ರಾಧಿಕಾ ಪಂಡಿತ್) ಆದಿ (ನಿರೂಪ್ ಭಂಡಾರಿ) ಡ್ಯಾಶ್ ಹೊಡೆಯುತ್ತಾನೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗೆ ಆತನಿಗೆ ಅಲ್ಲೇ ಲವ್ ಶುರು ಆಗುತ್ತದೆ. ಮುಂದಿನ ಭೇಟಿಯಲ್ಲಿ ಆಕೆಗೆ ಮದುವೆ ಆಗಿರುವ ಸುಳ್ಳು ಸುದ್ದಿ ಆದಿಗೆ ತಲುಪುತ್ತದೆ. ಸುಳ್ಳನೇ ಸತ್ಯ ಎಂದು ನಂಬಿಕೊಂಡ ಆದಿ ಹೇಗೆ ಪ್ರೀತಿಯಲ್ಲಿ ಗೆಲ್ಲುತ್ತಾನೆ ಎನ್ನುವುದು ಸಿನಿಮಾದ ಕುತೂಹಲಕಾರಿ ಅಂಶ.

ಮದುವೆ ಬೇಡ ಎನ್ನುವ ಎರಡು ಪಾತ್ರಗಳು

ಮದುವೆ ಬೇಡ ಎನ್ನುವ ಎರಡು ಪಾತ್ರಗಳು

ಆದಿ ಮನೆಯಲ್ಲಿ ಮದುವೆ ಆಗು ಎಂದು ಕಾಟ ಕೊಡುತ್ತಿರುತ್ತಾರೆ. ಇತ್ತ ಲಕ್ಷ್ಮಿಗೆ ಮದುವೆ ಅಂದರೆ ಇಷ್ಟ ಇರುವುದಿಲ್ಲ. ಕ್ರಿಕೆಟ್ ಆಟಗಾರ ಧೋನಿಯ ಅಭಿಮಾನಿಯಾಗಿರುವ ಲಕ್ಷ್ಮಿ ಅದೇ ರೀತಿಯ ಹುಡುಗನ ನಿರೀಕ್ಷೆಯಲ್ಲಿ ಇರುತ್ತಾಳೆ. ಇಂತಹ ಎರಡು ಪಾತ್ರಗಳು ಹೇಗೆ ಒಂದಾಗುತ್ತದೆ ಎನ್ನುವುದು ಸಿನಿಮಾದ ನಿರೂಪಣೆ.

ರಾಧಿಕಾ ಪಂಡಿತ್ ಚಾರ್ಮ್ ಕಡಿಮೆ ಆಗಿಲ್ಲ

ರಾಧಿಕಾ ಪಂಡಿತ್ ಚಾರ್ಮ್ ಕಡಿಮೆ ಆಗಿಲ್ಲ

ನಟನೆಯ ವಿಚಾರಕ್ಕೆ ಬಂದರೆ, ರಾಧಿಕಾ ಪಂಡಿತ್ ಮತ್ತೆ ತಮ್ಮ ಸಾಮರ್ಥ್ಯ ತೋರಿದ್ದಾರೆ. ಕೊಂಚ ಗ್ಯಾಪ್ ಆಗಿದ್ದರೂ, ತೆರೆ ಮೇಲೆ ಅವರ ಚಾರ್ಮ್ ಮರೆಯಾಗಿಲ್ಲ. ನಟ ಅನೂಪ್ ಭಂಡಾರಿ ಅಭಿನಯ ಕೂಡ ಚೆನ್ನಾಗಿದೆ. ಗೆಳೆಯನ ಪಾತ್ರದಲ್ಲಿ ಯಶವಂತ್ ಶೆಟ್ಟಿ ನಗಿಸುತ್ತಾರೆ. ತಾರ, ಸುಚೇಂದ್ರ ಪ್ರಸಾದ್ ಇಷ್ಟ ಆಗುತ್ತಾರೆ

ಸಾಮಾನ್ಯ ಕಥೆ... ಸಾಮಾನ್ಯ ಸಿನಿಮಾ...

ಸಾಮಾನ್ಯ ಕಥೆ... ಸಾಮಾನ್ಯ ಸಿನಿಮಾ...

ಸಿನಿಮಾದ ಪ್ರಾರಂಭದಲ್ಲಿ ಲವ್ ಸ್ಟೋರಿ ಶುರು ಆಗುತ್ತದೆ. ಹೋಗುತ್ತಾ ಹೋಗುತ್ತಾ ಅದು ಬೋರ್ ಆಗುತ್ತದೆ. ಯಾವುದೇ ದೊಡ್ಡ ತಿರುವು ಇಲ್ಲದೆ ಮುಂದಿನ ದೃಶ್ಯವನ್ನು ಪ್ರೇಕ್ಷಕ ಆರಾಮಾಗಿ ಲೆಕ್ಕ ಹಾಕಬಹುದು. ಸೆಕೆಂಡ್ ಹಾಫ್ ನಲ್ಲಿ ಏನೋ ಇರಬೇಕು ಎಂದುಕೊಂಡರೆ ಅಲ್ಲಿಯೂ ಆದಿ - ಲಕ್ಷ್ಮಿ ಪುರಾಣವೇ ಮುಂದುವರೆಯುತ್ತದೆ.

ಪ್ರೇಮ ಕಥೆಯ ಮುತ್ತಿನ ಜೊತೆಗೆ ಡ್ರಗ್ ಮತ್ತು

ಪ್ರೇಮ ಕಥೆಯ ಮುತ್ತಿನ ಜೊತೆಗೆ ಡ್ರಗ್ ಮತ್ತು

ಸಿನಿಮಾದ ಪ್ರಾರಂಭದಲ್ಲಿ ಇದು ಲವ್ ಸ್ಟೋರಿ ಮಾತ್ರವಲ್ಲ ಬೇರೆಯದೆ ಎಳೆ ಇದೆ ಎನ್ನುವ ಸುಳಿವನ್ನು ನೀಡುತ್ತಾರೆ. ಆದರೆ, ಆ ಡ್ರಗ್ ಕಥೆ ಅಷ್ಟೊಂದು ಪರಿಣಾಮಕಾರಿಯಾಗಿ ಇಲ್ಲ. ಪೊಲೀಸ್ ಆಗಿ ಲಕ್ಷ್ಮಿ ಹಿಂದೆ ಸುತ್ತುವ ಆದಿ, ಕಳ್ಳರನ್ನು ಪತ್ತೆ ಹಚ್ಚುವ ಹಾದಿ ಅಷ್ಟೊಂದು ಒಪ್ಪಿಗೆ ಆಗುವ ಹಾಗೆ ಇಲ್ಲ.

ನಿರೀಕ್ಷೆ ಇಟ್ಟರೆ ನಿರಾಸೆ ಖಂಡಿತ

ನಿರೀಕ್ಷೆ ಇಟ್ಟರೆ ನಿರಾಸೆ ಖಂಡಿತ

ಮಣಿರತ್ನಂ ಶಿಷ್ಯ ಪ್ರಿಯಾ ನಿರ್ದೇಶನ ಅಂತಲೋ.. ರಾಧಿಕಾ ಪಂಡಿತ್ ಸಿನಿಮಾ ಅಂತಲೋ.. ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡರೆ ನಿರಾಸೆ ಆಗುವುದು ಖಂಡಿತ. ಹೀರೋ ಹೀರೋಯಿನ್, ಫೈಟ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಇರುವ ಒಂದು ಸರಳ ಸಿನಿಮಾ ಇದು. ಸಿನಿಮಾದ ಕಥೆ,..ಸಂಗೀತ.. ದೃಶ್ಯಗಳು.. ನಿರ್ದೇಶನ ಎಲ್ಲವೂ ಓಕೆ ಓಕೆ ಅಷ್ಟೇ.

More from Filmibeat

English summary
Actress Radhika Pandit and Nirup Bhandari starring 'Aadi Lakshmi Purana' kannada movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X