twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : ಹರೆಯದ ಆದಿಯ ಫಸ್ಟ್ ನೈಟ್ ಪುರಾಣ

    |

    Recommended Video

    Aadi Purana review : ಹೇಗಿತ್ತು ಆದಿಯ ಪುರಾಣ..! | Filmibeat Kannada

    ಕಾಲೇಜು ಹುಡುಗರು, ಹರೆಯದ ಹುಡುಗರು ಏನೆಲ್ಲ ಚೇಷ್ಟೆ ಮಾಡಬಹುದು ಅಂದರೆ 'ಆದಿ ಪುರಾಣ' ಸಿನಿಮಾವನ್ನು ತೋರಿಸಬಹುದು. ಈ ಜಮಾನದ ಹುಡುಗರ ಕಥೆ ಹೇಳಿರುವ ಈ ಸಿನಿಮಾ ಯುವಕರಿಗೆ ಹತ್ತಿರ ಆಗುವಂತೆ ಇದೆ. ಆದಿ ಎಂಬ ಒಬ್ಬ ಹುಡುಗನ ಸುತ್ತ ಸುತ್ತುವ ಕ್ರೇಜಿ ಸಿನಿಮಾ ಇದು.

    Rating:
    3.0/5

    ಮದುವೆಗೆ ಮುಂಚೆ - ಮದುವೆಯ ನಂತರ

    ಮದುವೆಗೆ ಮುಂಚೆ - ಮದುವೆಯ ನಂತರ

    ಚಿತ್ರದ ನಾಯಕನಾಗಿರುವ ಆದಿಯ (ಶಶಾಂಕ್) ಮದುವೆಯ ಮುಂಚಿನ ಕಥೆ ಹಾಗೂ ಮದುವೆಯ ನಂತರದ ಕಥೆಯೇ ಇಡೀ ಸಿನಿಮಾದ ನಿರೂಪಣೆಯಾಗಿದೆ. ಆದಿ ಎಂಬ ಒಬ್ಬ ಹುಡುಗನ್ನು ಇಟ್ಟುಕೊಂಡು ಯುವ ಮನಸ್ಸುಗಳು ತಳಮಳವನ್ನು ಇಲ್ಲಿ ಹೇಳಿದ್ದಾರೆ. ಒಂದು ರೀತಿಯಲ್ಲಿ ಆದಿ ಇಂದಿನ ಯುವಕರ ಪ್ರತಿನಿಧಿಯಂತೆ ಇದ್ದಾನೆ.

    ವಿಮರ್ಶೆ : ಅಂಬಿಗೆ ಮುಪ್ಪಾಗಿದ್ದರೂ, ಅವ್ರ ಗತ್ತಿಗೆ ಮುಪ್ಪಿಲ್ಲ ವಿಮರ್ಶೆ : ಅಂಬಿಗೆ ಮುಪ್ಪಾಗಿದ್ದರೂ, ಅವ್ರ ಗತ್ತಿಗೆ ಮುಪ್ಪಿಲ್ಲ

    ಆದಿಯ ಪೋಲಿ ಕೆಲಸಗಳು

    ಆದಿಯ ಪೋಲಿ ಕೆಲಸಗಳು

    ಬೆಂಗಳೂರಿನಲ್ಲಿಯೇ ಓದಿ ಕೆಲಸ ಮಾಡುತ್ತಿರುವ ಆದಿಗೆ (ಶಶಾಂಕ್) ಸ್ನೇಹಿತರ ಒಂದು ಗ್ಯಾಂಗ್ ಇರುತ್ತದೆ. ದಿನ ರಾತ್ರಿ ಕೂತು ಕಂಠ ಪೂರ್ತಿ ಕುಡಿಯುವ ಸ್ನೇಹಿತರ ಜೊತೆ ಇದ್ದರೂ ಆದಿ ಎಂದೂ ಕುಡಿಯುವುದಿಲ್ಲ. ಹಾಗೆಂದ ಮಾತ್ರಕ್ಕೆ ಈತ 100% ಒಳ್ಳೆಯವನಲ್ಲ. ಒಮ್ಮೆ ಪೋಲಿ ಸಿನಿಮಾ ನೋಡುವಾಗ ಆದಿ ಅಪ್ಪನ ಬಳಿ ಸಿಕ್ಕಿ ಬೀಳುತ್ತಾನೆ. ನಂತರ ಈತನಿಗೆ ಕಲ್ಯಾಣ ಮಾಡುವ ನಿರ್ಧಾರಕ್ಕೆ ತಂದೆ ತಾಯಿ ಬರುತ್ತಾರೆ.

    ವಿಮರ್ಶೆ: 'ಇರುವುದೆಲ್ಲವ ಬಿಟ್ಟು' ಸಂಬಂಧಗಳೆಡೆಗೆ ತುಡಿವುದೇ ಜೀವನ ವಿಮರ್ಶೆ: 'ಇರುವುದೆಲ್ಲವ ಬಿಟ್ಟು' ಸಂಬಂಧಗಳೆಡೆಗೆ ತುಡಿವುದೇ ಜೀವನ

    ಫಸ್ಟ್ ನೈಟ್ ಪುರಾಣ

    ಫಸ್ಟ್ ನೈಟ್ ಪುರಾಣ

    ಸೆಕೆಂಡ್ ಆಫ್ ಬರುವ ವೇಳೆಗೆ ಆದಿ ಮದುವೆ ಆಗುತ್ತದೆ. ಆದರೆ, ಮದುವೆ ಆದರೂ ಆದಿಗೆ ಫಸ್ಟ್ ನೈಟ್ ಭಾಗ್ಯ ಮಾತ್ರ ಸಿಗೋದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಅವನ ಮೊದಲ ರಾತ್ರಿ ನಿಂತು ಹೋಗುತ್ತಿರುತ್ತದೆ. ಇನ್ನೊಂದು ಕಡೆ ಆಫೀಸ್ ಟೀಂ ಲೀಡರ್ ದಿಶಾ ಆತನಿಗೆ ಹತ್ತಿರ ಆಗುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಆದಿ ಹೆಂಡತಿಯ ನಂಬಿಕೆ ಉಳಿಸುತ್ತಾನಾ ಅಥವಾ ಆಸೆಯ ಹಿಂದೆ ಓಡುತ್ತಾನಾ ಎನ್ನುವುದು ಚಿತ್ರದ ಕೂತುಹಲಕಾರಿ ಅಂಶ.

    ನಟನೆ

    ನಟನೆ

    ಆದಿ ಎನ್ನುವ ಪಾತ್ರಕ್ಕೆ ಶಶಾಂಕ್ ಸೂಟ್ ಆಗಿದ್ದಾರೆ. ಆದರೆ, ಅವರು ಇನ್ನಷ್ಟು ಚೆನ್ನಾಗಿ ಆ ಪಾತ್ರವನ್ನು ಪ್ರೇಕ್ಷಕರ ಮುಂದೆ ಇಡಬೇಕಿತ್ತು. ನೋಡೋಕ್ಕೆ ಚೆನ್ನಾಗಿ ಇರುವ ನಾಯಕ ನಟನೆಯಲ್ಲಿ ಕಲಿಯುವುದು ಬಹಳ ಇದೆ. ಮೊದಲ ಸಿನಿಮಾ ಎನ್ನುವ ಕಾರಣಕ್ಕೆ ಅವರನ್ನ ಇಲ್ಲಿ ಮನ್ನಿಸಬಹುದು. ಹೆಂಡತಿಯಾಗಿ ಕಾಣಸಿಕೊಂಡಿರುವ ಅಹಲ್ಯಾ ಹಾಗೂ ಟೀಂ ಲೀಡರ್ ಮೋಕ್ಷಕುಲಾಲ್ ನಟನೆ ನೋಡಲು ಅಡ್ಡಿ ಇಲ್ಲ.

    ಉಳಿದವರ ಪಾತ್ರ

    ಉಳಿದವರ ಪಾತ್ರ

    ಸಿನಿಮಾದಲ್ಲಿ ನಟ, ನಟಿಯರ ರೀತಿ ಬೇರೆ ಪಾತ್ರಗಳು ಗಮನ ಸೆಳೆಯುತ್ತದೆ. ಬಾರ್ ನಲ್ಲಿಯೇ ಇರುವ ರಂಗಾಯಣ ರಘು ಕೊನೆಯ ದೃಶ್ಯದಲ್ಲಿ ತೋರಿಸಿದ ಭಾವುಕತೆ ಅಬ್ಬಬ್ಬಾ ಎನಿಸುತ್ತದೆ. ನಾಯಕನ ತಂದೆ, ತಾಯಿ ಹಾಗೂ ಗೆಳೆಯರ ಪಾತ್ರಗಳು ಇಷ್ಟ ಆಗುತ್ತದೆ. ಗಣಪತಿ ಭಟ್ (ಆದಿತ್ಯ ಭಾರಧ್ವಜ್) ಪಾತ್ರ ನಗಿಸುತ್ತದೆ.

    ತಾಳಿದವನು ಬಾಳಿಯಾನು

    ತಾಳಿದವನು ಬಾಳಿಯಾನು

    'ತಾಳಿದವನು ಬಾಳಿಯಾನು' ಎನ್ನುವುದು ನಾಯಕನ ಬಾಯಿಯಲ್ಲಿ ಬರುವ ಸಾಲು. ಅದೇ ರೀತಿ ಸಿನಿಮಾ ನೋಡುವವರು ಕೂಡ ಈ ಸಾಲನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು. ಕಾರಣ ಸಿನಿಮಾ ಅಲ್ಲಲ್ಲಿ ನಿಧಾನ ಎನ್ನಿಸುತ್ತದೆ. ಇದೇ ಸಿನಿಮಾದ ಮೈನಸ್ ಪಾಯಿಂಟ್ ಆಗಿದೆ.

    ಓಕೆ ಓಕೆ ಹಾಡುಗಳು, ಮೇಕಿಂಗ್ ಸೂಪರ್

    ಓಕೆ ಓಕೆ ಹಾಡುಗಳು, ಮೇಕಿಂಗ್ ಸೂಪರ್

    ಸಿನಿಮಾದ ಹಾಡುಗಳು ಓಕೆ ಓಕೆ ಎನ್ನುವಂತೆ ಇದೆ. ಚಿತ್ರದ ಆ ಸಂದರ್ಭಕ್ಕೆ ಅವು ಪೂರಕ ಎನ್ನಿಸಿದ್ದರೂ ಪದೇ ಪದೇ ಕೇಳಬೇಕು ಅಂತೇನು ಎನಿಸುವುದಿಲ್ಲ. ಚಿತ್ರದಲ್ಲಿ ಮೆಚ್ಚಿಕೊಳ್ಳುವ ಅಂಶಗಳಲ್ಲಿ ಮೇಕಿಂಗ್ ಪ್ರಮುಖವಾದದ್ದು. ಅದರಲ್ಲಿಯೂ ಮದುವೆ ಹಾಡಿನ ಕ್ಯಾಮರಾ ವರ್ಕ್ ಬಲು ಸುಂದರ.

    ಡಬಲ್ ಮೀನಿಂಗ್ ಇದೆ, ಇನ್ನೇನೋ ಬೇಕಿದೆ

    ಡಬಲ್ ಮೀನಿಂಗ್ ಇದೆ, ಇನ್ನೇನೋ ಬೇಕಿದೆ

    ಸಿನಿಮಾದ ಕೆಲವು ಡಬ್ಬಲ್ ಮೀನಿಂಗ್ ಡೈಲಾಗ್ ಗಳು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ. ಆದರೆ, ಕೆಲವು ಬಾರಿ ಪದೇ ಪದೇ ಡಬ್ಬಲ್ ಮೀನಿಂಗ್ ಡೈಲಾಗ್ ಕಿವಿಗೆ ಬೀಳುತ್ತದೆ. ಸಿನಿಮಾದಲ್ಲಿ ಪ್ರೀತಿ, ರೊಮ್ಯಾನ್ಸ್ ಎಲ್ಲ ಇದ್ದರೂ ಎಮೋಷನ್ಸ್ ಕಡಿಮೆ ಇದೆ. ಭಾವನೆಗಳು ಇದ್ದಿದ್ದರೆ ಸಿನಿಮಾ ಇನ್ನಷ್ಟು ಆಪ್ತವಾಗುತ್ತಿತ್ತು.

    ಮನರಂಜನೆ ಸಿಗುತ್ತದೆ

    ಮನರಂಜನೆ ಸಿಗುತ್ತದೆ

    ಸಿನಿಮಾದ ಕೆಲವು ವಿಚಾರಗಳು ಹುಡುಗ, ಹುಡುಗಿಯರಿಗೆ ಕನೆಕ್ಟ್ ಆಗುತ್ತದೆ. ಮನರಂಜನೆ ದೃಷ್ಟಿಯಿಂದ ಸಿನಿಮಾವನ್ನು ನೋಡಬಹುದು. 'ಆದಿ ಪುರಾಣ' ಒಂದು ಹೊಸ ತಂಡದ ಪ್ರಯತ್ನ. ನೀವು ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ.

    English summary
    Aadi purana kannada movie review. The movie released Today (October 5th).
    Friday, October 5, 2018, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X