twitter
    For Quick Alerts
    ALLOW NOTIFICATIONS  
    For Daily Alerts

    ಅಮೀರ್ ಖಾನ್ ಸಸ್ಪೆನ್ಸ್ ಥ್ರಿಲ್ಲರ್ ತಲಾಷ್ ವಿಮರ್ಶೆ

    By Rajendra
    |

    ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ ತಲಾಷ್ ಚಿತ್ರ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಈ ಚಿತ್ರದಲ್ಲಿ ಅಂತಹದ್ದೇನಿದೆ ಎಂಬ ಕುತೂಹಲ ಅಮೀರ್ ಅಭಿಮಾನಿಗಳು ಹಾಗೂ ಬಾಲಿವುಡ್ ಚಿತ್ರಗಳನ್ನು ಇಷ್ಟಪಡುವ ಪ್ರತಿಯೊಬ್ಬರನ್ನೂ ಕಾಡುತ್ತಿದೆ.

    ತಲಾಷ್ ಚಿತ್ರದ ಬಗೆಗಿನ ಬಹುತೇಕ ಚಿತ್ರವಿಮರ್ಶೆಗಳು ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಬನ್ನಿ ನೋಡೋಣ ಯಾವ್ಯಾವ ಪತ್ರಿಕೆ ಏನೇ ಹೇಳಿದೆ ಎಂದು. ಅದಕ್ಕೂ ಮುನ್ನ 'ತಲಾಷ್' ಚಿತ್ರದ ಬಗ್ಗೆ ಒಂದೆರಡು ಸಂಗತಿಗಳು ಹೇಳಲೇಬೇಕು.

    ನೋಡಲೇಬೇಕಾದ ಸಸ್ಪೆನ್ಸ್ ಥ್ರಿಲ್ಲರ್: ಒನ್ಇಂಡಿಯಾ

    ನೋಡಲೇಬೇಕಾದ ಸಸ್ಪೆನ್ಸ್ ಥ್ರಿಲ್ಲರ್: ಒನ್ಇಂಡಿಯಾ

    ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುವಲ್ಲಿ ನಟ ಅಮೀರ್ ಖಾನ್ ಅವರು ಮತ್ತೊಮ್ಮೆ ಗೆದ್ದಿದ್ದಾರೆ. ಈ ಬಾರಿ ಅವರು ಸಸ್ಪೆನ್ಸ್ ನಲ್ಲೇ ಪ್ರೇಕ್ಷಕರನ್ನು ಕಟ್ಟಿಹಾಕಿ ತಾನೊಬ್ಬ ಅದ್ಭುತ ನಟ ಎಂಬುದನ್ನು ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ. ಬಾಲಿವುಡ್ ಹೀರೋ ಒಬ್ಬನ ಕಾರು ಆಕ್ಸಿಡೆಂಟ್ ನಲ್ಲಿ ಸಾವಪ್ಪುವ ಸೀನ್ ನೊಂದಿಗೆ ಚಿತ್ರ ಆರಂಭವಾಗುತ್ತದೆ. ಅದನ್ನು ತನಿಖೆ ಮಾಡುತ್ತಾ ಹೋದಂತೆ ಮುಂಬೈನ ಮತ್ತೊಂದು ಮಗ್ಗುಲು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಲೈಂಗಿಕ ಕಾರ್ಯಕರ್ತೆಯಾಗಿ ಕರೀನಾ ಕಪೂರ್ ಗಮನಸೆಳೆಯುತ್ತಾರೆ.

    ತಪ್ಪದೆ ನೋಡಲೇಬೇಕಾದ ಚಿತ್ರ: ಐಬಿಎನ್ ಲೈವ್

    ತಪ್ಪದೆ ನೋಡಲೇಬೇಕಾದ ಚಿತ್ರ: ಐಬಿಎನ್ ಲೈವ್

    ಮುಂಬೈನ ಪಾತಕ ಲೋಕದ ಮೇಲೆ ಚಿತ್ರ ಬೆಳಕು ಚೆಲ್ಲುತ್ತಾ ಸಾಗುತ್ತದೆ. ಪೊಲೀಸ್ ಅಧಿಕಾರಿ ಸುರ್ಜನ್ ಸಿಂಗ್ ಶೆಖಾವತ್ (ಅಮೀರ್ ಖಾನ್) ತನಿಖೆ ಹೆಜ್ಜೆಹೆಜ್ಜೆಗೂ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಪೊಲೀಸ್ ಪತ್ನಿಯಾಗಿ ರೋಹಿಣಿ (ರಾಣಿ ಮುಖರ್ಜಿ) ಅವರ ಸೆಣೆಸಾಟಗಳು, ಖಿನ್ನತೆ, ಒಂಟಿತನ ಚಿತ್ರದಲ್ಲಿ ಮನಮಿಡಿಯುವಂತಿದೆ. ಅತ್ಯುತ್ತಮ ಮನರಂಜನಾತ್ಮಕ ಚಿತ್ರಕ್ಕೆ ತಲಾಷ್ ಒಂದು ಉತ್ತಮ ಉದಾಯಹಣೆ. ಈ ವರ್ಷದ ಅತ್ಯುತ್ತಮ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ನೋಡಿ ಮರೆಯುವಂತಹ ಚಿತ್ರವಲ್ಲ. ತಪ್ಪದೆ ನೋಡಲೇಬೇಕಾದ ಚಿತ್ರ.

    ನವಿರಾದ ಸಸ್ಪೆನ್ಸ್, ನೀರಸವಾದ ಥ್ರಿಲ್ಲರ್: ಟೈಂಸ್ ಆಫ್ ಇಂಡಿಯಾ

    ನವಿರಾದ ಸಸ್ಪೆನ್ಸ್, ನೀರಸವಾದ ಥ್ರಿಲ್ಲರ್: ಟೈಂಸ್ ಆಫ್ ಇಂಡಿಯಾ

    ನೀವೇನಾದರೂ ಮತ್ತೊಮ್ಮೆ ಸೀಟಿನ ಅಂಚಿಗೆ ಕುಳಿತು ಸವಿಯುವಂತಹ ಚಿತ್ರದ ನಿರೀಕ್ಷೆಯಲ್ಲಿದ್ದೀರಾ? ಸಖತ್ ಸಸ್ಪೆನ್ಸ್ ಆಗಿರಬೇಕು ಎಂದು ಭಾವಿಸಿದ್ದರೆ ಖಂಡಿತ ತಲಾಷ್ ಚಿತ್ರವನ್ನು ಒಮ್ಮೆ ಕಣ್ತುಂಬಿಕೊಳ್ಳಬಹುದು. ರೀಮಾ ಕಾಗ್ತಿ ಅವರು ನವಿರಾದ ಸಸ್ಪನ್ಸ್ ಚಿತ್ರವನ್ನು ನೀಡಿದ್ದಾರೆ. ಆದರೆ ಥ್ರಿಲ್ಲರ್ ಅಂಶಗಳಲ್ಲಿ ಎಡವಿದ್ದಾರೆ.

    ಸೀದಾ ಸಾದಾ ಸಸ್ಪೆನ್ಸ್ ಥ್ರಿಲ್ಲರ್ ಅಲ್ಲ: ಎನ್ ಡಿಟಿವಿ

    ಸೀದಾ ಸಾದಾ ಸಸ್ಪೆನ್ಸ್ ಥ್ರಿಲ್ಲರ್ ಅಲ್ಲ: ಎನ್ ಡಿಟಿವಿ

    ಇದು ಆರ್ಡಿನರಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅಲ್ಲವೇ ಅಲ್ಲ. ಕಥೆ, ಚಿತ್ರಕಥೆಯನ್ನು ಆ ರೀತಿ ಹೆಣೆದಿದ್ದಾರೆ ನಿರ್ದೇಶಕಿ ರೀಮಾ ಕಾಗ್ತಿ ಹಾಗೂ ಝೋಯಾ ಅಕ್ತರ್. ಮುಂಬೈನ ರಾತ್ರಿ ಜಗತ್ತನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ ಛಾಯಾಗ್ರಾಹಕ ಕೆ.ಯು.ಮೋಹನನ್. ಆಕ್ಷನ್ ಬಯಸುವ ಪ್ರೇಕ್ಷಕರಿಗೆ ಅಮೀರ್ ನಿರಾಸೆಗೊಳಿಸುತ್ತಾರೆ. ಚಿತ್ರದಲ್ಲಿ ಒಂದೇ ಒಂದು ಬುಲೆಟ್ ಕೂಡ ಅವರ ರಿವಾಲ್ವರ್ ನಿಂದ ಸಿಡಿಯುವುದಿಲ್ಲ.

    ಮಂದಗತಿಯಲ್ಲಿ ಸಾಗುವ ಕಥೆ: ಡೆಕ್ಕನ್ ಕ್ರಾನಿಕಲ್

    ಮಂದಗತಿಯಲ್ಲಿ ಸಾಗುವ ಕಥೆ: ಡೆಕ್ಕನ್ ಕ್ರಾನಿಕಲ್

    ನಟ ಅಮೀರ್ ಖಾನ್ ಅವರು ತಪ್ಪೇ ಮಾಡಲ್ಲ ಎಂದು ನೀವು ಭಾವಿಸಿದ್ದರೆ 'ತಲಾಷ್' ಚಿತ್ರವನ್ನು ನೋಡಿ. ಇಲ್ಲದಿದ್ದರೆ ಏನೋ ಕಳೆದುಕೊಂಡ ಭಾವ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಚಿತ್ರದಲ್ಲಿ ಕರೀನಾ ಕಪೂರ್ ಪಾತ್ರ ಕೇವಲ ಗ್ಲಾಮರ್ ಗಷ್ಟೇ ಸೀಮಿತವಾಗಿದೆ. 'ತಲಾಷ್'ಗೆ ಚಿತ್ರಕಥೆಯೇ ಮುಳುವಾಗಿದೆ. ಮತ್ತೆ ಮತ್ತೆ ಕೆಲವೊಂದು ಮಾಹಿತಿಗಳು ರಿಪೀಟ್ ಆಗುತ್ತಲೇ ಇರುತ್ತವೆ.


    3 ಈಡಿಯಟ್ಸ್ (2009) ಬಳಿಕ ಅಮೀರ್ ಅಭಿನಯದ 'ತಲಾಷ್' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿದ್ದವು. ಚಿತ್ರ ಆ ನಿರೀಕ್ಷೆಗಳೆಲ್ಲವನ್ನೂ ಉಳಿಸಿಕೊಂಡಿದೆ. ಸಾಮಾನ್ಯವಾಗಿ ಅಮೀರ್ ಖಾನ್ ಚಿತ್ರ ಎಂದರೆ ಸುದೀರ್ಘ ಲಾಂಗ್ ಡ್ರೈವ್ ಇದ್ದಂತೆ.

    ಕಥೆ, ಚಿತ್ರಕಥೆ ಸಿದ್ಧತೆಗಳು, ತಯಾರಿ, ಪ್ರಚಾರ...ಹೀಗೆ ಅವರ ಸುಮಾರು ಸಮಯ ತೆಗೆದುಕೊಳ್ಳುತ್ತದೆ. ತಲಾಷ್ ಚಿತ್ರ ಕೂಡ ಇದರಿಂದ ಹೊರತಾಗಲಿಲ್ಲ. ಸರಿಸುಮಾರು ರು.40 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದೆ. ಚಿತ್ರದ ನಿರ್ಮಾಪಕರಲ್ಲಿ ಅಮೀರ್ ಖಾನ್ ಸಹ ಒಬ್ಬರು.

    ರೀಮಾ ಕಾಗ್ತಿ ಆಕ್ಷನ್ ಕಟ್ ಹೇಳುವ ಜೊತೆಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಇವರಿಗೆ ಝೋಯಾ ಅಕ್ತರ್ ಕೂಡ ಸಾಥ್ ನೀಡಿದ್ದಾರೆ. ರಾಮ್ ಸಂಪತ್ ಅವರ ಸಂಗೀತ ಇರುವ ಚಿತ್ರದಲ್ಲಿ ರಾಣಿ ಮುಖರ್ಜಿ ಹಾಗೂ ಕರೀನಾ ಕಪೂರ್ ನಾಯಕಿಯರು.

    English summary
    Your Talaash for a good film definitely ends here!! Talaash is a delight to watch, because of the surprises it throws at you and by the power-packed performances by its cast. Talaash received positive reviews from critics. Oneindia, NDTV, DNA, Times of India rated the film 3.5, Deccan Chronicle rated 2 out of 5 stars.
    Sunday, January 20, 2013, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X