For Quick Alerts
  ALLOW NOTIFICATIONS  
  For Daily Alerts

  Laal Singh Chaddha Review: ಕ್ಲಾಸಿಕ್‌ ಸಿನಿಮಾದ ಅಡ್ಡಾದಿಡ್ಡಿ ರೀಮೇಕ್

  |

  ''ಅಮ್ಮ ಹೇಳಿದ್ದಾಳೆ ಸೈನ್ಯಕ್ಕೆ ಸೇರು ಎಂದು. ಆದರೆ ನನಗೆ ಮನುಷ್ಯರನ್ನು ಕೊಲ್ಲುವುದು ಇಷ್ಟ ಇಲ್ಲ'' ಎಂದು ಲಾಲ್ ಸಿಂಗ್ ಚಡ್ಡಾ (ಆಮಿರ್ ಖಾನ್) ತನ್ನ ಬಾಲ್ಯದ ಗೆಳತಿ ರೂಪಾಗೆ ಹೇಳುತ್ತಾನೆ. ರೂಪಾ (ಕರೀನಾ ಕಪೂರ್) ಲಾಲ್ ಸಿಂಗ್ ಚಡ್ಡಾನ ಭವಿಷ್ಯದ ಯೋಜನೆಗಳ ಬಗ್ಗೆ ವ್ಯಂಗ್ಯವಾಗಿ ಕೇಳಿದಾಗ ಮೇಲಿನಂತೆ ಉತ್ತರ ನೀಡುತ್ತಾನೆ ಮುಗ್ಧ ಚಡ್ಡ. ಮುಂದೆ ಹೋಗಿ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದವನೊಬ್ಬನ ಜೀವವನ್ನು ಉಳಿಸುತ್ತಾನೆ.

  'ಫಾರೆಸ್ಟ್ ಗಂಪ್' ಅಂಥಹಾ ಕ್ಲಾಸಿಕ್ ಅನ್ನು ರೀಮೇಕ್ ಮಾಡಿಯೂ, ಮೇಲೆ ಉದಾಹರಿಸಿದ ರೀತಿಯ ಮಾನವೀಯತೆ ತುಂಬಿದ ಅಮಾಯಕತ್ವವೇ ಲಾಲ್ ಸಿಂಗ್ ಚಡ್ಡ ಅನ್ನು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡುತ್ತದೆ. ಆದರೂ ಈ ರೀಮೇಕ್‌ನಲ್ಲಿ ಅಡೆ-ತಡೆಗಳಿವೆ.

  ಲವ್ ಲೆಟರ್ ಬರೆದು ಅಮ್ಮ, ಅಪ್ಪನ ಕೈಯಲ್ಲಿ ಒದೆ ತಿಂದಿದ್ದ ಸಾಯಿ ಪಲ್ಲವಿ!ಲವ್ ಲೆಟರ್ ಬರೆದು ಅಮ್ಮ, ಅಪ್ಪನ ಕೈಯಲ್ಲಿ ಒದೆ ತಿಂದಿದ್ದ ಸಾಯಿ ಪಲ್ಲವಿ!

  ಅತುಲ್ ಕುಲಕರ್ಣಿ ಮೂಲ ಕತೆಗೆ ಬದ್ಧವಾಗಿದ್ದುಕೊಂಡೇ ಹಾಲಿವುಡ್ ಸಿನಿಮಾ ಅಥವಾ ಕಾದಂಬರಿಯನ್ನು ಸುಂದರವಾಗಿ ಭಾರತೀಯ ಸಂಸ್ಕೃತಿಗೆ, ಕಾಲಘಟ್ಟಕ್ಕೆ ಚಿತ್ರಕತೆಯನ್ನು ಹೊಂದಿಸಿಕೊಟ್ಟಿದ್ದಾರೆ. ಜೊತೆಗೆ ಸಿನಿಮಾದಲ್ಲಿ ನಟರ ನಟನೆಯೂ ಬಹಳ ಚೆನ್ನಾಗಿದೆ. ಆದರೆ ಸಿನಿಮಾದ ಉದ್ದ ಹಾಗೂ ಹಿಡಿತವಿಲ್ಲದ ನಿರೂಪಣೆ ಸಿನಿಮಾದ ಮುಖ್ಯ ಋಣಾತ್ಮಕ ಅಂಶವಾಗಿ ಕಾಡುತ್ತದೆ.

  Rating:
  3.0/5

  ಸಿನಿಮಾ ಪ್ರಾರಂಭವಾಗುವುದು ರೆಕ್ಕೆಯ ಪುಕ್ಕವೊಂದು ಹಾರುತ್ತಾ ಬಂದು ಸಿಖ್ ವ್ಯಕ್ತಿಯೊಬ್ಬನ ಕೊಳೆಯಾದ ಬೂಟಿನ ಮೇಲೆ ಕುಳಿತುಕೊಳ್ಳುವ ಮೂಲಕ. ಅದುವೇ ಲಾಲ್ ಸಿಂಗ್ ಚಡ್ಡ. ಆತ ತನ್ನ ಪ್ರೀತಿ ಪಾತ್ರರಾಧವರನ್ನು ಭೇಟಿಯಾಗಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆ. ಆತನ ಜೊತೆಯಲ್ಲಿ ಸ್ವೀಟ್ ಬಾಕ್ಸ್‌ ಇದೆ ಆದರೆ ಅದರಲ್ಲಿ ಗೋಲ್ಗಪ್ಪ ತುಂಬಿದೆ. ಜೊತೆಗೊಂದು ಬಾಟಲಿಯಲ್ಲಿ ಮಸಾಲೆ ಭರಿತ ಪಾನಿ ಇಟ್ಟುಕೊಂಡಿದ್ದಾನೆ. ಲಾಲ್ ಸಿಂಗ್ ತನ್ನೆದುರು ಕುಳಿತ ವ್ಯಕ್ತಿಯೊಂದಿಗೆ ತನ್ನ ಜೀವನದ ಬಗ್ಗೆ ಮಾತನಾಡಲು ಶುರು ಮಾಡುತ್ತಾನೆ.

  'ಲಾಲ್ ಸಿಂಗ್ ಚಡ್ಡ' ಸಿನಿಮಾದ ಮೊದಲಾರ್ಧದ ಹಲವು ಭಾಗ ಆತನ ಬಾಲ್ಯದ ಕತೆಗಳು, ಆತನ ತಾಯಿ ಹಾಗೂ ಆತನ ಬಾಲ್ಯ ಸ್ನೇಹಿತೆಯ ಕತೆಗಳು ತುಂಬಿವೆ. ಅದರ ಬಳಿಕ ಲಾಲ್ ಸಿಂಗ್ ಚಡ್ಡ ತನ್ನ ಜೀವನದ ಕಷ್ಟದ ದಿನಗಳು, ರೂಪಾ ಜೊತೆಗಿನ ತನ್ನ ಸಂಬಂಧ, ಅವನ ಮಿಲಿಟರಿ ಗೆಳೆಯ ಬಾಲರಾಜು ಬೋಡಿ ಮತ್ತು ಮೊಹಮ್ಮದ್, ಇನ್ನಿತರರ ಜೊತೆಗಿನ ಬಂಧ ಆತನಿಗೆ ಜೀವನದ ಬಗ್ಗೆ ಕಲಿಸುವ ಪಾಠಗಳ ಬಗ್ಗೆ ಇದೆ. 'ಜೀವನ ಗೋಲ್ಗಪ್ಪ ರೀತಿ. ಹೊಟ್ಟೆ ತುಂಬಿದರೂ ಮನಸ್ಸು ತುಂಬುವುದಿಲ್ಲ' ಎಂಬುದನ್ನು ಲಾಲ್ ಸಿಂಗ್ ಅರ್ಥ ಮಾಡಿಕೊಳ್ಳುತ್ತಾನೆ.

  ಭಾರತದ ಇತಿಹಾಸ, ಮುಖ್ಯ ಘಟನೆಗಳ ಅಳವಡಿಕೆ

  ಭಾರತದ ಇತಿಹಾಸ, ಮುಖ್ಯ ಘಟನೆಗಳ ಅಳವಡಿಕೆ

  ಆಮಿರ್ ಖಾನ್ ನಟನೆಯ 'ಸೀಕ್ರೆಟ್ ಸೂಪರ್‌ಸ್ಟಾರ್' ನಿರ್ದೇಶಿಸಿದ್ದ ಅದ್ವೈತ್ ಚಂದನ್, ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕ್ಲಾಸಿಕ್ ಸಿನಿಮಾ 'ಫಾರೆಸ್ಟ್‌ ಗಂಪ್' ಅನ್ನು ಭಾರತೀಯ ಸಂಸ್ಕೃತಿಗೆ ಚೆನ್ನಾಗಿ ಒಗ್ಗಿಸಿದ್ದಾರೆ ಚಿತ್ರಕತೆ ಬರೆದಿರುವ ಅತುಲ್ ಕುಲಕರ್ಣಿ. ಕತೆಯಲ್ಲಿ ಭಾರತೀಯ ಸಂಸ್ಕೃತಿ, ಇತಿಹಾಸದ ಅಂಶಗಳನ್ನು ಸೇರಿಸಿದ್ದಾರೆ. ಶಾರುಖ್ ಖಾನ್‌ಗೆ ಅವರ ಐಕಾನಿಕ್ ಸ್ಟೆಪ್ ಅನ್ನು ಕಲಿಸುವದರಿಂದ ಹಿಡಿದು, ಬಾಲರಾಜು ನೆನಪಲ್ಲಿ 'ರೂಪ' ಒಳ ಉಡುಪು ಬ್ರ್ಯಾಂಡ್ ಸ್ಥಾಪಿಸುವುದರ ವರೆಗೆ ಭಾರತೀಯರಿಗೆ ಚಿರಪರಿಚಿತವಾದ ಇವೆಂಟ್‌ಗಳನ್ನು ಸಿನಿಮಾದ ಕತೆಯಲ್ಲಿ ಅತುಲ್ ಸೇರಿಸಿದ್ದಾರೆ.

  ನಿಧಾನವಾದ ನಿರೂಪಣೆ

  ನಿಧಾನವಾದ ನಿರೂಪಣೆ

  ಮನೊರಂಜನೆಗೆ ಅಗತ್ಯವಾದ ಅಂಶಗಳನ್ನು ಚೆನ್ನಾಗಿಯೇ ಸೇರಿಸಿರುವ ನಿರ್ದೇಶಕ ಹಿಂದೆ ಬಿದ್ದಿರುವುದು ಅದರ ಭಾವುಕ ದೃಶ್ಯಗಳಲ್ಲಿ. ಹಲವು ಸೆಂಟಿಮೆಂಟ್ ದೃಶ್ಯಗಳು ಸಿನಿಮಾದಲ್ಲಿ ಇವೆಯಾದರೂ ಅವು ಯಾವುವೂ ಸಹ ಪ್ರೇಕ್ಷಕನನ್ನು ಆವರಿಸಿಕೊಳ್ಳುವಷ್ಟು ಪ್ರಭಾವಶಾಲಿಯಾಗಿಲ್ಲ. ಬಹಳ ನಿಧಾನವಾದ ನಿರೂಪಣಾ ಶೈಲಿ ಕೆಲವೊಮ್ಮೆ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷಿಸುತ್ತದೆ.

  ಆಮಿರ್-ಕರೀನಾ ನಟನೆ ಚೆನ್ನಾಗಿದೆ

  ಆಮಿರ್-ಕರೀನಾ ನಟನೆ ಚೆನ್ನಾಗಿದೆ

  ಲಾಲ್ ಸಿಂಗ್ ಚಡ್ಡ ಆಗಿ ಆಮಿರ್ ಖಾನ್ ಅಭಿನಯ ಚೆನ್ನಾಗಿದೆ. ಸಿನಿಕತನ, ವ್ಯಂಗ್ಯ ಗೊತ್ತಿಲ್ಲದ ತೀರ ಮುಗ್ಧ ಪಂಜಾಬಿ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ ಆಮಿರ್. ಆದರೆ ಅವರ ಪಂಜಾಬಿ ಸಂಭಾಷಣೆ ಕೆಲವು ಕಡೆ ಹಳಿ ತಪ್ಪುತ್ತದೆ. ಇನ್ನು ನಟಿ ಕರೀನಾ, ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿದ್ದು, ನನ್ನಲ್ಲಿ ಇನ್ನೂ ಅಭಿನಯ ಬಾಕಿ ಇದೆ ಎಂದು ಒತ್ತಿ ಹೇಳಿದ್ದಾರೆ. ಅವರ ಪಾತ್ರದೊಟ್ಟಿಗೆ ಪ್ರೇಕ್ಷಕ ಕನೆಕ್ಟ್ ಆಗುತ್ತಾನೆ. ಇನ್ನು ನಾಗ ಚೈತನ್ಯ ಬಾಲಿವುಡ್ ಪದಾರ್ಪಣೆ ಅದ್ಭುತ ಎನ್ನುವಂತಿಲ್ಲ. ಕೆಲವು ಪಂಚಿಂಗ್ ಸಂಭಾಷಣೆ ಅವರಿಗೆ ಇದೆಯಾದರೂ ಅವರ ಪಾತ್ರ ಸಿನಿಮಾದಲ್ಲಿ ಸ್ಟಾಂಡ್ ಅಲೋನ್ ಆಗಿ ನಿಲ್ಲುವುದಿಲ್ಲ.

  ಕ್ಯಾಮೆರಾ ಕೆಲಸ, ಸಂಗೀತ ಚೆನ್ನಾಗಿದೆ

  ಕ್ಯಾಮೆರಾ ಕೆಲಸ, ಸಂಗೀತ ಚೆನ್ನಾಗಿದೆ

  ಸಿನಿಮಾದ ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತದೆ. ಭಿನ್ನ ಭಿನ್ನ ಭೂಪ್ರದೇಶವನ್ನು ಚೆನ್ನಾಗಿ ಸೆರೆ ಹಿಡಿದಿದ್ದಾರೆ ಸತ್ಯಜಿತ್ ಪಾಂಡೆ. ಪಂಜಾಬಿನ ಗೋಧಿ ತೋಟಗಳು, ದೇಶದ ವಿವಿಧ ರಾಜ್ಯಗಳಲ್ಲಿ ಲಾಲ್ ಸಿಂಗ್ ಚಡ್ಡಾ ಮಾಡುವ ಜಾಗಿಂಗ್ ಎನ್ನಲವನ್ನೂ ಸುಂದರವಾಗಿ ಸೆರೆಹಿಡಿಯಲಾಗಿದೆ. ಯುದ್ಧದ ಸನ್ನಿವೇಶಗಳೂ ಸಹ ಚೆನ್ನಾಗಿವೆ. ಇನ್ನು ಸಂಗೀತವೂ ಸಹ ಕತೆಗೆ ತಕ್ಕಂತಿದೆ. ಹಾಡುಗಳು ಸಹ. ಅದರಲ್ಲಿಯೂ ಸೋನು ನಿಗಮ್ ಹಾಡಿರುವ ಹಾಡೊಂದು ಬಹು ಸಮಯ ಗುನುಗುವಂತಿದೆ.

  ಸಿನಿಮಾ ಹೆಚ್ಚು ಉದ್ದವಿದೆ

  ಸಿನಿಮಾ ಹೆಚ್ಚು ಉದ್ದವಿದೆ

  ಸಿನಿಮಾದಲ್ಲಿ ದೃಶ್ಯವೊಂದಿದೆ. ನಾಲ್ಕು ವರ್ಷಗಳ ಕಾಲ ಓಡುವ ಲಾಲ್ ಸಿಂಗ್ ಚಡ್ಡ ಒಂದು ದಿನ ಹಠಾತ್ತನೆ ನಿಂತು ಬಿಡುತ್ತಾನೆ ಆಗ ಪತ್ರಕರ್ತನೊಬ್ಬ ಪ್ರಶ್ನೆ ಕೇಳಿದಾಗ. ''ನನಗೆ ಸುಸ್ತಾಗಿದೆ. ನಾನು ಮನೆಗೆ ಹೋಗಲು ಇಚ್ಛಿಸುತ್ತೇನೆ' ಎನ್ನುತ್ತಾನೆ. ಅದೇ ರೀತಿ ಭಾವನೆ ಸಿನಿಮಾ ನೋಡುವ ಪ್ರೇಕ್ಷಕನಿಗೂ ಬಂದಿರುತ್ತದೆ ಅದಕ್ಕೆ ಕಾರಣ ಸಿನಿಮಾದ ಉದ್ದ. ಸಿನಿಮಾ ಬಹಳ ಉದ್ದ ಇದೆ. ಕೆಲವೆಡೆ ಅನವಶ್ಯಕವಾಗಿ ಎಳೆಯಲಾಗಿದೆ. ಆದರೆ ಕೆಲವು ನಟರ ಒಳ್ಳೆಯ ಅಭಿನಯ ಪ್ರೇಕ್ಷಕನನ್ನು ಹಿಡಿದಿಡುತ್ತದೆ. ನಾವು ಐದರಲ್ಲಿ ಮೂರು ಸ್ಟಾರ್‌ಗಳನ್ನು ಈ ಸಿನಿಮಾಕ್ಕೆ ನೀಡುತ್ತೇವೆ.

  English summary
  Aamir Khan starer Laal Singh Chaddha Hindi movie review in Kannada.
  Friday, August 12, 2022, 10:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X