twitter
    For Quick Alerts
    ALLOW NOTIFICATIONS  
    For Daily Alerts

    Aana Movie Review: ಅದ್ಭುತ ಕಲ್ಪನೆಗೆ ತಕ್ಕಂತೆ ಗಟ್ಟಿ ಆಗಿರಬೇಕಿತ್ತು 'ಆನ'!

    |

    'ಆನ' ಸಿನಿಮಾ ಟೈಟಲ್ ಮೂಲಕವೇ ಗಮನ ಸೆಳೆದಿದೆ. ಈ ಚಿತ್ರ ನಾಯಕಿ ಪ್ರಧಾನ ಸಿನಿಮಾ. ನಟಿ ಅದಿತಿ ಪ್ರಭುದೇವ ಆಗಾಗ ವಿಭಿನ್ನ ಪಾತ್ರ ಪ್ರಯೋಗ ಮಾಡಲು ಮುಂದೆ ಬರುತ್ತಾರೆ. ಆನ ಚಿತ್ರ ಕೂಡ ಅಂತಹ ಸಾಲಿಗೆ ಸೇರುವ ಸಿನಿಮಾ. ಆನ ಅಂಥ ಸಿನಿಮಾಗಳನ್ನು ಮಾಡಲು ತಾರೆಯರು ಒಪ್ಪಿಕೊಳ್ಳುವುದು ಉತ್ತಮ ವಿಚಾರ. ಸದ್ಯ ಸಿನಿಮಾ ರಿಲೀಸ್‌ ಆಗಿದೆ. ಪ್ಯಾನ್‌ ಇಂಡಿಯಾ ಸಿನಿಮಾ 'ಪುಷ್ಪ' ಜೊತೆಗೆ ಕನ್ನಡದ ಆನ ತೆರೆಗೆ ಬಂದಿದೆ.

    ಆನ ಸಿನಿಮಾ ಟೀಸರ್‌, ಟ್ರೇಲರ್‌ ಇದೊಂದು ಸಸ್ಪೆನ್ಸ್ ಥ್ರೀಲ್ಲರ್‌ ಸಿನಿಮಾ ಎನ್ನುವ ಸುಳಿವು ಕೊಟ್ಟಿದ್ದವು. ಜೊತೆ ಜೊತೆಗೆ 'ಆನ' ಒಂದು ಹಾರರ್‌ ಚಿತ್ರ ಎನ್ನುವ ಟಾಕ್‌ ಕೂಡ ರಿವೀಲ್ ಆಗಿತ್ತು. ಆದರೆ ಸಿನಿಮಾ ತಂಡ ಈ ಚಿತ್ರದ ಭಾರತೀಯ ಸೂಪರ್‌ ವುಮನ್‌ ಚಿತ್ರ ಎಂದಿತ್ತು. ಅಂದರೆ ಅದಿತಿ ಪ್ರಭುದೇವ ಆನ ರೂಪದಲ್ಲಿ ಸೂಪರ್‌ ವುಮೆನ್‌ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಿನಿಮಾ ರಿಲೀಸ್‌ ಆಗಿದೆ. ಹಾಗಾಗಿ ಸಿನಿಮಾ ಹೇಗಿದೆ ಎನ್ನುವ ವಿಮರ್ಶೆ ಇಲ್ಲಿದೆ. ಮುಂದೆ ಓದಿ...

    'ಆನ' ಚಿತ್ರದ ಬಗ್ಗೆ ಹಲವು ಉದ್ದಿಗಳು ಹರಿದಾಡಿವೆ. ಆದರೆ ಈ ಚಿತ್ರದವನ್ನು ಚಿತ್ರಮಂದಿರದಲ್ಲಿ ಕೂತು ನೋಡಿದಾಗ ತಿಳಿಯುವುದು. ಇದು ಒಂದು ಸೂಪರ್‌ ನ್ಯಾಚುರಲ್‌ ಕಥೆಯುಳ್ಳ ಸಿನಿಮಾ ಎನ್ನುವುದು.

    2021ರ ಲಾಕ್‌ನಲ್ಲಿ ನಡೆಯುವ ಕಾಲ್ಪನಿಕ ಕಥೆ 'ಆನ'!

    2021ರ ಲಾಕ್‌ನಲ್ಲಿ ನಡೆಯುವ ಕಾಲ್ಪನಿಕ ಕಥೆ 'ಆನ'!

    ಕೊರೋನಾ ಬಂದು ಲಾಕ್‌ಡೌನ್‌ ಆದಾಗ ಲಕ್ಷ, ಲಕ್ಷ ಸಂಬಳ ತೆಗೆದುಕೊಳ್ಳುತ್ತಾ ಇದ್ದ ನಾಲ್ಕು ಜನ ಕಳ್ಳತನಕ್ಕೆ ಇಳಿಯುತ್ತಾರೆ. ಸಾಕಷ್ಟು ಹರ ಸಾಹಸದ ಬಳಿಕ ಈ ನಾಲ್ವರು ಒಂದು ನಿರ್ಧಾರಕ್ಕೆ ಬರ್ತಾರೆ. ಅಲ್ಲಿ ಅವರು ಆನ ಕೈಗೆ ಸಿಗ್ತಾರೆ. ಮಧ್ಯಂತರದ ತನಕ ಆನ ಯಾರು ಎನ್ನುವ ಕುತೂಹಲದೊಂದಿಗೆ ಸಿನಿಮಾ ಆಗುತ್ತದೆ. ನಂತರ ಆನ ಯಾರು ಏನ್ನುವುದು ರಿವೀಲ್‌ ಆಗುತ್ತದೆ. ಇದು ಮೊದಲ ಭಾಗದ ಅಂತ್ಯ. ಇಲ್ಲಿಂದ ಸಿನಿಮಾದ ನಿಜವಾದ ಕಥೆ ಆರಂಭ ಆಗುತ್ತದೆ. ಇಲ್ಲಿಂದ ಸಂಪೂರ್ಣವಾಗಿ 'ಆನ' ಸುತ್ತಲು ಸಿನಿಮಾ ಸುತ್ತುತ್ತದೆ.

    ಆನ ಆಗಿ ಸ್ಕ್ರೀನ್‌ ಮೇಲೆ ಅದಿತಿ 'ಅಬ್ಬರ'!

    ಆನ ಆಗಿ ಸ್ಕ್ರೀನ್‌ ಮೇಲೆ ಅದಿತಿ 'ಅಬ್ಬರ'!

    ಆನ ಸಿನಿಮಾದ ದೊಡ್ಡ ಪ್ಲಸ್‌ ಪಾಯಿಂಟ್‌ ಅಂದರೆ ನಟಿ ಅದಿತಿ ಪ್ರಭುದೇವ. ಅದಿತಿ ಎಂಟ್ರಿ ತನಕ ಸಿನಿಮಾ ಹಾಗೆ ಸುಮ್ಮನೆ ತೇಲಿಸಿದ್ದಾರೆ ನಿರ್ದೇಶಕ ಮನೋಜ್‌ ಪಿ ನಡಲು ಮನೆ. ಮೊದಲಾರ್ಧದಲ್ಲಿ ನಾಲ್ಕು ಜನ ಸ್ನೇಹಿತರ ಕಹಾನಿಯನ್ನು ಎಳೆದು, ಎಳೆದು ಹೇಳಿದ್ದಾರೆ. ಅದಿತಿ ಎಂಟ್ರಿ ತನಕ ಪ್ರೇಕ್ಷಕರನ್ನು ಹಿಡಿದು ಕೂರಿಸುವುದೇ ದೊಡ್ಡ ವಿಚಾರ. ಹಾಗೆ ತಾಳ್ಮೆ ಇಂದ ಕಾದು ಕುಳಿತರೆ ಸಿನಿಮಾದ ಮತ್ತೊಂದು ಮಜಲು ತೆರೆದು ಕೊಳ್ಳುತ್ತದೆ. ಅದಿತಿ ಪ್ರಭುದೇವ ಅವರು ಎಂದಿನಂತೆ ತಮ್ಮ ಅದ್ಭುತ ಅಭಿನಯ ತೋರಿದ್ದಾರೆ. ಅದಿತಿಗೆ ಹೆಚ್ಚಿನ ಡೈಲಾಗ್ಸ್‌ ಇಲ್ಲ. ಆದರೆ ಅದಿತಿ ಕಣ್ಣಿನಲ್ಲೇ ಕೊಲ್ಲುವ ಹಾಗೆ ಅಭಿನಯಿದ್ದಾರೆ.

    ಫ್ಲ್ಯಾಶ್‌ಬ್ಯಾಕ್‌ 'ಆನ' ಕಥೆ ಅನಾವರಣ!

    ಫ್ಲ್ಯಾಶ್‌ಬ್ಯಾಕ್‌ 'ಆನ' ಕಥೆ ಅನಾವರಣ!

    ಈ ಚಿತ್ರದಲ್ಲಿ ನಟಿ ಅದಿತಿ ಪಾತ್ರದ ಹೆಸರು ಆನ. ಹಾಗಾಗಿ ಆನ ಯಾರು ಏನ್ನುವುದು ಸೆಕೆಂಡ್‌ ಆಫ್‌ನಲ್ಲಿ ರಿವೀಲ್‌ ಆಗುತ್ತದೆ. ಫ್ಲ್ಯಾಶ್‌ ಬ್ಯಾಕ್‌ನಲ್ಲಿ ಬರುವ ಆನ ಹುಟ್ಟಿನ ಕಥೆ ಅದ್ಭುತ ಎನಿಸುವಷ್ಟು ಚೆನ್ನಾಗಿದೆ. ಅಂದರೆ ನಿರ್ದೇಶಕರ ಕಲ್ಪನೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಆದರೆ ನಾಲ್ಕು ಜನ ಹುಡುಗರ ಪಾತ್ರ ಕಿರಿ ಕಿರಿ ಉಂಟು ಮಾಡುತ್ತದೆ. ಅವರು ಕಿರುಚಾಡುವುದಕ್ಕಿಂದ ಅಭಿನಯಿಸಬೇಕಿತ್ತು ಎನಿಸುತ್ತದೆ. ಆನ ಅಬ್ಬರಕ್ಕೆ ಹೆದರಿ ಕಿರುಚಾಡುವ ಈ ಹುಡುಗರ ಅಬ್ಬರ ಸಿನಿಮಾ ಟ್ರ್ಯಾಕ್‌ನಲ್ಲಿದ್ದ ಪ್ರೇಕ್ಷಕರಿಗೆ ಕಿರಿಕಿರಿ ಅನಿಸುತ್ತೆ. ಅದನ್ನ ಬಿಟ್ಟರೆ ಇದು ಕನ್ನಡದ ಚಿತ್ರರಂಗದಲ್ಲಿ ಬಂದ ವಿಭಿನ್ನ ಕಲ್ಪನೆಯುಳ್ಳ ಸಿನಿಮಾಗಳ ಸಾಲಿಗೆ ಸೇರುತ್ತದೆ. ಇಂತಹ ಕಥೆಯನ್ನು ಮಾಡುವ ಧೈರ್ಯ ಮಾಡಿರುವ ನಿರ್ದೇಶಕನಿಗೆ ಪ್ರಶಂಸೆ ಸಲ್ಲಬೇಕು.

    ಕಲ್ಪನೆಗೆ ತಕ್ಕಂತೆ ಸಿನಿಮಾ ಟೆಕ್ನಿಕಲಿ ಗಟ್ಟಿ ಆಗಿಲ್ಲ!

    ಕಲ್ಪನೆಗೆ ತಕ್ಕಂತೆ ಸಿನಿಮಾ ಟೆಕ್ನಿಕಲಿ ಗಟ್ಟಿ ಆಗಿಲ್ಲ!

    ಈ ರೀತಿಯ ಸಿನಿಮಾಗಳಿಗೆ ಗ್ರಾಫಿಕ್‌ ಕೆಲಸ ಅದ್ಭುತವಾಗಿ ಇರಬೇಕು. ಆಗಲೇ ಸಿನಿಮಾದ ಕಥೆಗೆ ಒಂದು ತೂಕ ಬರುತ್ತೆ. ಇದು ಹೇಳಿ ಕೇಳಿ ಸೂಪರ್‌ ನ್ಯಾಚುರಲ್‌ ಅಂಶ ಉಳ್ಳ ಕಥೆ. ಹಾಗಾಗಿ ಸಿನಿಮಾಗೆ ಗ್ರಾಫಿಕ್ಸ್‌ ಚೆನ್ನಾಗಿ ಮೂಡಿ ಬರುವುದು ಅತ್ಯಗತ್ಯ. ಈ ಬರುವ ಸಿನಿಮಾಗಳಲ್ಲಿ ಅತ್ಯದ್ಭುತ ಎನಿಸುವಂತಹ ಗ್ರಾಫಿಕ್ಸ್‌ ಇರುತ್ತೆ. ಸಿನಿಮಾ ನೋಡುತ್ತ ಪ್ರೇಕ್ಷಕರು ಬೇರೆ ಲೋಕಕ್ಕೆ ಹೋಗಿ ಬಿಡುತ್ತಾರೆ. ಸಿನಿಮಾವನ್ನು ಟೆಕ್ನಿಕಲ್‌ ಆಗಿ ಅಳೆದು ನೋಡುತ್ತಾರೆ ಪ್ರೇಕ್ಷಕರು. 'ಆನ' ಚಿತ್ರದಲ್ಲಿ ಬರುವ ಕಲ್ಪನೆಗೆ ಗ್ರಾಫಿಕ್‌ ಜೀವ ತುಂಬಿಲ್ಲ. ಅದು ಬಿಟ್ಟರೆ ಸಿನಿಮಾದ ಉದಯ್‌ ಲೀಲಾ ಅವರು ಕ್ಯಾಮೆರಾ ವರ್ಕ್‌ ಚೆನ್ನಾಗಿ ಮೂಡಿ ಬಂದಿದೆ. ಸಂಗೀತ ಕೂಡ ಚೆನ್ನಾಗಿ ಹೊಂದಿಕೊಂಡಿದೆ.

    ಕ್ಲೈಮ್ಯಾಕ್‌ನಲ್ಲಿ 'ಆನ' ಭಾಗ ಎರಡರ ಸುಳಿವು!

    ಕ್ಲೈಮ್ಯಾಕ್‌ನಲ್ಲಿ 'ಆನ' ಭಾಗ ಎರಡರ ಸುಳಿವು!

    ಇನ್ನು ಆನ ಚಿತ್ರ ಕ್ಲೈಮ್ಯಾಕ್ಸ್‌ನಲ್ಲಿ ದೊಡ್ಡ ಟ್ವಿಸ್ಟ್‌ ಇದೆ. ಆನ ಭಾಗ 2 ಬರುವ ಬಗ್ಗೆ ಸುಳಿವು ನೀಡಲಾಗಿದೆ. ಆನ ಒಬ್ಬಳು ಸೂಪರ್‌ ನ್ಯಾಚುರಲ್‌ ಪವರ್‌ವುಳ್ಳ ಹುಡುಗಿ. ಈ ಭಾಗದಲ್ಲಿ ಆನ ಪಾತ್ರವನ್ನು ಪರಿಚಯಿಲಾಗಿದೆ. ಮುಂದಿನ ಭಾಗದಲ್ಲಿ ಆನ ತನ್ನ ಶಕ್ತಿಗಳಿಂದ ಏನು ಮಾಡ್ತಾಳೆ ಎನ್ನುವುದನ್ನು ಹೇಳಲಾಗುತ್ತದೆ. ಚಿತ್ರದಲ್ಲಿ ಅದಿತಿ ಪ್ರಭುದೇವ ಜೊತೆಗೆ ಅಪ್ಪನ ಪಾತ್ರದಲ್ಲಿ ಸುನೀಲ್‌ ಪುರಾಣಿಕ್ ಅಭಿನಯಿಸಿದ್ದಾರೆ. ಹಾಗೆ ಚೇತನ್‌ ಗಂಧರ್ವ್, ರನ್ವಿಕ್‌ ಶಿವಕುಮಾರ್, ವಿಕಾಸ್ ಉತ್ತಯ್ಯ, ವರುಣ್ ಅಮರಾವತಿ, ಸಮರ್ಥ ನರಸಿಂಹರಾಜು ಮುಂತಾದವರು ಅಭಿನಯಿಸಸಿದ್ದಾರೆ.

    ಒಟ್ಟಾರೆ ಈ ಸಿನಿಮಾದ ಕಥೆ ಮತ್ತು ಕಲ್ಪನೆ ಸೂಪರ್‌ ಅನಿಸುತ್ತೆ. ಸಿನಿಮಾ ಗಳಿಕೆ ಮಾಡುತ್ತದೆಯೋ ಇಲ್ಲವೋ? ಇಂತಹ ಇಂದು ಸಿನಿಮಾ ಮಾಡಲು ಈ ತಂಡ ಮುಂದಾಗಿರುವುದು ಕನ್ನಡ ಚಿತ್ರಗದಲ್ಲಿ ಉತ್ತಮ ಬೆಳವಣಿಗೆ. 'ಆನ' ಗಾಂಧಿ ನಗರದ ಕ್ಲೀಷೆಗಳನ್ನು ಬದಿಗೊತ್ತಿ ಬಂದಿರುವ ಸಿನಿಮಾ.

    Rating:
    3.0/5

    English summary
    Aana Kannada Movie Released: Movie Review Is Here
    Saturday, December 18, 2021, 8:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X